ರಾಣೆಬೆನ್ನೂರ

ಮಜ್ದಾ ಲಾರಿಗಳಿಗೆ ಮರಳು ಸಾಗಾಣಿಕೆಯ ಪರವಾನಿಗೆ ನೀಡಲು ಆಗ್ರಹ : ಓಲೇಕಾರ್

ಮಜ್ದಾ ಲಾರಿಗಳಿಗೆ ಮರಳು ಸಾಗಾಣಿಕೆಯ ಪರವಾನಿಗೆ ನೀಡಲು ಆಗ್ರಹ :  ಓಲೇಕಾರ್

ರಾಣೇಬೆನ್ನೂರು ಜು 1 ಸರ್ಕಾರದ ಅಧೀನಕ್ಕೆ ಒಳಪಟ್ಟ ಹಟ್ಟಿ ಗಣಿಗಾರಿಕಾ ಕಂಪನಿಯು ಬೇಕಾಬಿಟ್ಟಿಯಾಗಿ ಮರಳು  ಸಾಗಾಣಿಕೆಯ ಪರವಾನಿಗೆ ನೀಡುತ್ತಿದೆ ಎಂದು  ರಾಣೆಬೆನ್ನೂರು ತಾಲೂಕಿನ ಮರಳು ಸಾಗಾಣಿಕೆಯ ಲಾರಿ ಮತ್ತು ಮಜಡಾ ಮಾಲಕರ ಮತ್ತು ಹಮಾಲರ ಸಂಘದ  ಕಾರ್ಯದರ್ಶಿ ಮಂಜುನಾಥ್ ಓಲೇಕಾರ್ ಹೇಳಿದರು,  ಅವರು ಶುಕ್ರವಾರ  ನಗರದ ಪ್ರವಾಸಿ ಮಂದಿರದಲ್ಲಿ ನಡೆದ  ಪತ್ರಿಕಾಗೋಷ್ಠಿಯಲ್ಲಿ ಗಣಿಗಾರಿಕೆ ಇಲಾಖೆಯ, ವಿರೋಧಿ ನೀತಿ  ಧೋರಣೆ ಕುರಿತು ಮಾತನಾಡಿದರು. ಗಣಿಗಾರಿಕೆ ಮತ್ತು ಭೂ ವಿಜ್ಞಾನ ಇಲಾಖೆಯು ಮರಳು ಗಣಿಗಾರಿಕೆಯ ಕುರಿತು ನಿಗದಿಪಡಿಸಿದ ನಿಯಮಗಳನ್ನು ಗಾಳಿಗೆ ತೂರಿ ಜಿಪಿಎಸ್ ಮತ್ತು ತಾಂತ್ರಿಕತೆಯ ಕುಂಟು ನೆಪವೂಡ್ಡಿ ಟಿಪ್ಪರ್ ಗಳಿಗೆ ಮಾತ್ರ ಪರವಾನಿಗೆ  ನೀಡುತ್ತಿದೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಎಲ್ಲಾ ನಿಯಮಗಳನ್ನು ಪಾಲಿಸುವ, ಜಿಪಿಎಸ್ ಹೊಂದಿದ ಮಜ್ಡಾ ಲಾರಿಗಳಿಗೆ 5 ಟನ್ ಪಾಸ್ ಕೊಡಲು ಹಿಂದೇಟು ಹಾಕುತ್ತಿರುವುದು ಸರಿಯಲ್ಲ. ಇದರ ಮೂಲಕ  ಸ್ಥಳೀಯ ಮರಳು ಸಾಗಾಣಿಕೆದಾರರಿಗೆ ಪರವಾನಿಗೆ ಕೊಡುವಲ್ಲಿ ತಾರತಮ್ಯ ಎಸೆಗುತ್ತಿದ್ದು, ಇದರಿಂದ ತುಂಗಭದ್ರಾ ನದಿ ತೀರದ ಸಕ್ರಮ ಮರಳು ದಂಧೆಯನ್ನು  ನೆಚ್ಚಿಕೊಂಡ  ನೂರಾರು ಮಜಡಾ ಮಾಲೀಕರ ಮತ್ತು ಕಾರ್ಮಿಕರ ಕುಟುಂಬಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದಂತಾಗುತ್ತದೆ, ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಇದಕ್ಕೆ ಸೂಕ್ತ ಪರಿಹಾರ ನೀಡಬೇಕು, ಈಗಾಗಲೇ ಜಿಪಿಎಸ್ ಹೊಂದಿದ ಟಿಪ್ಪರ್ ಲಾರಿಗಳಿಗೆ ನೀಡುವಂತೆ  ಮಜಡಾ,ಲಾರಿಗಳಿಗೂ ನಿಗದಿತ ಪಾಸ್ ನೀಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಗಣಿಗಾರಿಕೆ ಮತ್ತು ಅದರ ನಿಯಮಗಳ ವಿರುದ್ಧ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.  ಪತ್ರಿಕಾಗೋಷ್ಠಿಯಲ್ಲಿ ಕರಬಸಪ್ಪ ಬಾರ್ಕಿ, ಸುರೇಶ್ ಎಲಿಗಾರ್, ಮಹೇಶ್ ಪೂಜಾರ್, ಕರಬಸಪ್ಪ ಹೂಗಾರ್, ಗಂಗಪ್ಪ ಕುಪ್ಪೇಲೂರು, ಶಿವಪ್ಪ ಹರನಗಿರಿ, ಸೇರಿದಂತೆ  ನೂರಾರು ಮಾಲಕರು ಮತ್ತು ಕಾರ್ಮಿಕರು ಉಪಸ್ಥಿತರಿದ್ದರು.

ಸುದ್ದಿ ಓದಿ