ಇಂಡಿ

ವಿದ್ಯಾರ್ಥಿ ವೇತನ ಕೂಡಲೇ ಬಿಡುಗಡೆ ಮಾಡುವಂತೆ ಆಗ್ರಹಿಸಿ ಮನವಿ

ವಿದ್ಯಾರ್ಥಿ ವೇತನ ಕೂಡಲೇ ಬಿಡುಗಡೆ ಮಾಡುವಂತೆ ಆಗ್ರಹಿಸಿ ಮನವಿ

ಇಂಡಿ: 2021-22 ನೇ ಸಾಲಿನ ಶೈಕ್ಷಣಿಕ ವರ್ಷದ ಬಾಕಿ ಇರುವ ವಿದ್ಯಾರ್ಥಿ ವೇತನ ಕೂಡಲೇ ಬಿಡುಗಡೆ ಮಾಡುವಂತೆ ಆಗ್ರಹಿಸಿ ಗುರುವಾರ ಎಬಿವಿಪಿ ಕಾರ‌್ಯಕರ್ತರು  ತಾಲೂಕು ವಿಕಾಸಸೌಧ ಎದುರು ಪ್ರತಿಭಟನೆ ನಡೆಸಿ ತಹಸೀಲ್ದಾರ ನಾಗಯ್ಯ ಹಿರೇಮಠರವರಿಗೆ ಮನವಿ ಸಲ್ಲಿಸಿದರು. 

ಎಬಿವಿಪಿ ನಗರ ಕಾರ್ಯದರ್ಶಿ ಈರಣ್ಣ ಸಿಂದಗಿ ಮಾತನಾಡಿ, ಲಕ್ಷಾಂತರ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳು ಪ್ರತಿ ವರ್ಷ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಸಲ್ಲಿಸುತ್ತಾರೆ. ಅದರ ಹಣ ವಿದ್ಯಾರ್ಥಿಗಳಿಗೆ ಅಭ್ಯಾಸಕ್ಕೆ ಅನುಕೂಲವಾಗುತ್ತದೆ. ಆದರೆ ಈ ವರ್ಷ ವಿದ್ಯಾರ್ಥಿ ವೇತನ ಬಿಡುಗಡೆಯಾಗಿರುವದಿಲ್ಲ. ಕಾರಣ ಕೂಡಲೇ ಹಣ ಬಿಡುಗಡೆಗೆ ಆಗ್ರಹಿಸಿದರು. 

ಪ್ರತಿಭಟನೆಯಲ್ಲಿ ಪ್ರಫುಲ ಕಟ್ಟಿಮನಿ, ಶಿವಾಜಿ ಜಾಧವ, ರವಿ ಜಾಧವ, ಆಕಾಶ ಹಡಪದ, ಗಣೇಶ ಹಂಜಗಿ, ಪ್ರಭು ಪೂಜಾರಿ, ಅರವಿಂದ ಕುಂಬಾರ, ಅಶ್ವಿನಿ ಪಾಂಡ್ರೆ ಮತ್ತಿತರಿದ್ದರು.  

ಸುದ್ದಿ ಓದಿ