ರಾಣೆಬೆನ್ನೂರ

ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ರಾಣೇಬೆನ್ನೂರು 15: ತಾಲೂಕಿನಲ್ಲಿ ಬರಗಾಲ ಬಂದು ಎರಡು ತಿಂಗಳಾಯಿತು. ಸಕರ್ಾರ ಇದುವರೆಗೂ ನಯಾ ಪೈಸೆ ರೈತರ ಖಾತೆಗೆ ಹಣ ಹಾಕಿಲ್ಲ. ಕೇಂದ್ರ ಸರ್ಕಾರದ ಮೇಲೆ ರಾಜ್ಯ ಸರ್ಕಾರ ಸಬೊಬೂ ಹೇಳಿಕೊಂಡು ಸಾಗುತ್ತಲಿದೆ. ರಾಜ್ಯ ಸರ್ಕಾರವು ಬಿಟ್ಟಿಭಾಗ್ಯ ಜನರಿಗೆ ಕೊಡುವುದರಿಂದ ಸಾಲ ಮಾಡುತ್ತಿದ್ದಾರೆ. ಹೀಗಾದರೆ ರಾಜ್ಯದ ರೈತರನ್ನು ಯಾವ ರೀತಿ ಕಾಪಾಡುತ್ತಾರೆ ಎಂಬುದು ಸಾರ್ವಜನಿಕರಲ್ಲಿ ಸಂಶಯ ಕಾಡುತ್ತಲಿದೆ ಎಂದು ರಾಜ್ಯ ರೈತ ಹಸಿರು ಸೇನೆಯ ತಾಲೂಕ ಅಧ್ಯಕ್ಷ ಸುರೇಶಪ್ಪ ಹೊನ್ನಪ್ಪಳವರ ಹೇಳಿದರು.

 ಅವರು ಸೋಮವಾರ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಈ ಕುರಿತು ಮಾತನಾಡಿದರು.

ರಾಜ್ಯ ಸರ್ಕಾರ  ರೈತರ ಕಣ್ಣೀರು ಒರೆಸುವ ಕೆಲಸ ಮಾಡುತ್ತಿದ್ದಾರೆ.  ರೈತರ ಬಗ್ಗೆ ಕಾಳಜಿ ತೋರಿಸುತ್ತಿಲ್ಲ. ರಾಜ್ಯ ಸರ್ಕಾರ  ಮಾಡುತ್ತಿರುವುದು ಓಟಿಗಾಗಿ ಎನ್ನುವುದು  ಈಗಾಗಲೇ ಜನರಿಗೆ ಗೊತ್ತಾಗಿದೆ.  ಕಾಂಗ್ರೆಸ್ ಸಸರ್ಕಾರ  ಅಧಿಕಾರಕ್ಕೆ ಜನರು ತಂದಿದ್ದಾರೆ. ಈಗ ಅವರಿಗೆ ಮೋಸ ಮಾಡುತ್ತಿದ್ದಾರೆ. ರಾಜ್ಯಸರ್ಕಾರ  ಎಚ್ಚೆತ್ತುಕೊಂಡು ರೈತರಿಗೆ ಕೇಂದ್ರ ಸರ್ಕಾರದಿಂದ 8000 ಸೇರಿಸಿ ರಾಜ್ಯ ಸರ್ಕಾರ  25,000 ರೈತರ ಖಾತೆಗೆ ಹಣವನ್ನು ಹಾಕಬೇಕು. ಇಲ್ಲದಿದ್ದರೆ ನ. 28ರಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಉಗ್ರವಾಗಿ ಪ್ರತಿಭಟನೆ ಮಾಡಲು ಈಗಾಗಲೇ ಸಿದ್ಧತೆಗಳನ್ನು ನಡೆಸಿದ್ದೇವೆ ಎಂದು ಸರ್ಕಾರ ರಕ್ಕೆ ಎಚ್ಚರಿಕೆ ನೀಡಿದರು.ರಾಜ್ಯ ರೈತ ಹಸಿರು ಸೇನೆಯ ಸಂಚಾಲಕ ಲೋಕೇಶ್ ಸುತಾರ ಅವರು, ಮಾತನಾಡಿ ರಾಜ್ಯದಲ್ಲಿ ರೈತರಿಂದಲೇ ಎಲ್ಲರೂ ಬದುಕುತ್ತಿದ್ದಾರೆ. ರೈತರು ಹೋರಾಟದಲ್ಲಿ ತಮ್ಮ ಜೀವನವನ್ನು ಕಳೆಯುತ್ತಿದ್ದಾರೆ. ಅವರಿಗೆ ನ್ಯಾಯ ಕೊಡಿಸಲು ಸರ್ಕಾರ  ಮುಂದೆ ಬರಬೇಕು. ರೈತರಿಗೆ ವಿಮೆ ಪರಿಹಾರ, ಬರಗಾಲದ ಪರಿಹಾರ ಶೀಘ್ರದಲ್ಲಿ ಅವರ ಖಾತೆಗೆ ಹಾಕಬೇಕು. ಈಗಾಗಲೇ ಹಾವೇರಿ ಜಿಲ್ಲೆಯನ್ನು ಬರಗಾಲ ಎಂದು ಸರ್ಕಾರ  ಘೋಷಣೆ ಮಾಡಿದೆ. ನಮ್ಮ ತಾಲೂಕಿನಲ್ಲಿ ಗೋಶಾಲೆಯನ್ನು ತೆರೆಯಬೇಕು. ರೈತರಿಗೆ ಮೆವಿನ ಕೊರತೆ ಉಂಟಾಗಿದೆ. ಜಿಲ್ಲಾಧಿಕಾರಿಗಳು ಇತ್ತ ಕಡೆಗೆ ಗಮನ ಹರಿಸಿ ರೈತರಿಗೆ ಪರಿಹಾರ ನೀಡಬೇಕು. ಎಂದು ಆಗ್ರಹಿಸಿದರು. ರಾಜ್ಯಕಾರಣಿಗಳು ಎಸಿ ಕಾರಿನಲ್ಲಿ ಓಡಾಡುತ್ತಿರುವುದು ಬಿಟ್ಟು ರೈತರ ಬಗ್ಗೆ ಗಮನ ಹರಿಸಿ ಅವರಿಗೆ ಸೂಕ್ತ ಪರಿಹಾರ ನೀಡುವಲ್ಲಿ ಕೆಲಸ ಮಾಡಬೇಕು. ರಾಜ್ಯದ ಮುಖ್ಯಮಂತ್ರಿಗಳು ಜಿಲ್ಲಾ ಉಸ್ತುವಾರಿಗಳು ಮತ್ತು ಸಚಿವರನ್ನು ಕರೆದು ಅವರಿಗೆ ಜಿಲ್ಲೆಯಲ್ಲಿ ರೈತರ ಪರಿಸ್ಥಿತಿಯನ್ನ ಅಧ್ಯಯನ ಮಾಡಿ ಪರಿಹಾರ ನೀಡುವಂತೆ ಮಾರ್ಗದರ್ಶನ ಮಾಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಹಗಲು ರಾತ್ರಿ ಪ್ರತಿಭಟನೆ ಮಾಡಲಾಗುವುದೆಂದು ಎಚ್ಚರಿಸಿದರು.ಪತ್ರಿಕಾಗೋಷ್ಠಿಯಲ್ಲಿ ಸುರೇಶ್ ಚಳಗೇರಿ, ಹನುಮಂತಪ್ಪ ಬೆಳವಗಿ, ಹುಚ್ಚಪ್ಪ ಮುದ್ದಿ, ಫಕೀರಪ್ಪ ಜಾಡರ, ವೀರನಗೌಡ ಮುದಿಗೌಡರ, ರಮೇಶಗೌಡ ಕರಬಸಳ್ಳನವರ, ಸಿದ್ದಪ್ಪ ಕುದುರಿಹಾಳ ಹಾಗೂ ರೈತ ಮುಖಂಡರು ಭಾಗವಹಿಸಿದ್ದರು.

ಸುದ್ದಿ ಓದಿ