ಕಾಗವಾಡ

ಸಂಚಾರಿ ಕಾಯಂ ಪೀಠ ಸ್ಥಳಾಂತರ ವಿರೋಧಿಸಿ ಪ್ರತಿಭಟನೆ

ಸಂಚಾರಿ ಕಾಯಂ ಪೀಠ ಸ್ಥಳಾಂತರ ವಿರೋಧಿಸಿ ಪ್ರತಿಭಟನೆ

ಶೇಡಬಾಳ 16: ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸಂಚಾರಿ ಕಾಯಂ ಪೀಠದ ಸ್ಥಳಾಂತರವನ್ನು ಪ್ರತಿಭಟಿಸಿ ಹಾಗೂ ಬೆಳಗಾವಿಯಲ್ಲಿ ಮರಳಿ ಸ್ಥಾಪನೆ ಮಾಡುವಂತೆ ಕಾಗವಾಡ ತಾಲೂಕಾ ಅಡ್ವೋಕೆಟ್ ಬಾರ್ ಅಸೋಷಶನ್ ವತಿಯಿಂದ ಕಾಗವಾಡ ಉಪತಹಶೀಲ್ದಾರ ಅಣ್ಣಾಸಾಬ ಕೋರೆ ಹಾಗೂ ಸುಭಾಷ ಅಸೂದೆ ಅವರಿಗೆ ಮನವಿ ಪತ್ರ ಅರ್ಪಿಸಿ ಸರ್ಕಾರವನ್ನು ಒತ್ತಾಯಿಸಲಾಯಿತು.  

ಗುರುವಾರ ದಿ. 16 ರಂದು ಇಲ್ಲಿನ ಅಡ್ವೋಕೆಟ್ ಬಾರ್ ಅಸೋಷಶನ್ ಸಂಘದ ಅಧ್ಯಕ್ಷ ವಾಯ್‌.ಬಿ.ಯಡೂರೆ ಇವರ ನೇತೃತ್ವದಲ್ಲಿ ಕಾಗವಾಡ ವಕೀಲರ ಸಂಘ ಉಪತಹಶೀಲ್ದಾರರಾದ ಅಣ್ಣಾಸಾಬ ಕೋರೆ ಹಾಗೂ ಸುಭಾಷ ಅಸೂದೆ ಅವರಿಗೆ ಮನವಿ ಪತ್ರ ಅರ್ಪಿಸಿದರು.  

ಮನವಿ ಪತ್ರ ಅರ್ಪಿಸಿ ವಾಯ್‌.ಬಿ.ಯಡೂರೆ ಮಾತನಾಡುತ್ತಾ ಬೆಳಗಾವಿಯಲ್ಲಿ ರಾಜ್ಯ ಗ್ರಾಹಕರ ಆಯೋಗ ಈಗಾಗಲೇ ಸ್ಥಾಪನೆಗೊಂಡಿರುವದನ್ನು ದುರುದ್ದೇಶ ಪೂರ್ವಕವಾಗಿ ಕಲಬುರ್ಗಿಗೆ ಸ್ಥಳಾಂತರಿಸಿರುವುದನ್ನು ಖಂಡೀಸುತ್ತೇವೆ.  

ರಾಜ್ಯ ಸರ್ಕಾರವು ಈ ಕೂಡಲೇ ಬೆಳಗಾವಿಯಲ್ಲಿ ರಾಜ್ಯ ಗ್ರಾಹಕರ ಆಯೋಗ ಸ್ಥಾಪನೆ ಮಾಡಬೇಕು. ಇಲ್ಲದ್ದಿದ್ದಲ್ಲಿ ಮುಂದಿನ ದಿನಗಳಲ್ಲಿ ದೊಡ್ಡ ಪ್ರಮಾಣದ ಉಗ್ರ ಹೋರಾಟ ಮಾಡಲಾಗುವುದೆಂದು ಎಚ್ಚರಿಸಿದರು. ಕಾರಣ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಈ ಕೂಡಲೇ ಬೆಳಗಾವಿಯಲ್ಲಿ ರಾಜ್ಯ ಗ್ರಾಹಕರ ಆಯೋಗದ ಪೀಠವನ್ನು ಸ್ಥಾಪಿಸುವಂತೆ ಮನವಿ ಮಾಡಿಕೊಂಡರು. 

ಸಂಘದ ಅಧ್ಯಕ್ಷ ವಾಯ್‌.ಬಿ. ಯಡೂರೆ, ಉಪಾಧ್ಯಕ್ಷ ಎಂ.ಕೆ.ಕುಂಬಾರ, ಕಾರ್ಯದರ್ಶಿ ವ್ಹಿ.ಎಸ್‌.ಮೌರ್ಯ, ಖಜಾಂಚಿ ಎಂ.ಎಸ್‌.ಹೊನಕಾಂಬಳೆ, ಸಹಕಾರ್ಯದರ್ಶಿ ಪಿ.ಜೆ.ಕೆಂಪವಾಡೆ, ಆರ್‌.ಕೆ.ಧನವಂತ, ಆರ್‌.ಬಿ.ಪಾಟೀಲ, ಎಸ್‌.ಎಸ್‌.ದೊಂಡಾರೆ, ಪಿ.ಎಸ್‌.ಕನಾಳ,  ಮಿಸ್‌. ಎ.ಬಿ.ಪಾಟೀಲ, ಆರ್‌.ಎಂ. ಕಟಗೇರಿ, ಬಿ.ಎ.ಮಗದುಮ ಸೇರಿದಂತೆ ಸಂಘದ ಸದಸ್ಯರು ಇದ್ದರು. 


ಸುದ್ದಿ ಓದಿ