ಶಿಗ್ಗಾವ್

ಪಂಚಮಸಾಲಿ ಸಮಾಜಕ್ಕೆ ಪ್ರವರ್ಗ 2 ಮೀಸಲಾತಿ ನೀಡಲು ಆಗ್ರಹಿಸಿ ಮನವಿ

ಪಂಚಮಸಾಲಿ ಸಮಾಜಕ್ಕೆ  ಪ್ರವರ್ಗ 2 ಮೀಸಲಾತಿ ನೀಡಲು ಆಗ್ರಹಿಸಿ ಮನವಿ

ಶಿಗ್ಗಾವಿ 16: ರಾಜ್ಯದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಪಂಚಮಸಾಲಿ ಸಮಾಜಕ್ಕೆ ಅನುದಾನ, ಅಭಿವೃದ್ಧಿ ನಿಗಮ ನೀಡುವದಕ್ಕಿಂತ  ಸಮುದಾಯದ ಪ್ರಮುಖ ಬೇಡಿಕೆ ಪ್ರವರ್ಗ 2 ಮೀಸಲಾತಿಯನ್ನು ನೀಡಬೇಕು, ಲಿಂಗಾಯತ ಸಮೂದಾಯದ ಮುಖಂಡರೆ ಸಚಿವರು ಇದ್ದರೂ ಪರಿಗಣನೆಗೆ ತೆಗೆದುಕೊಳ್ಳದಿರುವದು ಬೇಸರದ ಸಂಗತಿ ಎಂದು ಕಾಂಗ್ರೆಸ್‍ನ ತಾಲೂಕ ವಕ್ತಾರ ಮಂಜುನಾಥ ಮನ್ನಣ್ಣವರ ಹೇಳಿದರು.

ಪಟ್ಟಣದ ಪತ್ರಕರ್ತರ ಕಾರ್ಯಾಲಯದಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ ಈಗಾಗಲೇ ಕೂಡಲಸಂಗಮದ ಜಗದ್ಗುರು ಜಯಮೃಂತ್ಯುಂಜಯ ಮಹಾಸ್ವಾಮಿಗಳ ನೇತೃತ್ವದಲ್ಲಿ ರಾಜ್ಯದ ಪ್ರಮುಖ ಮುಖಂಡರ ಜೊತೆ ಪಾದಯಾತ್ರೆ ಪ್ರಾರಂಭವಾಗಿದೆ ಇದರ ಉದ್ದೇಶ ಸರ್ಕಾರದ ಅನುದಾನವನ್ನು ಸಮುದಾಯದ ಅಭಿವೃದ್ಧಿಗೆ ನೀಡಬೇಕು. ಬಾಬಾ ಸಾಹೇಬರ ಸಂವಿಧಾನದ ಅನ್ವಯ ನಮಗೆ ಮೀಸಲಾತಿಯನ್ನು ನೀಡಬೇಕು,  ರಾಜ್ಯದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಹರಿಹರ ಪಂಚಮಸಾಲಿ ಪೀಠದ ಕಾರ್ಯಕ್ರಮದಲ್ಲಿ ಸಮಾಜದ ಅಭಿವೃದ್ಧಿಗಿಂತ ಮಠದ ಅಭಿವೃದ್ಧಿಗೆ 10 ಕೋಟಿ ರೂಗಳ ಅನುದಾನ ಬಿಡುಗಡೆ ಮಾಡುವದಾಗಿ ಘೋಷಣೆ ಮಾಡಿದ್ದಾರೆ, ಈ ಹಿಂದೆ ಮುಖ್ಯಮಂತ್ರಿಗಳು ವೀರಶೈವ ಲಿಂಗಾಯತ ಸಮುದಾಯಕ್ಕಾಗಿ ಅಭಿವೃದ್ಧಿ ನಿಗಮವನ್ನು ಸ್ಥಾಪನೆ ಮಾಡುವದಾಗಿ ಘೋಷಣೆ ಮಾಡಿದ್ದಾರೆ, ನಿಮ್ಮ ಅಕ್ಕ ಪಕ್ಕ ಇರುವ ಅಧಿಕಾರದಲ್ಲಿರುವ ಲಿಂಗಾಯತ ಮುಖಂಡರ ಕಿವಿ ಮಾತು ಕೇಳಬೇಡಿ, ತಮ್ಮ ಬೇಡಿಕೆಯನ್ನು ಈಡೇರಿಸಿ ಎಂದು ಮುಖ್ಯಮಂತ್ರಿಗಳಿಗೆ ಆಗ್ರಹ ವ್ಯಕ್ತಪಡಿಸಿದರು.

ಸುದ್ದಿ ಓದಿ