25ರಂದು 2ಎ ಮೀಸಲಾತಿಗೆ ಆಗ್ರಹಿಸಿ ಪಾದಯಾತ್ರೆ
ಶಿಗ್ಗಾವಿ 20: ಪಂಚಮಸಾಲಿ ಸಮಾಜವು ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಸರ್ಕಾರದ ಸೌಲಭ್ಯಗಳನ್ನು ಪಡೆಯಲು 2ಎ ಮೀಸಲಾತಿಯ ಅವಶ್ಯಕತೆಗಾಗಿ ಇದೇ ಜ. 25 ರಂದು ಶಿಗ್ಗಾವಿ ಪಟ್ಟಣದ ಚನ್ನಮ್ಮ ಸರ್ಕಲ್ನಿಂದ ಹಾವೇರಿ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಸ್ವಯಂ ಪ್ರೇರಿತ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಪಂಚಮಸಾಲಿ ಸಮಾಜದ ಮುಖಂಡ ಮಂಜುನಾಥ ಮಣ್ಣಣ್ಣವರ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೊಷ್ಟಿಯಲ್ಲಿ ಮಾತನಾಡಿದ ಅವರು ಈಗಾಗಲೇ ಕೂಡಲ ಸಂಗಮದ ಜಯಮೃತ್ಯುಂಜಯ ಶ್ರೀಗಳ ನೇತೃತ್ವದಲ್ಲಿ ಪಾದಯಾತ್ರೆ ಪ್ರಾರಂಭವಾಗಿದೆ ಅದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ, ಸಮಾಜದ ಜನತೆ ಬೆಂಬಲ ನೀಡಬೇಕು, ರಾಜಕೀಯ ಹೊರತು ಪಡಿಸಿ ಮುಂದಿನ ಪೀಖಿಗೆಯ ಹಿತದೃಷ್ಟಿಯಿಂದ ಈ ಹೋರಾಟಕ್ಕೆ ಬೆಂಬಲ ನೀಡಿ ಎಂದರು.
ಪಂಚಮಸಾಲಿ ಸಮಾಜದ ಯುವ ಮುಖಂಡ ಹಾಗೂ ರೈತ ಸಂಘದ ತಾಲೂಕಾದ್ಯಕ್ಷ ಬಸಲಿಂಗಪ್ಪ ನರಗುಂದ ಮಾತನಾಡಿ ರೈತರ ಮಕ್ಕಳಿಗಾಗಿ ಮತ್ತು ಸಮಾಜದ ಮಕ್ಕಳ ಉದ್ಯೋಗದ ಅವಕಾಶಕ್ಕಾಗಿ ಶಕ್ತಿ ತುಂಬುವ ಕಾರ್ಯ ಮಾಡಬೇಕಿದೆ ಇದಕ್ಕೆ ಪಕ್ಷಾತೀತವಾಗಿ ಬೆಂಬಲಿಸಿ ಎಂದು ಮನವಿ ಮಾಡಿದರು.
ಸುದ್ದಿಗೋಷ್ಟಿಯಲ್ಲಿ ಯುವ ಪಂಚಮಸಾಲಿ ಮುಖಂಡರಾದ ಬಸಲಿಂಗಪ್ಪ ಮಲ್ಲೂರ, ಶಂಬುಲಿಂಗಪ್ಪ ಕತ್ತಿ, ಪರಮೆಶ ದೊಡ್ಮನಿ ಸೇರಿದಂತೆ ಇತರರು ಇದ್ದರು.