ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಆಗ್ರಹಕ್ಕೆ ಪಾದಯಾತ್ರೆ
ಶಿಗ್ಗಾವಿ 25: ಶಿಗ್ಗಾವಿ ಪಟ್ಟಣದ ಚನ್ನಮ್ಮ ಸರ್ಕಲ್ನಿಂದ ಸವಣೂರ ಉಪವಿಭಾಗಾಧಿಕಾರಿಗಳ ಕಛೇರಿಗೆ ಪಂಚಮಸಾಲಿ ಸಮಾಜವು ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಸರ್ಕಾರದ ಸೌಲಭ್ಯಗಳನ್ನು ಪಡೆಯಲು 2ಎ ಮೀಸಲಾತಿಯ ಅವಶ್ಯಕತೆಗಾಗಿ ಸ್ವಯಂ ಪ್ರೇರಿತ ಪಾದಯಾತ್ರೆಯನ್ನು ಜ.25ರಂದು ಪಾದ ಯಾತ್ರೆಯ ಮೂಲಕ ಸವಣೂರಗೆ ನಡೆದರು.
ಸೋಮವಾರ ಪಟ್ಟಣದ ಚನ್ನಮ್ಮ ಸರ್ಕಲ್ನಿಂದ ಸವಣೂರ ರಸ್ತೆಯ ಮೂಲಕ ತಾಲೂಕಿನ ವಿವಿಧ ಪಂಚಮಸಾಲಿ ಸಮಾಜದ ಮುಖಂಡರುಗಳು ಪಾಲ್ಗೋಂಡಿದ್ದರು ಪಂಚಮಸಾಲಿ ಸಮಾಜದ ತಾಲೂಕಾ ಅಧ್ಯಕ್ಷ ಶಿವಾನಂದ ಬಾಗೂರ ಮಾತನಾಡಿ ಕೂಡಲ ಸಂಗಮದ ಜಯಮೃತ್ಯುಂಜಯ ಶ್ರೀಗಳ ನೇತೃತ್ವದಲ್ಲಿ ಪಾದಯಾತ್ರೆ ಪ್ರಾರಂಭವಾಗಿದೆ ಅದಕ್ಕೆ ನಮ್ಮ ಸಂಪೂರ್ಣ ಬೆಂಬಲಾರ್ಥವಾಗಿ ಈ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ.
ಸಮಾಜದ ಜನತೆ ಬೆಂಬಲ ಅಭೂತಪೂರ್ವವಾಗಿ ಸಿಕ್ಕಿದ್ದು ರಾಜಕೀಯ ಹೊರತು ಪಡಿಸಿ ಮುಂದಿನ ಪೀಳಿಗೆಯ ಹಿತದೃಷ್ಟಿಯಿಂದ ಈ ಹೋರಾಟಕ್ಕೆ ಬೆಂಬಲ ನೀಡಿ, ರೈತರ ಮಕ್ಕಳಿಗಾಗಿ ಮತ್ತು ಸಮಾಜದ ಮಕ್ಕಳ ಉದ್ಯೋಗದ ಅವಕಾಶಕ್ಕಾಗಿ ಶಕ್ತಿ ತುಂಬುವ ಕಾರ್ಯ ಮಾಡಬೇಕಿದೆ ಇದಕ್ಕೆ ಪಕ್ಷಾತೀತವಾಗಿ ಬೆಂಬಲಿಸಿದ್ದು ಸ್ವಾಗತಾರ್ಹಆಗಿದೆ
ಪಂಚಮಸಾಲಿ ಸಮಾಜದ ಯುವ ಮುಖಂಡರಾದ ವಿಪ ಮಾಜಿ ಸದಸ್ಯ ಸೋಮಣ್ಣಾ ಬೇವಿನಮರದ, ಶ್ರೀಕಾಂತ ದುಂಡಿಗೌಡ್ರ, ಪ್ರೇಮಾ ಪಾಟೀಲ, ರಾಜೇಶ್ವರಿ ಪಾಟೀಲ, ಉದ್ಯಮಿ ಶಶಿಧರ ಯಲಿಗಾರ, ಬಸವರಾಜ ಜೇಕಿನಕಟ್ಟಿ, ಬಸಲಿಂಗಪ್ಪ ನರಗುಂದ, ಡಾ, ಪಕ್ಕೀರಗೌಡ ಪಾಟೀಲ, ಮಂಜುನಾಥ ಮಣ್ಣಣ್ಣವರ ಹಾಗೂ ಬಸಲಿಂಗಪ್ಪ ನರಗುಂದ, ಈರಣ್ಣ ನವಲಗುಂದ, ಸಂಜೀವ ಮಣ್ಣನವರ, ಶಂಬುಲಿಂಗಪ್ಪ ಕತ್ತಿ, ಬಸವರಾಜ ಮಲ್ಲೂರ, ಶಂಬು ನೆರ್ತಿ. ಸೋಮು ಆಜೂರ, ಶಂಕರಗೌಡ ಪಾಟೀಲ, ಮುತ್ತಣ್ಣ ಸಮಾಜದ ಯುವಕರ ಸೇರಿದಂತೆ ಹಲವರು ಪಾಲ್ಗೋಂಡಿದ್ದರು.