ಹೂವಿನ ಹಡಗಲಿ

ಸ್ವಹಿತಾಸಕ್ತರ ಅಪಪ್ರಚಾರದಿಂದ ಸೋಲು: ಪಿಟಿ.ಪರಮೇಶ್ವರನಾಯ್ಕ

ಸ್ವಹಿತಾಸಕ್ತರ ಅಪಪ್ರಚಾರದಿಂದ ಸೋಲು: ಪಿಟಿ.ಪರಮೇಶ್ವರನಾಯ್ಕ

ಹೂವಿನಹಡಗಲಿ.26: ಸ್ವಹಿತಾಸಕ್ತರ ಅಪಪ್ರಚಾರದಿಂದ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋಲನುಭವಿಸಬೇಕಾಯಿತು ಜತೆಗೆ  ಕ್ಷೇತ್ರ ಅಭಿವೃದ್ಧಿಯಿಂದ ವಂಚಿತವಾಗಿದೆ ಎಂದು  ಮಾಜಿ ಸಚಿವ ಪಿಟಿ.ಪರಮೇಶ್ವರನಾಯ್ಕ ಬೇಸರ ವ್ಯಕ್ತಪಡಿಸಿದರು.  

ಪಟ್ಟಣದ ಸೇವಲಾಲ್ ಸಮುದಾಯ ಭವನದ ಆವರಣದಲ್ಲಿ ಬ್ಲಾಕ್ ಕಾಂಗ್ರೆಸ್ ಹಾಗೂ ಕಾರ್ಯಕರ್ತರು ಹಮ್ಮಿಕೊಂಡಿದ್ದ ಜನ್ಮದಿನ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದರು. ಲೋಕಸಭೆ ಚುನಾವಣೆಯಲ್ಲಿ ಪಕ್ಷವನ್ನು ಬೆಂಬಲಿಸಿರುವುದು ನನ್ನ ಸೋಲನ್ನು ಮರೆಸಿ ಸಾಕಷ್ಟು ಸ್ಫೂರ್ತಿ ತಂದಿದೆಕ್ಷೇತ್ರದ ಜನರ ಸಮಸ್ಯೆಗಳ ಸ್ಪಂದಿಸುವುದಾಗಿ ಹೇಳಿದರು.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶಿವಯೋಗಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರಾಜ್ಯ ಬಂಜಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಯದೇವನಾಯ್ಕ, ಡಿಸಿಸಿ. ನಿರ್ದೇಶಕ ಪಿ.ವಿಜಯಕುಮಾರ್ ಮಾತನಾಡಿದರು.  

ಪ್ರೇಮಾ ಪರಮೇಶ್ವರನಾಯ್ಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹನುಮಂತಪ್ಪ, ಆಟವಾಳಿಗಿ ಕೊಟ್ರೇಶ, ಆರವಳ್ಳಿ ವೀರಣ್ಣ, ಪಿಕಾರ್ಡ್‌ ಬ್ಯಾಂಕ್ ಅಧ್ಯಕ್ಷ ಪಾಟೀಲ್ ಬಸವನಗೌಡ, ಪ್ರಚಾರ ಸಮಿತಿ ಅಧ್ಯಕ್ಷ ಸೋಗಿ ಹಾಲೇಶ, ದೂದಾನಾಯ್ಕ .ಕೆ.ಎಸ್‌.ಶಾಂತನಗೌಡ.ವಕೀಲರಾದ ಚಂದ್ರನಾಯ್ಕ.ಜ್ಯೋತಿ ಮಲ್ಲಣ್ಣ. ವಸಂತ. ಶಿವಕುಮಾರಗೌಡ. ಇದ್ದರು. 


ಸುದ್ದಿ ಓದಿ