ಯರಗಟ್ಟಿ

ವಲಯ ಮಟ್ಟದ ಕ್ರೀಡಾಕೂಟಕ್ಕೆ ದೀಪಿಕಾ ಮಠಪತಿ

ವಲಯ ಮಟ್ಟದ ಕ್ರೀಡಾಕೂಟಕ್ಕೆ ದೀಪಿಕಾ ಮಠಪತಿ

ಲೋಕದರ್ಶನ ವರದಿ 

ಯರಗಟ್ಟಿ 27: ಸಮೀಪದ ಕೋ. ಶಿವಾಪೂರ ಗ್ರಾಮದಲ್ಲಿ ವಲಯ ಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟವು ಆಯೋಜಿಸಲಾಗಿತ್ತು. 

ಕೋ.ಶಿವಾಪೂರ ಗ್ರಾಮದಲ್ಲಿ ಇದೆ ಮೊದಲ ಬಾರಿಗೆ ವಲಯ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಉದ್ಘಾಟನೆ ಮಾಡಿ ಮಾತನಾಡಿದ ಗ್ರಾ. ಪಂ. ಅಧ್ಯಕ್ಷೆ ದೀಪಿಕಾ ಮಠಪತಿ ಪಟ್ಟಣಕ್ಕಿಂತ ಹಳ್ಳಿಯ ಹುಡುಗರ ಕ್ರೀಡೆ ಮನೆ ಭಾವ ಹೆಚ್ಚಾಗಿ ಇರುತ್ತದೆ ಕ್ರೀಡೆಯಿಂದ ಪಟ್ಟಣದ ಜನಗಳಿಗಿಂತ ಹಳ್ಳಿಯ ಜನಗಳೇ ಉದಾರ ಮನಸ್ಸಿನವರು ಎಂದು ಕೊಂಡಾಡಿದರು. 

ಅದೇ ರೀತಿ ಸೋಲೆ ಗೆಲುವಿನ ಮೆಟ್ಟಲು ಯಾರು ಕೂಡ ನಾವು ಸೋತಿದ್ದೇವೆ ಎಂದು ದುಃಖ ಪಡುವ ಅಗತ್ಯ ಇಲ್ಲ ಮುಂದಿನ ದಿನಗಳಲ್ಲಿ ನೀವು ಗೆಲ್ಲಲೇ ಬೇಕು ಎಂದು ಉಮ್ಮಸ್ಸಿನಿಂದ ಹಾಡಿ ಯಾವುದೇ ಕಾರಣಕ್ಕೂ ಘರ್ಷಣೆಗೆ ಒಳಗಾಗಬಾರದು. ಒಟ್ಟಿನಲ್ಲಿ ಕ್ರೀಡೆ ಗೆಲ್ಲುತ್ತದೆ ಎಂದು ಮಕ್ಕಳಿಗೆ ಕಿವಿ ಮಾತು ಹೇಳಿದರು. 

ನಂತರ ಕ್ರೀಡಾಕೂಟ ಎಲ್ಲಾ ಮಕ್ಕಳಿಗೂ ಶಿಕ್ಷಕರಾದ ಎ. ಕೆ. ನಾವಿ ಪ್ರತಿಜ್ಞಾವಿಧಿ ಬೋಧಿಸಿದರು. 

ಗ್ರಾ. ಪಂ.  ಉಪಾಧ್ಯಕ್ಷ ನಾಗಮ್ಮ ಬಡಕಪ್ಪನವರು, ಎಸ್‌.ಡಿ.ಎಂ.ಸಿ ಮಾಜಿ ಅಧ್ಯಕ್ಷ ಮಹಾಂತೇಶ ತೋಟಗಿ, ಕಾಳವ್ವ ಪೂಜೇರ, ಸರೋಜಿನಿ ಭಜಂತ್ರಿ, ತವನಪ್ಪ ಟೋಪಣ್ಣವರ, ಶಿವಾನಂದ ಹಾದಿಮನಿ, ಶ್ರೀಕಾಂತ ದೇಸಾಯಿ, ಮಲ್ಲಿಕಸಾಬ ಸನದಿ, ಪರಮೇಶ ಚಂದರಗಿ, ಶಿದ್ದಲಿಂಗ ಕುಂದರಗಿ,  ಶಾಲಾ ಶಿಕ್ಷಕರಾದ ಡಾ. ಬಿ. ಕೆ. ಪಡೆಪ್ಪನವರ, ಸಿ.ಆರ್‌.ಸಿ ಎಂ. ಎಂ. ಮಲಕ್ಕನವರ, ಎ. ಎಂ. ತಳವಾರ, ಎಸ್‌. ಆರ್‌. ಪಾಟೀಲ, ಸಿದ್ದಣ್ಣಾ ಕುರುಬರ ಮತ್ತು ಮಕ್ಕಳು ಊರಿನ ಗ್ರಾಮಸ್ಥರು ಭಾಗವಹಿಸಿದ್ದರು. 


ಸುದ್ದಿ ಓದಿ