ಕುಸನಾಳ-ಮೋಳವಾಡ ಗ್ರಾಪಂ ಅಧ್ಯಕ್ಷರಾಗಿ ದೀಪಾ ಖನ್ನಿಕೂಡೆ ಆಯ್ಕೆ
ಕಾಗವಾಡ 29: ತಾಲೂಕಿನ ಕುಸನಾಳ-ಮೋಳವಾಡ ಗ್ರಾಪಂ ಅಧ್ಯಕ್ಷರಾಗಿ ದೀಪಾ ವಿಜಯ ಖನ್ನಿಕೂಡೆ ಮತ್ತು ಉಪಾಧ್ಯಕ್ಷರಾಗಿ ನಿರ್ಮಲಾ ಬಸಗೌಡಾ ಪಾಟೀಲ ಅವಿರೋಧವಾಗಿ ಆಯ್ಕೆಗೊಂಡರು.
ಕುಸನಾಳ ಗ್ರಾಮ ಪಂಚಾಯತಿಯಲ್ಲಿ ಚುನಾವಣಾಧಿಕಾರಿಗಳಾಗಿ ಕಾಗವಾಡ ಬಿಇಓ ಎಂ.ಆರ್.ಮುಂಜೆ ಕಾರ್ಯನಿರ್ವಹಿಸಿದರು. ಪಿಡಿಓ ಯಶವಂತ ವಂಟಗುಡೆ, ಕಾರ್ಯದರ್ಶಿ ವೆಂಕಟೇಶ ಕುಲಕರ್ಣಿ ಸಹಕರಿಸಿದರು.
ಮಾಜಿ ಗ್ರಾಪಂ ಅಧ್ಯಕ್ಷ ಜೈಪಾಲ ಯರಂಡೋಲೆ ಮಾತನಾಡಿ, ನಾನು 5 ಬಾರಿ ಸದಸ್ಯನಾಗಿ ಆಯ್ಕೆಗೊಂಡು ಗ್ರಾಮದ ಅಭಿವೃದ್ಧಿಗಾಗಿ ಶ್ರಮಿಸಿದ್ದೇನೆ. ಈ ಮುಂದೆಯೂ ಸಚಿವ ಶ್ರೀಮಂತ ಪಾಟೀಲ ಇವರ ಮಾರ್ಗದರ್ಶನದಲ್ಲಿ ಗ್ರಾಮದ ಅಭಿವೃದ್ಧಿ ಕೈಗೊಳ್ಳುತ್ತೇವೆ. ಈ ಗ್ರಾಮಗಳು ಕೃಷ್ಣಾ ನದಿ ಮಹಾಪೂರ ಹಿನ್ನೀರಿನಲ್ಲಿ ಮುಳುಗಡೆಯಾಗಿದ್ದವು. ಸರಕಾರದಿಂದ ಕೆಲ ನಾಗರಿಕರಿಗೆ ಇನ್ನೂ ಪರಿಹಾರ ದೊರೆತಿಲ್ಲಾ. ಇಂಥ ಸಮಸ್ಯೆಗಳನ್ನು ಇತ್ಯರ್ಥಗೊಳಿಸುತ್ತೇವೆ ಎಂದರು.
ನೂತನ ಗ್ರಾಪಂ ಅಧ್ಯಕ್ಷೆ ದೀಪಾ ವಿಜಯ ಖನ್ನಿಕೂಡೆ ಮಾತನಾಡಿ, ಎಲ್ಲ ನೂತನ ಸದಸ್ಯರು ನನ್ನ ಮೇಲೆ ನಂಬಿಕೆಯಿಟ್ಟು ಅವಿರೋಧವಾಗಿ ಆಯ್ಕೆಮಾಡಿ ಗ್ರಾಮದ ಅಭಿವೃದ್ಧಿಗಾಗಿ ಸಹಕರಿಸಲು ತಮ್ಮ ಇಚ್ಛೆ ವ್ಯಕ್ತಪಡಿಸಿದ್ದಾರೆ. ಈ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗ್ರಾಮದ ಅಭಿವೃದ್ಧಿ ಮಾಡಲು ಪ್ರಯತ್ನಿಸುತ್ತೇನೆ ಎಂದರು.
ಸದಸ್ಯರಾದ ಸುಭಾಷ ಅಥಣಿ, ಚಿದಾನಂದ ಅಥಣಿ, ಅಶೋಕ ನಾಂದಣಿ, ಮಹಾದೇವ ಕಾಂಬಳೆ, ಭಿಮಣ್ಣ ಬೇರಡ, ರತ್ನಕ್ಕಾ ಗುರವ, ಸುಶೀಲಾ ಮಾಂಜರೆ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.