ದ್ಯಾಮವ್ವದೇವಿಗೆ ಬೆಳ್ಳಿ ಪ್ರಭಾವಳಿ ಸಮರ್ಪಣೆ
ಶಿಗ್ಗಾವಿ 10: ಪಟ್ಟಣದ ಗ್ರಾಮದೇವಿ ಹಾಗೂ ಆರಾಧ್ಯದೈವ ದ್ಯಾಮವ್ವದೇವಿಗೆ ಯುಗಾದಿ ಹಬ್ಬದಂದು ವಿಶೇಷ ಪೂಜೆ ಪುನಸ್ಕಾರದ ಜೊತೆಗೆ ಬೆಳ್ಳಿಯ ಪ್ರಭಾವಳಿ ಅರ್ಪಣೆ ಮಾಡಲಾಯಿತು. ಭಕ್ತ ಸಮೂಹದ ಬಹುದಿನಗಳ ಇಚ್ಛೆಯಂತೆ ಸನ್ 2023 ರ ಜಾತ್ರಾ ಮಹೋತ್ಸವದಲ್ಲಿ ಉಳಿದ ಹಣದಲ್ಲಿ ಸಿದ್ಧಗೊಂಡ ಸುಮಾರು 18 ಕೆ.ಜಿ ಬೆಳ್ಳಿಯ ಪ್ರಭಾವಳಿ ಏ.9 ರಂದು ಮಂಗಳವಾರ ಬೆಳಗ್ಗೆ 10 ಗಂಟೆಗೆ ಯುಗಾದಿ ಪಾಡ್ಯ ಶುಭ ದಿನದಂದು ಶಾಸ್ತ್ರೋಕ್ತವಾಗಿ ತಾಯಿ ದ್ಯಾಮವ್ವದೇವಿಗೆ ಸಮರೆ್ಣ ಕಾರ್ಯಕ್ರಮ ನೆರವೇರಿತು.ದ್ಯಾಮವ್ವದೇವಿ ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷರು, ಗೌರವಾಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು ಹಾಗೂ ಶಿಗ್ಗಾಂವ-ಗಂಜೀಗಟ್ಟಿ ಸದ್ಭಕ್ತ ಮಂಡಳಿಯವರು ಉಪಸ್ಥಿತರಿದ್ದರು.