ಕಾಗವಾಡ

ಪಿಕೆಪಿಎಸ್ ಸಂಸ್ಥೆಯಿಂದ ಪ್ರಥಮ ಬಾರಿಗೆ ಸಾಲ ವಿತರಣೆ

ಪಿಕೆಪಿಎಸ್ ಸಂಸ್ಥೆಯಿಂದ ಪ್ರಥಮ ಬಾರಿಗೆ ಸಾಲ ವಿತರಣೆ

ಕಾಗವಾಡ 13:  ಕಾಗವಾಡ ತಾಲೂಕಿನ ಮಂಗಾವತಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಸ್ಥೆ ಸ್ಥಾಪನೆಗೊಂಡು 75 ವರ್ಷ ಗತಿಸಿದೆ. ಈ ವರೆಗೆ ಸಂಸ್ಥೆಯಿಂದ ವಾಹನ ಸಾಲ ನೀಡಿರಲಿಲ್ಲಾ. ಮೊದಲನೇ ಸಲಹ ಓರ್ವ ರೈತನಿಗೆ ಟ್ರ್ಯಾಕ್ಟರ್ ಸಾಲ ನೀಡಿದ್ದೇವೆಯೆಂದು ಸಂಸ್ಥೆಯ ಅಧ್ಯಕ್ಷ ದೀಲಿಪ ಪಾಟೀಲ ಹೇಳಿದರು.ಶಕ್ರವಾರ ರಂದು ಮಂಗಾವತಿ ಪಿಕೆಪಿಎಸ್ ಸಂಸ್ಥೆಯಲ್ಲಿ ಪ್ರಥಮ ಬಾರಿಗೆ ಟ್ರ್ಯಾಕ್ಟರ್ ಸಾಲ ನೀಡುವ ಕಾರ್ಯಕ್ರಮ ನೆರವೇರಿತು.ಈ ಸಂಸ್ಥೆ ಕಳೇದ 12 ವರ್ಷಗಳ ಹಿಂದೆ ಸಂಪೂರ್ಣವಾಗಿ ಆರ್ಥಿಕ ಹಾನಿಯಲ್ಲಿತ್ತು. ನಿರಂತರವಾಗಿ ಎಲ್ಲ ಸಂಚಾಲಕರು, ಸಿಬ್ಬಂದಿದವರು ಪ್ರಾಮಾಣಿಕವಾಗಿ ಪ್ರಯತ್ನಿಸಿ ಆರ್ಥಿಕ ಸ್ಥಿತಿ ಒಳ್ಳೆಯ ಮಟ್ಟಕ್ಕೆ ತರಲು ಯಶಸ್ವಿವಾಗಿದ್ದಾರೆ. ಒಟ್ಟು 500 ಸದಸ್ಯರ ಪೈಕಿ 384 ಸದಸ್ಯರು ಸಾಲವನ್ನು ಪಡೆದಿದ್ದಾರೆ. ಇವರು 100ಕ್ಕೆ 100ರಷ್ಟು ಮರುಪಾವತಿಸಿದ್ದಾರೆ. ಸಂಸ್ಥೆಗೆ 79 ಲಕ್ಷ ಸಾಲ ನೀಡುವ ಗುರಿ ಹೊಂದಿತ್ತು. ಈಗ 2 ಕೋಟಿ 75 ಲಕ್ಷ ರೂ. ಸಾಲ ರೈತರಿಗೆ ನೀಡಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಸುರೇಶ ವಡ್ಡರ ತಿಳಿಸಿದರು.ಕಾರ್ಯಕ್ರಮದಲ್ಲಿ ಬಿಡಿಸಿಸಿ ಬ್ಯಾಂಕ್ ಪ್ರತಿನಿಧಿಗಳಾಗಿ ಎಚ್.ವೈ.ಸಂಕ್ರಟ್ಟಿ ಇವರಿಂದ ಗಿರೀಶ ಶಂಕರ ಪಾಟೀಲ ಇವರಿಗೆ ಟ್ರ್ಯಾಕ್ಟರ್ ಹಸ್ತಾಂತರಿಸಲಾಯಿತು.

ಸಂಸ್ಥೆಯ ಉಪಾಧ್ಯಕ್ಷ ಅಪ್ಪಾಸಾಬ ತೊಬರೆ, ಸಂಚಾಲಕರಾದ ಶಂಕರ ಪಾಟೀಲ, ಮಹಾದೇವ ಕೊರಬು, ಲಕ್ಷ್ಮಣ ಗುಂಜಾಳೆ, ವಿಮಲ ರಾಜಗೌಡ ಪಾಟೀಲ, ಜಯಶ್ರೀ ಶೇಷಗೌಡ ಪಾಟೀಲ, ಶಿವಪ್ಪಾ ಸುಂಟೆ, ವಸಂತ ಕೋಳಿ, ರಾಜೇಂದ್ರ ಉಗಾರೆ ಇದ್ದರು.


ಸುದ್ದಿ ಓದಿ