ಯಲ್ಲಪ್ಪ ಹೊಟ್ಟಿಯವರ ನಿಧನ
ಧಾರವಾಡ 11 : ಕೃಷಿಯ ಎಲ್ಲಾ ಚಟುವಟಿಕೆಗಳಲ್ಲಿ ವ್ಯಾಪಕ ಅನುಭವ ಹೊಂದಿದ್ದ ತಾಲೂಕಿನ ಅಮ್ಮಿನಬಾವಿ ಗ್ರಾಮದ ಹಿರಿಯ ರೈತ, ದೊಡ್ಡೋಣಿ ನಿವಾಸಿ ಯಲ್ಲಪ್ಪ ನಿಂಗಪ್ಪ ಹೊಟ್ಟಿಯವರ (88) ಅವರು ಶನಿವಾರ ನಿಧನ ಹೊಂದಿದರು.
ಪತ್ನಿ, ಭಾರತೀಯ ಸೈನ್ಯ ಪಡೆಯ ನಿವೃತ್ತ ಸೈನಿಕ ಕಾಂತೇಶ ಸೇರಿ ಇಬ್ಬರು ಪುತ್ರರು, 3 ಜನ ಪುತ್ರಿಯರು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ. ಸ್ಥಳೀಯ ಶಾಸಕ ವಿನಯ ಕುಲಕರ್ಣಿ ಯಲ್ಲಪ್ಪ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ.