ಯರಗಟ್ಟಿ

ಸಚಿವ ಉಮೇಶ ಕತ್ತಿ ಅವರ ನಿಧನದಿಂದ ರಾಜ್ಯಕ್ಕೆ ಅಪಾರ ಹಾನಿ: ದೇಸಾಯಿ

ಸಚಿವ ಉಮೇಶ ಕತ್ತಿ ಅವರ ನಿಧನದಿಂದ ರಾಜ್ಯಕ್ಕೆ ಅಪಾರ ಹಾನಿ: ದೇಸಾಯಿ

ಯರಗಟ್ಟಿ : ಸದಾ ಅಭಿವೃದ್ಧಿಯ ಬಗ್ಗೆ ಚಿಂತಿಸುತ್ತಿದ್ದ ನಾಡಿನ ಹಿರಿಯ ರಾಜಕಾರಣಿ, ಸಚಿವ ಉಮೇಶ ಕತ್ತಿ ಅವರ ನಿಧನದಿಂದ ಇಡೀ ರಾಜ್ಯಕ್ಕೆ ಅಪಾರ ಹಾನಿಯಾಗಿದೆ ಎಂದು ಯರಗಟ್ಟಿ  ಮಾಜಿ ಜಿ. ಪಂ. ಸದಸ್ಯ ಅಜೀತಕುಮಾ ಕೃ. ದೇಸಾಯಿ ಅವರು  

ಸಂತಾಪ ಸೂಚಿಸಿದರು. ಇಲ್ಲಿಯ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಅಗಲಿದ ಸಚಿವ ಉಮೇಶ ಕತ್ತಿ ಅವರಿಗೆ ಶೃದ್ಧಾಂಜಲಿ  

ಸಲ್ಲಿಸಿ ಮಾತನಾಡಿದ ಅವರು, ಸಚಿವ ಉಮೇಶ ಕತ್ತಿ ಅವರು ಯಾವಾಗಲೂ ಅಭಿವೃದ್ಧಿಯ ಬಗ್ಗೆ ಹೆಚ್ಚು ಚಿಂತಿಸುತ್ತಿದ್ದರು. ಅದರಲ್ಲೂ ಉತ್ತರ ಕರ್ನಾಟಕದ ಬಗ್ಗೆ ಅವರಿಗಿರುವ ಕಾಳಜಿ ಎಂದಿಗೂ ಮರೆಯಲಿಕ್ಕೆ ಆಗದು ಎಂದು ಹೇಳಿದರು. 

ತಮ್ಮ ಹಾಗೂ ಕತ್ತಿ ಕುಟುಂಬ ಕಳೆದ 30 ವರ್ಷಗಳಿಂದ ಒಂದೇ ಕುಟುಂಬದವರಂತೆ ಇದ್ದೇವೆ. ಕತ್ತಿ ಅವರು ನನಗೆ  

ಹಿರಿಯ ಸಹೋದರನಂತೆ ಇದ್ದರು. ಉತ್ತರ ಕರ್ನಾಟಕಕ್ಕೆ ದೊಡ್ಡ ಶಕ್ತಿಯಾಗಿದ್ದ ಉಮೇಶ ಕತ್ತಿ ಅವರು, ಉತ್ತರ ಕರ್ನಾಟಕಕ್ಕೆ ಅನ್ಯಾಯವಾದಾಗ ಅವರು ಸದಾ ಹೋರಾಟ ಮಾಡುತ್ತಿದ್ದರು.  

ನೇರ, ನಿಷ್ಠುರವಾದಿಯಾಗಿದ್ದ ಕತ್ತಿ ಅವರ ಅಕಾಲಿಕ ನಿಧನದಿಂದ ನಮ್ಮ ಜಿಲ್ಲೆ, ರಾಜ್ಯ ಹಾಗೂ ಬಿಜೆಪಿಗೆ ದೊಡ್ಡ ನಷ್ಟವಾಗಿದೆ. ಕತ್ತಿ ಅವರ ಕುಟುಂಬಕ್ಕೆ  ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ ಎಂದು ಜಿ. ಪಂ. ಸದಸ್ಯ ಅಜೀತಕುಮಾರ ದೇಸಾಯಿ ಹೇಳಿದರು. 

ಪ. ಪಂ. ಸದಸ್ಯ ವಿಶಾಲಗೌಡ ಪಾಟೀಲ, ಕಸಾಪ ಅಧ್ಯಕ್ಷ ತಮ್ಮಣ್ಣಾ ಕಾಮಣ್ಣವರ,  ವೆಂಕಟೇಶ ದೇವರಡ್ಡಿ, ಆನಂದ ಬಾಗೋಡಿ, ಈರಣ್ಣಾ ಪೂಜೇರ,  ಚೇತನ ಜಕಾತಿ, ನೀಲಪ್ಪ ಬಾರ್ಕಿ,  ಸದಾನಂದ ಪಾಟೀಲ, ರಮೇಶ ಮುರಗೋಡ, ಅರುಣ ಪಟ್ಟೇದ, ಕೃಷ್ಣಮೂರ್ತಿ ತೋರಗಲ್, ಕುಮಾರ ಜಕಾತಿ, ಸುಪ್ರೀತ ಬಾಳಿ,  ಮಹೇಶ ಕರ್ಜಗಿಮಠ, ಈರಣ್ಣಾ ಹುಲ್ಲೂರ, ಮಹೇಶ ಆರಿಬೆಂಚಿ  ಸೇರಿದಂತೆ ಬಾಜಪಾ ಕಾರ್ಯಕರ್ತರು ಉಪಸ್ಥಿತರಿದ್ದರು. 


ಸುದ್ದಿ ಓದಿ