ಚಂದ್ರಶೇಖರ ಕುರಿ ನಿಧನ
ಕಾಗವಾಡ 25: ಕಾಗವಾಡದ ಖ್ಯಾತ ನ್ಯಾಯವಾದಿಗಳು ಮತ್ತು ಚಿಕ್ಕೋಡಿ ಜಿಲ್ಲಾ ಬಿಜೆಪಿ ಪಕ್ಷದ ಕಾನೂನು ಸಲಹೆಗಾರರಾಗಿ, ಉಗಾರ ಲಾಯನ್ಸ್ ಕ್ಲಬ್‌ನ ಸದಸ್ಯರಾಗಿ ಮತ್ತು ಸರಕಾರಿ ನೋಟರಿಗಳಾಗಿ ಸೇವೆ ಸಲ್ಲಿಸುತ್ತಿರುವ ಚಂದ್ರಶೇಖರ ಕುರಿ (42) ಇವರು ಮಂಗಳವಾರ ಬೆಳಿಗ್ಗೆ ಹೃದಯಘಾತದಿಂದ ನಿಧನ ಹೊಂದರು. ಮೃತರು ತಂದೆ, ತಾಯಿ, ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.