ನಂದಿನಿ ಹಾಲು ವಿತರಕರ ಕ್ಷೇಮಾಭಿವೃದ್ಧಿಗಾಗಿ ವಿತರಕರ ಕಲ್ಯಾಣ ಟ್ರಸ್ಟ್ ಪ್ರಾರಂಭ
ಸಿಂದಗಿ 19: ನಂದಿನಿ ಹಾಲು ವಿತರಕರ ಕ್ಷೇಮಾಭಿವೃದ್ಧಿಗಾಗಿ ವಿತರಕರ ಕಲ್ಯಾಣ ಟ್ರಸ್ಟನ್ನು ಪ್ರಾರಂಭಿಸಲು ಉದ್ದೇಸಿದ್ದು, ಈ ನಿಧಿಯಿಂದ ವಿತರಕರಿಗೆ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ವಿಜಯಪುರ ಮತ್ತು ಬಾಗಲಕೋಟ ಹಾಲು ಒಕ್ಕೂಟದ ವ್ಯವಸ್ಥಾಪಕ ಡಾ. ಸಂಜೀವ ದೀಕ್ಸಿತ್ ಹೇಳಿದರು.
ಪಟ್ಟಣದ ಬಿಕೆಟಿ ಸಭಾಭವನದಲ್ಲಿ ನಂದಿನಿ ಹಾಲು ವಿತರಕರ ಸಭೆಯಲ್ಲಿ ಮಾತನಾಡಿದ ಅವರು, ಸಿಂದಗಿ ತಾಲೂಕು ವ್ಯಾಪ್ತಿಯಲ್ಲಿ ಬರುವ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳು ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತಿದ್ದು, ಒಕ್ಕೂಟವು ಪನ್ನೀರ್ ಒಳಗೊಂಡು ವಿವಿಧ ಉತ್ಪನ್ನಗಳನ್ನು ಬಿಡುಗಡೆ ಮಾಡಿದ್ದು, ಗ್ರಾಹಕರಿಗೆ ಯೋಗ್ಯದರದಲ್ಲಿ ಒದಗಿಸಲಾಗುವುದು ನಂದಿನಿ ಉತ್ಪನ್ನಗಳನ್ನು ಕಲಬೆರೆಕೆ ರಹಿತವಾಗಿದ್ದು, ವಿಶ್ವಾಸಾರ್ಹ ಸಹಕಾರಿ ಬ್ರಾಂಡ್ ಆಗಿರುತ್ತದೆ. ವಿತರÀಕರು ಉತ್ಪನ್ನಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಮಾರಾಟ ಮಾಡಿ ತಮ್ಮ ಉತ್ಪನ್ನ ಹೆಚ್ಚಿಸಿಕೊಳ್ಳುವುದರೊಂದಿಗೆ ಗ್ರಾಹಕರಿಗೆ ಉತ್ತಮ ಸೇವೆ ಒದಗಿಸಬೇಕು ಎಂದು ವಿತರಕರಿಗೆ ತಿಳಿಸಿದರು.
ಒಕ್ಕೂಟದ ವ್ಯವಸ್ಥಾಪಕ ಎಸ್.ಎಸ್.ಕುಂಬಾರ ಮಾತನಾಡಿದರು. ಈ ವೇಳೆ ಹಿರಿಯ ಹಾಲು ವಿತರಕರಾದ ಶಿವಯೋಗೆಪ್ಪ ಗುಣಾರಿ ಅವರನ್ನು ಸನ್ಮಾನಿಸಲಾಯಿತು. ಮಾರುಕಟ್ಟೆ ಸಹಾಯಕ ಟಿ.ಬಿ.ದಳವಾಯಿ, ವಿತರಕರಾದ ಬಸವರಾಜ ಹರನಾಳ, ಎಂ.ಬಿ.ಹಿರೇಮಠ, ಮಲ್ಲು ಕೆಂಭಾವಿ, ಪ್ರಾಣೇಶ ಕುಲಕರ್ಣಿ, ಮಲ್ಲಿಕಾರ್ಜುನ ತಳವಾರ ಸೇರಿದಂತೆ ತಾಲೂಕಿನ ಎಲ್ಲಾ ಹಾಲು ವಿತರಕರು ಇದ್ದರು. ಮಾರುಕಟ್ಟೆ ಸಹಾಯಕ ಟಿ.ಬಿ.ದಳವಾಯಿ ಸ್ವಾಗತಿಸಿ ವಂದಿಸಿದರು.