ಗುಳೇಗುಡ್ಡ

ಶೀಘ್ರ ಹೆದ್ದಾರಿ ಕಾಮಗಾರಿ ಆರಂಭಿಸಲು ಅಧಿಕಾರಿಗಳಿಗೆ ಗಡುವು

ಶೀಘ್ರ ಹೆದ್ದಾರಿ ಕಾಮಗಾರಿ ಆರಂಭಿಸಲು ಅಧಿಕಾರಿಗಳಿಗೆ ಗಡುವು
ಗುಳೇದಗುಡ್ಡ ಮೂಕೇಶ್ವರಿ ದೇವಸ್ಥಾನದ ಆವರಣದಲ್ಲಿ ಹೆದ್ದಾರಿ ಕಾಮಗಾರಿ ವಿಷಯವಾಗಿ ಸೇರಿದ ಸಭೆಯಲ್ಲಿ ಹೊಳಬಸು ಶೆಟ್ಟರ ಮಾತಮ

ಗುಳೇದಗುಡ್ಡ.2: ಪಟ್ಟಣದಲ್ಲಿ ಹಾಯ್ದು ಹೋಗಿರುವ ಸಂಗಮ-ಸಂಕೇಶ್ವರ ಹೆದ್ದಾರಿಯನ್ನು ಕಾನೂನು ಪ್ರಕಾರ ಶೀಘ್ರವಾಗಿ ಆರಂಭಿಸಬೇಕು. ಇಲ್ಲದಿದ್ದರೆ ಆ.4 ರಿಂದ ಸತ್ಯಾಗ್ರಹ ಹಮ್ಮಿಕೊಳ್ಳುವುದಾಗಿ  ಇಲ್ಲಿನ ಕಾಂಗ್ರೇಸ್ ಮುಖಂಡ ಹೊಳಬಸು ಶೆಟ್ಟರ ಸಂಬಂಧಪಟ್ಟ ಅಧಿಕಾರಿಗಳಿಗೆ ಗಡುವು ನೀಡಿದ್ದಾರೆ. 

ಪಟ್ಟಣದ ಮೂಕೇಶ್ವರಿ ದೇವಸ್ಥಾನದಲ್ಲಿ ಭಾನುವಾರ ಸೇರಿದ ನಾಗರಿಕರ ಸಭೆಯಲ್ಲಿ ಮಾತನಾಡಿದ ಅವರು, ಸಂಬಂಧಪಟ್ಟ ರಾಜ್ಯ ಹೆದ್ದಾರಿ ಇಲಾಖೆಯವರು ಕಾಮಗಾರಿಯನ್ನು ವೃಥಾ ವಿಳಂಬ ಮಾಡುತ್ತಿದ್ದಾರೆ. ತಾವು ಮಾಡಬೇಕಿದ್ದ ಅವಧಿ ಸಹ ಮುಗಿದಿದೆ. ಆದರೆ ರಸ್ತೆ ಪೂರ್ಣವಾಗಿಲ್ಲ. ಇದರಿಂದ ಮುಂದುವರೆದ ರಸ್ತೆ ಅಭಿವೃದ್ಧಿ ಕಾಮಗಾರಿಗಳು ಸಹ ವಿಳಂಬವಾಗುತ್ತಿವೆ. ನಾವು ಗದ್ದುಗೆಯನ್ನು ಸ್ಥಳಾಂತರಿಸಿ ಎಂದು ಹೇಳುತ್ತಿಲ್ಲ. ವೈಜ್ಞಾನಿಕವಾಗಿ ತಮ್ಮ ಯೋಜನೆ ಹೇಗಿದೆಯೋ ಹಾಗೆ ರಸ್ತೆ ಮಾಡಿರಿ. ಆದರೆ ವೃಥಾ ಕಾಲಹರಣ ಮಾಡುತ್ತಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದರು. 

ಮಾಜಿ ಸಿ.ಎಂ. ಶಾಸಕ ಸಿದ್ಧರಾಮಯ್ಯನವರು ಮತಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡುತ್ತಿದ್ದಾರೆ. ಅದರ ಸದುಪಯೋಗ ಮಾಡಿಕೊಳ್ಳಬೇಕಿದೆ. ಕೆಲ ಪಟ್ಟಬದ್ಧ ಹಿತಾಸಕ್ತಿಯ ವಿರೋಧಿಗಳು ಮೇಲಿಂದ ಮೇಲೆ ವಿರೋಧ ಮಾಡುತ್ತಿರುವುದು ಸರಿಯಲ್ಲ. ಅಭಿವೃದ್ಧಿ ವಿಷಯ ಬಂದಾಗ ವೈಯಕ್ತಿಕ ಸ್ವಾರ್ಥ ಬಿಟ್ಟು ತ್ಯಾಗ ಮನೋಭಾವನೆ ಬೆಳೆಸಿಕೊಳ್ಳಬೇಕು.  ಪಟ್ಟಣದ ಅಭಿವೃದ್ಧಿ ವಿಷಯ ಬಂದಾಗ ನಾವು ಸತ್ತರೂ ಅಭಿವೃದ್ಧಿ  ಮುಂದುವೆರೆಯಬೇಕು ಎಂದರು. 

ರಸ್ತೆ ಕಾಮಗಾರಿಗೆ ಅಡ್ಡಿ: ಪಟ್ಟಣದ ಕೆಲ ಪಟ್ಟಬದ್ಧ ಹಿತಾಸಕ್ತಿಯ ಕೆಲವರು ಪಟ್ಟಣದ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಆರಂಭದಿಂದಲೂ ವಿರೋಧಿಸುತ್ತಲೇ ಬಂದಿದ್ದಾರೆ. ಇಂಥವರು ತಮ್ಮ ಧೋರಣೆಯನ್ನು ಬದಿಗಿಒಟ್ಟು ಪಟ್ಟಣದ ಅಭಿವೃದ್ಧಿಗೆ ಸಹಕರಿಸಬೇಕು. ಅಭಿವೃದ್ಧಿಗೆ ವೃಥಾ ಅಡ್ಡಿಪಡಿಸಬೇಡಿ ಎಂದು  

ಪುರಸಭೆ ಅಧ್ಯಕ್ಷೆ ಶಿಲ್ಪಾ ಹಳ್ಳಿ, ಉಪಾಧ್ಯಕ್ಷೆ ಶರೀಫಾ ಮಂಗಳೂರ, ಮಾಜಿ ಅಧ್ಯಕ್ಷ ರಾಜು ತಾಪಡಿಯಾ, ನಾಗಪ್ಪ ಗೌಡರ್, ಪುರಸಭೆ ಸದಸ್ಯ ವಿನೋದ ಮದ್ದಾನಿ, ವಿಷ್ಣು ಬಳಿಗೇರ, ಶ್ರೀಕಾಂತ ಧಾರವಾಡ, ಪ್ರಕಾಶ ಗಾಯದ, ಸಂಜಯ ಬರಗುಂಡಿ, ಗಣೇಶ ಹೆಗಡೆ, ಅಶೋಕ ರೋಜಿ, ವಕೀಲರ ಸಂಘದ ಅಧ್ಯಕ್ಷ ರಾಂಪೂರ, ಉಮೇಶ ಹುನಗುಂದ, ಜುಗಲಕಿಶೋರ ಭಟ್ಟಡ, ಮಹಾಂತೇಶ ಸರ್‌ಗಣಾಚಾರಿ, ಸಂತೋಷ ನಾಯನೇಗಲಿ  ಸೇರಿದಂತೆ ಇತರರು ಕಾಮಗಾರಿ ಶೀಘ್ರ ಆರಂಭಿಸಲು  ಒತ್ತಾಯಿಸಿದರು. ಸಾಗರ ಕೊಣ್ಣೂರ, ಗೋಪಾಲ ಭಟ್ಟಡ, ಎಸ್‌.ಎಂ.ಪಾಟೀಲ, ಹಣಮಂತ ಕಳ್ಳಿಗುಡ್ಡ ಸೇರಿದಂತೆ ಇನ್ನಿತರರು ಇದ್ದರು. 

ತಹಸೀಲ್ದಾರರಿಗೆ ಮನವಿ: ಸುಮಾರು ನೂರಕ್ಕೂ ಹೆಚ್ಚು ಪಟ್ಟಣದ ಪ್ರಮುಖರಿಂದ ಸಹಿ ಮಾಡಿದ ಮನವಿಯನ್ನು ತಹಸೀಲ್ದಾರರಿಗೆ ನೀಡಿ, ಗದ್ದುಗೆ ಪಕ್ಕದಲ್ಲಿ ಸ್ಥಗಿತವಾದ  ರಸ್ತೆ ಕಾಮಗಾರಿಯನ್ನು ತಕ್ಷಣ ಆರಂಭಿಸುವಂತೆ ಒತ್ತಾಯಸಿ ಮನವಿ ನೀಡಿದರು.  

ಸತ್ಯಾಗ್ರಹ ಎಚ್ಚರಿಕೆ: ಆ.4 ರವರೆಗೆ ಗಡುವು ನೀಡಲಾಗಿದ್ದು ರಸ್ತೆ ಕಾಮಗಾರಿ ಆರಂಭಿಸದಿದ್ದರೆ ಪಟ್ಟಣದ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಹಿರಿಯರು ಹಾಗೂ ಯುವಕರಿಂದ ಗೆದ್ದಾರಿ ಕಾಮಗಾರಿ ಸ್ಥಗಿತಗೊಂಡ ಸ್ಥಳದಲ್ಲಿ ಅಂದರೆ ಹೆಸ್ಕಾಂ ಕಚೇರಿ ಹತ್ತಿರ ಪ್ರತಿಭಟನೆಗೆ ಕೊಡುವುದಾಗಿ ಹೊಳಬಸು ಶೆಟ್ಟರ್ ಅಧಿಕಾರಿಗಳನ್ನು ಎಚ್ಚರಿಸಿದೆ.  

ಮೌನವಹಿಸಿದ ಇಲಾಖೆ: ರಾಜ್ಯ ಹೆದ್ದಾರಿ ಕಾಮಗಾರಿಯನ್ನು ಕೈಗೆತ್ತಿಕೊಂಡಿರುವ ಲೋಕೋಪಯೋಗಿ ಇಲಾಖೆ ತನ್ನ ಕಾಲಾವಧಿ ಹಾಗೂ ಅಧಿಕಾರ ವ್ಯಾಪ್ತಿಯಲ್ಲಿ ರಸ್ತೆ ಎಸ್ತೆ ಕಾಮಗಾರಿ ಮಾಡಿ ಮುಗಿಸಬೇಕಿತ್ತು. ಆದರೆ ಕಾಲವಿಳಂಬ ಮಾಡುತ್ತ ಪಟ್ಟಣದಲ್ಲಿ ಗದ್ದುಗೆ ವಿಷಯವಾಗಿ ಸತ್ಯಾಗ್ರಹಗಳು ಆರಂಭವಾಗಿದ್ದರೂ ಮೌನವಾಗಿ ಕುಳಿತಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ನ್ಯಾಯಾಲಯದ ಗೈಡ್‌ಲೈನ್ಸ್‌ ಪ್ರಕಾರ ಹಾಗೂ ಕಾಮಗಾರಿಯ ಅನುಮೋದಿತ ಯೋಜನೆಯ ಪ್ರಕಾರ ಮಾಡಿ ಮುಗಿಸಬೇಕಿತ್ತು. ಆದರೆ ವೃಥಾ ಕಾಲಹರಣ ಮಾಡುತ್ತ ಪಟ್ಟಣದಲ್ಲಿ ಎಲ್ಲ ರಾಜಕೀಯ ಪಕ್ಷಗಳ ಹಾಗೂ ಸಾರ್ವಜನಿಕರ ಸತ್ಯಾಗ್ರಹಗಳಂತಹ ಕ್ರಮಕ್ಕೆ ಈ ಮೌನ ದಿನೇ ದಿನೇ ರಾಜಕೀಯ ತಿರುವು ಪಡೆದುಕೊಳ್ಳುತ್ತಿದೆ ಎಂದು ಜನ ಹೇಳುತ್ತಿದ್ದಾರೆ.  

ಸುದ್ದಿ ಓದಿ