ಇಂಡಿ

ದಯಾಸಾಗರ ಪಾಟೀಲ್ ಜನ್ಮ ದಿನದ ನಿಮಿತ್ಯ ಹಣ್ಣು-ಹಂಪಲು ವಿತರಣೆ

ದಯಾಸಾಗರ ಪಾಟೀಲ್ ಜನ್ಮ ದಿನದ ನಿಮಿತ್ಯ ಹಣ್ಣು-ಹಂಪಲು ವಿತರಣೆ

ಇಂಡಿ: ಬಿ.ಜೆ.ಪಿ ಜಿಲ್ಲಾ ಉಪಾಧ್ಯಕ್ಷ ದಯಾಸಾಗರ ಪಾಟೀಲ ಅವರ 50ನೇ ಜನ್ಮದಿನವನ್ನು ಶುಕ್ರವಾರರಂದು ಸಾವಿರಾರು ಜನ ಅಭಿಮಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತರು ಸೇರಿ ಅದ್ದೂರಿಯಾಗಿ ಆಚರಿಸಿದರು. 

ಪಟ್ಟಣದ ಸೇವಾಲಾಲ್ ಸರ್ಕಲ್‌ನಿಂದ ದಯಾಸಾಗರ ಪಾಟೀಲ್ ಅವರಿಗೆ ಅಭಿಮಾನಿಗಳು ತೆರೆದ ವಾಹನದಲ್ಲಿ ನಿಲ್ಲಿಸಿ ಮೆರವಣಿಗೆ ಮೂಲಕ ಅಗಸಿ ಹನುಮಾನ ದೇವಸ್ಥಾನದವರೆಗೆ ಕರೆದೊಯ್ದರು. 

ಮೆರವಣಿಗೆಯುದ್ದಕ್ಕೂ ಹರ ಹರ ಮೋದಿ, ಘರ್ ಘರ್ ಮೋದಿ, ಬಿಜೆಪಿ ಪಕ್ಷಕ್ಕೆ ಜಯವಾಗಲಿ ಎಂದು ಜೈಘೋಷ ಮೊಳಗಿಸಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. 

ನಂತರ ಬಸವೇಶ್ವರ ವೃತ್ತದ ಮೂಲಕ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಸಾವಿರಾರು ಯುವಕರು, ಕಾರ್ಯಕರ್ತರು ಬೈಕ್ ರಾ​‍್ಯಲಿ ಮುಖಾಂತರ ಶಾಂತೇಶ್ವರ ದೇವಸ್ಥಾನಕ್ಕೆ ತೆರಳಿದರು. 

ಶಾಂತೇಶ್ವರ ದೇವಸ್ಥಾನದಲ್ಲಿ ವಿಶೇಷ ಅಭಿಷೇಕ, ಪೂಜೆ ನೆರವೇರಿಸಿ ದಯಾಸಾಗರ್ ಪಾಟೀಲ್ ಮುಂಬರುವ ಚುನಾವಣೆಯಲ್ಲಿ ಗೆಲುವುಸಾಧಿಸಲಿ ಎಂದು ಪ್ರಾರ್ಥಿಸಿದರು. ಇದೆ ವೇಳೆ ನೂರಾರು ಕಾರ್ಯಕರ್ತರು ಸಾರ್ವಜನಿಕ ಆಸ್ಪತ್ರೆಗೆ ತೆರಳಿ ಬಡರೋಗಿಗಳಿಗೆ ಹಣ್ಣು-ಹಂಪಲು ವಿತರಣೆ ಮಾಡಿದರು. 


ವಿರಾಜ ಪಾಟೀಲ, ಸೋಮಶೇಖರ ದೇವರ, ಶ್ರೀಶೈಲಗೌಡ ಬಿರಾದಾರ, ಚನ್ನುಗೌಡ ಪಾಟೀಲ ರೋಡಗಿ, ಬತ್ತುಸಾಹುಕಾರ ಹಾವಳಗಿ,  ಅನೀಲಗೌಡ ಬಿರಾದಾರ,  ಪ್ರದೀಪ ಉಟಗಿ,   ಮಲ್ಲು ಹಾವಿನಾಳಮಠ,  ಪಾಪು ಕಿತ್ತಲಿ, ಬಾಳು ಮುಳಜಿ,  ರಮೇಶ ಧರೇನವರ, ವಿಜಯಕುಮಾರ ಮೂರಮನ್, ಮಲ್ಲು ವಾಲೀಕಾರ, ರಮೇಶ ಗುಡ್ಡೆವಾಡಿ, ಸತೀಶಗೌಡ ಪಾಟೀಲ, ದಯಾನಂದ ಹುಬ್ಬಳಿ, ಶಾಂತುಗೌಡ ಪಾಟೀಲ, ಶಾಂತು ಕಂಬಾರ, ಸೇರಿದಂತೆ  ತಾಲೂಕಿನ ವಿವಿಧ ಗ್ರಾಮಗಳಿಂದ ನೂರಾರು ಬಿಜೆಪಿ ಕಾರ್ಯಕರ್ತರು ಅಭಿಮಾನಿಗಳು ಪಾಲ್ಗೊಂಡಿದ್ದರು. 


ಬಾಕ್ಸ- 

ನನ್ನ ಜನ್ಮ ದಿನದಂದು ಸಾವಿರಾರು ಜನ ಸೇರಿ, ಬೃಹತ್ ಮೆರವಣಿಗೆ ಮಾಡಿದ್ದಲ್ಲದೆ ಹಳ್ಳಿಗಳಲ್ಲಿಯೂ ಸಹ ಅಭಿಮಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತರು ಗ್ರಾಮ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಶುಭ ಹಾರೈಸಿದ್ದೀರಿ, ಸರ್ವಸಮುದಾಯ ಪ್ರೀತಿ, ವಿಶ್ವಾಸಗಳಿಸಿರುವೆ. ನಿಮ್ಮೆಲ್ಲರ ಆಶೀರ್ವಾದ ನನ್ನ ಮೇಲಿರಲಿ ಮುಂಬರುವ ದಿನಗಳಲ್ಲಿಯೂ ಇದೇ ಇತ್ಸಾಹ ಇಟ್ಟು ಕಾರ್ಯ ನಿರ್ವಹಿಸಿದ್ದೇ ಆದರೆ ಈ ಬಾರಿ ಕ್ಷೇತ್ರದಲ್ಲಿ ನನ್ನ ಗೆಲುವು ಶತಸಿದ್ಧವಾಗಲಿದೆ ಎಂದು ದಯಾಸಾಗರ ಪಾಟೀಲ ತಮ್ಮ ಅಭಿಮಾನಿಗಳಿಗೆ ಕಿವಿಮಾತು ಹೇಳಿದರು. 


ಸುದ್ದಿ ಓದಿ