ಲಿಂ.ಸಿದ್ರಾಮಪ್ಪ ಹನಮಶೆಟ್ಟಿ ಸ್ಮರಣಾರ್ಥ ದತ್ತಿ ಉಪನ್ಯಾಸ ಕಾರ್ಯಕ್ರಮ
ಸಿಂದಗಿ: ಕಲ್ಯಾಣ ನಗರದ ಬಸವಮಂಟಪದಲ್ಲಿ ತಾಲೂಕಾ ಶರಣ ಸಾಹಿತ್ಯ ಪರಿಷತ್ ಮತ್ತು ರಾಷ್ಟ್ರೀಯ ಬಸವದಳ ಸಿಂದಗಿ ಇವರ ಸಂಯುಕ್ತ ಆಶ್ರಯದಲ್ಲಿ ಲಿಂ.ಮಲ್ಲೇಶಪ್ಪ ಮರೆಪ್ಪ ಶಹಾಪೂರ ಇವರ ಸ್ಮರಣಾರ್ಥ ದತ್ತಿ ದಾಸೋಹಿಗಳು ಶರಣೆ ದೀಪಾ ಅರುಣ ಶಹಾಪೂರ ಹಾಗೂ ಲಿಂ.ಸಿದ್ದಮ್ಮ ಮತ್ತು ಲಿಂ.ಸಿದ್ರಾಮಪ್ಪ ಹನಮಶೆಟ್ಟಿ ಸ್ಮರಣಾರ್ಥ ದತ್ತಿ ದಾಹೋಹಿಗಳು ಶರಣ ಬಸವರಾಜ.ಸಿ ಹನಮಶೆಟ್ಟಿ ಇವರಿಂದ ಹಾಗೂ ಬಸವಧರ್ಮ ಪೀಠದ ಪ್ರಥಮ ಮಹಿಳಾ ಜಗದ್ಗುರು ಲಿಂ.ಡಾ.ಮಾತೆ ಮಹಾದೇವಿ ಅವರ 76 ನೇ ಜನ್ಮ ದಿನಾಚರಣೆ ಏರಿ್ಡಸಲಾಗಿತ್ತು
ಉಪನ್ಯಾಸಕರಾಗಿ ಶೈಲಜಾ ಜಗದೀಶ ಪಟ್ಟಣಶೆಟ್ಟಿ ಅವರು ವಚನ ವಿಶ್ಲೇಷಿಸಿ ಲಿಂ. ಮಲ್ಲೇಶಪ್ಪ ಮರೆಪ್ಪ ಶಹಾಪೂರ ಕುರಿತು ಮಾತನಾಡಿದರು. ಇನ್ನೋರ್ವ ಉಪನ್ಯಾಸಕರಾಗಿ ಶಕುಂತಲಾ ಎಸ್.ಹಿರೇಮಠ ರವರು ಬಸವತತ್ವ, ವಚನಸಾಹಿತ್ಯ ಲಿಂ.ಸಿದ್ದಮ್ಮ ಮತ್ತು ಲಿಂ.ಸಿದ್ರಾಮಪ್ಪ ಹನಮಶೆಟ್ಟಿ ಕುರಿತು ಮಾತನಾಡಿದರು.
ಅಧ್ಯಕ್ಷತೆವಹಿಸಿದ ತಾಲೂಕಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಚನ್ನಪ್ಪ ಕತ್ತಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು, ಬಸವದಳದ ಅಧ್ಯಕ್ಷ ಶಿವಾನಂದ ಕಲಬುರಗಿ ಹಾಗೂ ವಿಜಯಪುರದ ಈರಣ್ಣ ತೊಂಡಿಕಟ್ಟಿ ಅವರು ಅತಿಥಿಗಳಾಗಿ ಮಾತನಾಡಿದರು. ಶಿವಕುಮಾರ ಶಿವಸಿಂಪಿ ಸ್ವಾಗತಿಸಿದರು, ಶಂಕರ ಕಟ್ಟಿಮನಿ ನಿರೂಪಣೆ ಮಾಡಿದರು, ಸಂಗಣ್ಣ ಬ್ಯಾಕೋಡ ಶರಣು ಸಮರೆ್ಣ ಮಾಡಿದರು, ಮುಖ್ಯಗುರುಗಳಾದ ಎಂ.ಜಿ.ತಳವಾರರವರು ಹಾಗೂ ಗುರುಪಾದ ತಾರಾಪೂರ ರವರು ಮಾತೆ ಮಹಾದೇವಿಯವರ ಹಾಗೂ ಲಿಂ.ಪೂಜ್ಯಶ್ರೀ ಜಗದ್ಗುರು ಲಿಂಗಾನಂದ ಶ್ರೀಗಳ. ಲಿಂಗಾಯತ ಹೋರಾಟ, ಕಲ್ಯಾಣಪರ್ವ, ಶರಣಮೇಳ, ಬಸವತತ್ವ ಕುರಿತು ಮಾತನಾಡಿದರು
ವಿಜಯಪುರದ ಶಿವಶಂಕರ ಯಾದಗೀರಿ, ಮಹಾದೇವ ಕುರೆ, ಸಂಗಮೇಶ ಹಿಟ್ಟಿ, ಸಿಂದಗಿಯ ವಿರೇಶ ಇವಣಿ, ಜಗದೀಶ ಕಲಬುರಗಿ, ಕಲ್ಲಪ್ಪ ತಾರಾಪೂರ, ಬಸವರಾಜ ಕಲಬುರಗಿ, ಮಹಾಂತೇಶ ತಳ್ಳೊಳ್ಳಿ, ಜಯಶ್ರೀ ಹೂಗಾರ, ಎಂ.ಜಿ.ಬಿರಾದಾರ ಮುಂತಾದವರು ಉಪಸ್ಥಿತರಿದ್ದರು.