ತುಂಗಾಜಲ ಚೌಡೇಶ್ವರಿ ದೇವಿಯ ಅವತಾರಗಳ ದರ್ಶನ
ರಾಣೆಬೆನ್ನೂರು 4: ವಾಣಿಜ್ಯ ನಗರ, ಮಾರುತಿ ನಗರದ ಶ್ರೀಬೆಂಚಿ ತುಂಗಾಜಲ ಚೌಡೇಶ್ವರಿ ದೇವಿಯ ನವರಾತ್ರಿಯ ದಸರಾ ಮಹೋತ್ಸವದ ನಿಮಿತ್ತವಾಗಿ ಗುರುವಾರ ಘಟಸ್ಥಾಪನೆಗೊಂಡಿದ್ದು, ನಿತ್ಯವೂ ಒಂಬತ್ತು ದಿವಸಗಳ ಕಾಲ ನಾಡಿನ ನವ ದೇವಿಯರ ಅವತಾರಗಳಲ್ಲಿ, ಲಕ್ಷಾಂತರ ಭಕ್ತರಿಗೆ ತನ್ನ ದರ್ಶನಾಶೀರ್ವಾದ ಕರುಣಿಸಲಿದ್ದಾಳೆ ಎಂದು ದೇವಸ್ಥಾನ ಸಮಿತಿಯ ಅಧ್ಯಕ್ಷ ಶೇಕಪ್ಪ ಹೊಸಗೌಡ್ರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.