ಧಾರವಾಡ - ಹುಬ್ಬಳ್ಳಿ

ಪವಿತ್ರ ಶ್ರಾವಣ ಮಾಸದಲ್ಲಿ ಮಹಾತ್ಮರ, ಪುಣ್ಯಪುರುಷರ ದರ್ಶನ

ಪವಿತ್ರ ಶ್ರಾವಣ ಮಾಸದಲ್ಲಿ ಮಹಾತ್ಮರ, ಪುಣ್ಯಪುರುಷರ ದರ್ಶನ

ಹುಬ್ಬಳ್ಳಿ,08: ಪವಿತ್ರ ಶ್ರಾವಣ ಮಾಸದಲ್ಲಿ ಮಹಾತ್ಮರ, ಪುಣ್ಯಪುರುಷರ, ಮಹಾಸ್ವಾಮಿಜಿಗಳ ದರ್ಶನ ಆಶೀರ್ವಾದ ಪಡೆಯುವ ಅಂಗವಾಗಿ ಕಪ್ಪತಗುಡ್ಡದ ನಂದಿವೇರಿ ಸಂಸ್ಥಾನಮಠದ ಪೂಜ್ಯರಾದ ಶಿವಕುಮಾರ ಮಹಾಸ್ವಾಮಿಜಿ ಅವರನ್ನು ಭೇಟಿ ಮಾಡಿ ಗೌರವ ಪೂರ್ವಕವಾಗಿ ಶ್ರದ್ಧಾ ಭಕ್ತಿಯಿಂದ ಗೌರವ ನಮನ, ಪ್ರಣಾಮಗಳನ್ನು ಸಲ್ಲಿಸಿದರು. ದರ್ಶನ ಆಶೀರ್ವಾದ ಪಡೆದರು.  

ಸಾವಿರಾರು ಎಕರೆ ವಿಸ್ತಾರ ಪ್ರದೇಶದ ಕಪ್ಪತಗುಡ್ಡ ಅಪಾರ ಓಷಧೀಯ ಸಸ್ಯ ಸಂಪತ್ತನ್ನು ಒಳಗೊಂಡಿದೆ. ಕಪ್ಪತಗುಡ್ಡದಲ್ಲಿ ಅತ್ಯುತ್ತಮ ಓಷಧೀಯುಕ್ತ ಗಾಳಿ ನೀಡುವ ಅಪರೂಪದ ತಾಣ. ಕಪ್ಪತಗುಡ್ಡದಲ್ಲಿ ಈಗಾಗಲೇ 340ಕ್ಕೂ ಅಧಿಕ ಓಷಧೀಯ ಸಸ್ಯಗಳನ್ನು ಗುರುತಿಸಲಾಗಿದೆ.  

ನೂರಾರು ಓಷಧೀಯ ಗಿಡಮೂಲಿಕೆಗಳನ್ನು ಕಪ್ಪತಗುಡ್ಡವು ತನ್ನ ಒಡಲಾಳದಲ್ಲಿ ಜೋಪಾನವಾಗಿ ಇಟ್ಟುಕೊಂಡಿದೆ. ಅದ್ಭುತ ಓಷಧೀಯ ಸಸ್ಯಗಳ ರಾಶಿಯನ್ನು ಉಳಿಸಿ, ಬೆಳೆಸಿ, ಬಳಸಿಕೊಂಡು ಹೊಗುವುದು ಪ್ರತಿಯೊಬ್ಬರ ಕರ್ತವ್ಯ ಹಾಗೂ ಜವಾಬ್ಧಾರಿಯಾಗಿದೆ. 

ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ‌್ಯದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ,  ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ, ಕ,ವಿ.ವಿ.ಸಸ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಎಂ.ಜಯರಾಜ,    ಚನ್ನಬಸಪ್ಪ ಧಾರವಾಡಶೆಟ್ಟರ, ಮುಂತಾದವರು ಇದ್ದರು. 


ಸುದ್ದಿ ಓದಿ