ಸಹಬಾಳ್ವೆ ಸಾರುವ ದಾಂಡಿಯಾ: ಅಂಚಟಗೇರಿ
ಧಾರವಾಡ 12: ನವರಾತ್ರಿಯ ಎಲ್ಲ ದಿನಗಳಲ್ಲೂ ಎದ್ದು ಕಾಣುವಂಥದ್ದು ದಾಂಡಿಯಾ ನೃತ್ಯ. ಇತ್ತೀಚಿನ ವರ್ಷಗಳಲ್ಲಿ ಇದು ಎಲ್ಲೆಡೆಯೂ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ಧಾರವಾಡ ಜಿಲ್ಲೆಯಲ್ಲಿಯೂ ಸೀಮಿತ ಸಮುದಾಯಗಳಷ್ಟೆ ಅಲ್ಲದೇ ಎಲ್ಲ ಸಮುದಾಯದವರೂ ಈ ನೃತ್ಯಕ್ಕೆ ಹೆಜ್ಜೆ ಹಾಕುತ್ತಾರೆ.
ಸಹಬಾಳ್ವೆ, ಸಮಾನತೆಯನ್ನು ಪ್ರತಿನಿಧಿಸುವ ಈ ನೃತ್ಯಕ್ಕೆ ಅಲ್ಲಲ್ಲಿ ಅಪಾರ ಪ್ರಮಾಣದಲ್ಲಿ ವ್ಯಾಪಕವಾಗಿ ಆಯೋಜನೆಗೊಂಡಿರುವ ದಾಂಡಿಯಾ ನೃತ್ಯ ಪ್ರದರ್ಶನಗಳ ಕಾರ್ಯಕ್ರಮಗಳೇ ಸಾಕ್ಷಿ ಎಂದು ಮಾಜಿ ಮಹಾಪೌರರು, ಪಾಲಿಕೆ ಸದಸ್ಯರಾದ ಈರೇಶ ಅಂಚಟಗೇರಿ ಹೇಳಿದರು.ಅವರು ಧಾರವಾಡದ ಕಲಾಶಕ್ತಿ ಫೌಂಡೇಷನ್ ವತಿಯಿಂದ ಜಿಲ್ಲಾ ಸಾಹಿತ್ಯ ಸಭಾಭವನದಲ್ಲಿ ದಾಂಡಿಯಾ ನೃತ್ಯ ತರಬೇತಿಯ ಸಮಾರೋಪ ಮತ್ತು ದಾಂಡಿಯಾ ನೃತ್ಯ ಪ್ರದರ್ಶನದಲ್ಲಿ ಮಾತನಾಡುತ್ತಾ ಒಗ್ಗಟನ್ನು ಪ್ರದರ್ಶನ ನೀಡುವ ಜೊತೆಗೆ ಎಲ್ಲರೂ ಒಂದು ಎಂಬ ಭಾವನೆ ಬೆಳೆಸಲು ಸಹಕಾರಿಯಾಗಿದೆ ಎಂದರು. ಮುಖ್ಯ ಅತಿಥಿ ಬಿಜೆಪಿ ಮುಖಂಡರಾದ ಶ್ರೀಮತಿ ಸವಿತಾ ಅಮರಶೆಟ್ಟಿ ಮಾತನಾಡಿ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲು ಸಾಧನೆಯ ಮಾಡುತ್ತಿರುವುದು ಸಂತಸ. ಪ್ರತಿ ಕಾರ್ಯವನ್ನು ಸಹ ಮಾಡುತ್ತಾ ಸಂದರ್ಭಕ್ಕೆ ತಕ್ಕಂತೆ ಸನ್ನಿವೇಶ ನಿಭಾಯಿಸುವ ಶಕ್ತಿ ಮಹಿಳೆಗೆ ಇದೆ. ಹಾಗಾಗಿ ಸಹನಾಮೂರ್ತಿ ಎಂದು ಹೇಳಲಾಗುತ್ತಿದೆ. ದಾಂಡಿಯಾದಿಂದ ಎಲ್ಲರೂ ಒಗ್ಗಟಾಗಿ ಭಾಳ್ವೆನಡೆಸುತ್ತಿರುವುದು ಉತ್ತಮ ಬೆಳವಣಿಗೆ ಎಂದು ಹೇಳಿದರು. ವೇದಿಕೆಯಲ್ಲಿ ಕಲಾಶಕ್ತಿ ಫೌಂಡೇಷನ್ ಅಧ್ಯಕ್ಷರಾದ ಅನ್ನಪೂರ್ಣಾ ಪಾಟೀಲ, ಮುಖ್ಯ ಅತಿಥಿಗಳಾದ ಸಾಹಿತಿ ಮಾರ್ತಾಂಡಪ್ಪ ಕತ್ತಿ, ಚನ್ನಬಸಪ್ಪ ಗೋಕುಲ, ಡಾ ಬಿ.ಆರ್ ರಾಠೋಡ ವೇದಿಕೆಯಲ್ಲಿ ಇದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟನ ಸದಸ್ಯಕಾರ್ಯದರ್ಶಿ ಮಲ್ಲಿಕಾರ್ಜುನ ಸೊಲಗಿ ಅಧ್ಯಕ್ಷೀಯ ಮಾತುಗಳನ್ನಾಡಿದರು.ಕಾರ್ಯಕ್ರಮದಲ್ಲಿ ಅಮೃತಾ ಪಾಟೀಲ ಪ್ರಾರ್ಥಿಸಿದರು. ಪೂಜಾ ಪಾಟೀಲ ಮತ್ತು ನೃತ್ಯ ನಿರ್ದೇಶಕ ಶ್ರೀನಿವಾಸ ಇಂಚರ ನಿರೂಪಿಸಿದರು. ಕಲಾಶಕ್ತಿ ಪೌಂಡೇಷನನ ಕಾರ್ಯದರ್ಶಿ ಮಲ್ಲನಗೌಡ ಪಾಟೀಲ ಪ್ರಸ್ತಾವಿಕವಾಗಿ ಮಾತನಾಡಿದರು. ಸುನೀಲ ಅರಳಿಕಟ್ಟಿ ವಂದಿಸಿದರು.ನಂತರ ಕಲಾಶಕ್ತಿ ಪೌಂಡೇಷನನ ಮಹಿಳೆಯರಿಂದ ಮತ್ತು ಮಕ್ಕಳಿಂದ ದಾಂಡಿಯಾ ನೃತ್ಯವೈಭವ ಕಾರ್ಯಕ್ರಮಗಳು ನಡೆದವು.ಕಾರ್ಯಕ್ರಮದಲ್ಲಿ ಕಲಾಶಕ್ತಿ ಪೌಂಡೇಷನನ ಮಕ್ಕಳು, ಪಾಲಕರು ಇದ್ದರು.