ಡಿ.12ಕ್ಕೆ ದಾನಮ್ಮದೇವಿ ಕಾರ್ತಿಕೋತ್ಸವ
ರಾಣೇಬೆನ್ನೂರ 09: ಸ್ಥಳೀಯ ಕೊಟ್ಟೂರೇಶ್ವರ ನಗರದ ಕೊಟ್ಟೂರೇಶ್ವರ ಮಠದಲ್ಲಿರುವ ದಾನಮ್ಮದೇವಿಯ 8ನೇ ವರ್ಷದ ಜಾತ್ರಾ ಮಹೋತ್ಸವ ಮತ್ತು ಕಾರ್ತಿಕೋತ್ಸವವು ಡಿ.12ರಂದು ಜರುಗಲಿದೆ.
ಅಂದು ಬೆಳಗಿನ ಜಾವ ದೇವಿಗೆ ರುದ್ರಾಭಿಷೇಕ, ಅಷ್ಟೋತ್ತರ, ಮುಂಜಾನೆ 10 ಗಂಟೆಗೆ ಮುತ್ತೈದೆಯರಿಗೆ ಉಡಿ ತುಂಬುವುದು, ಮಧ್ಯಾಹ್ನ 12.30ಕ್ಕೆ ಪಲ್ಲಕ್ಕಿ ಉತ್ಸವವು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಲಿದೆ.
ಅಂದು ರಾತ್ರಿ 7.30ಕ್ಕೆ ದಾನಮ್ಮದೇವಿಯ ಕಾರ್ತಿಕೋತ್ಸವ ಮತ್ತು ವೈವಿಧ್ಯಮಯ ಧಾರ್ಮಿಕ ಕಾರ್ಯಕ್ರಮಗಳು ನೇರವೇರಲಿದೆ ಎಂದು ದೇವಸ್ಥಾನ ಸಮಿತಿಯು ತಿಳಿಸಿದೆ.