ಇಂಡಿ

ದಾನಮ್ಮದೇವಿ ಪ್ರಥಮ ವರ್ಷದ ಜಾತ್ರಾ ಮಹೋತ್ಸವ

ದಾನಮ್ಮದೇವಿ ಪ್ರಥಮ ವರ್ಷದ ಜಾತ್ರಾ ಮಹೋತ್ಸವ

ಇಂಡಿ: ಪಟ್ಟಣದ ದಾನಮ್ಮದೇವಿ ದೇವಸ್ಥಾನದಲ್ಲಿ ದಾನಮ್ಮದೇವಿ ಪ್ರಥಮ ವರ್ಷದ ಜಾತ್ರಾ ಮಹೋತ್ಸವ ಆ, 2 ಮತ್ತು 3 ರಂದು ಜರುಗಲಿದೆ ಎಂದು ಜಾತ್ರಾ ಸಮಿತಿ ಅಧ್ಯಕ್ಷ ಅನೀಲಪ್ರಸಾದ ಏಳಗಿ ಹೇಳಿದರು. 

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರವಿವಾರ ಅ.2 ರಂದು ಬೆಳಗ್ಗೆ 6 ಗಂಟೆಗೆ ವೇದಮೂರ್ತಿ ಮಹಾಂತೇಶ ಹಿರೇಮಠ ಶಾಸ್ತ್ರಿಗಳಿಂದ ದಾನಮ್ಮದೇವಿಗೆ ರುದ್ರಾಭಿಷೇಕ ಹಾಗೂ ಚಂಡಿಕಾ ಹೋಮ ನಡೆಯುವದು. ಸಾಯಂಕಾಲ 4 ಗಂಟೆಗೆ ರಂಗೋಲಿ ಸ್ಪರ್ಧೆ ದೇವಸ್ಥಾನದಲ್ಲಿ ನಂತರ ಬಾಲ ಮುತ್ಯೆದೆಯರಿಗೆ ಉಡಿ ತುಂಬುವ ಹಾಗೂ ಹಿರಿಯ ನಾಗರಿಕರಿಗೆ ಹಾಗೂ ಸಮಾಜ ಸೇವಕರಿಗೆ ಸನ್ಮಾನ ಸಮಾರಂಭ, ಸಂಜೆ 6 ಗಂಟೆಗೆ ಅಮೃತಾನಂದ ಶ್ರೀಗಳಿಂದ ಹಿತವಚನ ಕಾರ್ಯಕ್ರಮ ಜರುಗಲಿದೆ. 

ಸೋಮವಾರ ಅ.3 ರಂದು ಬೆಳಗ್ಗೆ 8 ಗಂಟೆಗೆ ಶ್ರೀ ಬಸವರಾಜೇಂದ್ರ ದೇವಸ್ಥಾನದಿಂದ ಬಸವೇಶ್ವರ ವೃತ್ತದ ವರೆಗೆ ದಾನಮ್ಮದೇವಿ ರಥೋತ್ಸವ, ಪಲ್ಲಕ್ಕಿ ಉತ್ಸವ ಹಾಗೂ ಸುಮಂಗಲೆಯರಿಂದ ಕುಂಭ ಮೆರವಣೆಗೆ ಯೊಂದಿಗೆ ದಾನಮ್ಮದೇವಿ ದೇವಸ್ಥಾನಕ್ಕೆ ತಲುಪುವದು. ನಂತರ ಸುಮಂಗಲೆಯರಿಂದ ಉಡಿ ತುಂಬುವ ಕಾರ್ಯಕ್ರಮ ಜರುಗುವದೆಂದು ಅನೀಲ ಪ್ರಸಾದ ಏಳಗಿ ತಿಳಿಸಿದ್ದಾರೆ. 

ಪತ್ರಿಕಾಗೋಷ್ಠಿಯಲ್ಲಿ ಕಾಸುಗೌಡ ಬಿರಾದಾರ, ಡಾ. ಮಲ್ಲಿಕಾರ್ಜುನ ಬಿರಾದಾರ, ಶಿವಾನಂದ ತಾಂಬೆ, ಅರವಿಂದ ಹಂಜಗಿ ಮತ್ತಿತರಿದ್ದರು. 


ಸುದ್ದಿ ಓದಿ