ವಿಜೃಂಭಣೆಯಿಂದ ದಾನಮ್ಮದೇವಿ ರಥೋತ್ಸವ: ಸಹಸ್ರಾರು ಭಕ್ತರು ಭಾಗಿ
ಬೈಲಹೊಂಗಲ 08: ಪಟ್ಟಣದ ಚೆನ್ನಮ್ಮ ಉಪನಗರದ ದಾನಮ್ಮದೇವಿ ದೇವಸ್ಥಾನದ 13ನೇ ವರ್ಷದ ಜಾತ್ರಾ ಮಹೋತ್ಸವದ ಮಹಾರಥೋತ್ಸವವು ಸಹಸ್ರಾರು ಭಕ್ತ ಸಮೂಹ ಮಧ್ಯೆ ಶನಿವಾರ ಸಂಜೆ ವಿಜೃಂಭಣೆಯಿಂದ ನೆರವೇರಿತು.
ಪಟ್ಟಣದ ಶ್ರೀ ದಾನಮ್ಮದೇವಿ ದೇವಸ್ಥಾನದಿಂದ ಆರಂಭವಾದ ರಥೋತ್ಸವ ಹರ, ಹರ ಮಹಾದೇವ, ದಾನಮ್ಮದೇವಿಗೆ ಜೈ, ಸಕಲ ಸಾಧು ಸಂತ ಮಹಾರಾಜ ಕೀ ಜೈ ಎಂಬ ಜಯ ಘೋಷಗಳೊಂದಿಗೆ ಮನಮೋಹಕವಾಗಿ ಜರುಗಿ ದೇವಸ್ಥಾನಕ್ಕೆ ಬಂದು ತಲುಪಿತು.
ರಥಕ್ಕೆ ತೆಂಗು, ಬಾಳೆ,ಕಬ್ಬು, ರುದ್ರಾಕ್ಷೀ, ಶೆಂಗಾ, ಹತ್ತಿ, ಬಣ್ಣದ ಹಾಳೆ, ವಿವಿದ ತರತರನಾದ ಪುಷ್ಪಮಾಲೆ, ಮುತ್ತಿನ ಹಾರದಿಂದ ರಥವು ಕಂಗೊಳಿಸುತ್ತಿತ್ತು. ರಥೋತ್ಸವಕ್ಕೆ ಭಕ್ತರು ಶ್ರದ್ಧೆ, ಭಕ್ತಿಯಿಂದ ಕೈ ಮುಗಿದು ಹೂವು, ಬಾಳೆಹಣ್ಣು, ಕಾರಿಕು ಸಮರ್ಿಸಿದರು. ರಥೋತ್ಸವ ಸಾಗಿದ ಮಾರ್ಗದಲ್ಲಿ ಭಕ್ತರು ನೀರುಣಿಸಿ ಗೌರವ ಸಲ್ಲಿಸಿದರು. ರಥದಲ್ಲಿ ದಾನಮ್ಮದೇವಿಯ ಮೂರ್ತಿ ರಥದ ವೈಭವು ಹೆಚ್ಚಿಸಿತ್ತು.
ಶೆಟಗಾರ ಚಾಳ, ಕಿತ್ತೂರ ಚೆನ್ನಮ್ಮ ನಗರ 2,3,4 ಅಡ್ಡ ರಸ್ತೆಯ ಭಕ್ತರು, ಶ್ರೀ ದಾನಮ್ಮದೇವಿ ಯುವಕ ಮಂಡಳ ವತಿಯಿಂದ ರಥಕ್ಕೆ ವಿವಿಧ ತರಹದ ಪುಷ್ಪಮಾಲೆ ಸಮರ್ಿಸಲಾಯಿತು.
ಅಪಾರ ಸಂಖ್ಯೆಯ ಭಕ್ತರು ಬೆಳಗ್ಗೆಯಿಂದ ರಾತ್ರಿಯವರಿಗೆ ದೇವಸ್ಥಾನಕ್ಕೆ ತೆರಳಿ ಶ್ರೀ ದಾನಮ್ಮದೇವಿಯ ದರ್ಶನ ಪಡೆದುಕೊಂಡರು.
ಹೊಸೂರ ಗುರುಮಡಿವಾಳೇಶ್ವರಮಠದ ಮಡಿವಾಳೇಶ್ವರ ಸ್ವಾಮಿಜಿ, ಮುನವಳ್ಳಿ ಮುರಘರಾಜೇಂದ್ರ ಸ್ವಾಮಿಜಿ, ಶಾಖಾ ಮೂರುಸಾವಿರಮಠದ ಪ್ರಭುನೀಲಕಂಠ ಸ್ವಾಮೀಜಿ, ಮುತ್ನಾಳ ಶ್ರೀಗಳು ರಥಕ್ಕೆ ಪೂಜಿ ಸಲ್ಲಿಸಿ ಚಾಲನೆ ನೀಡಿದರು.
ದಾನಮ್ಮದೇವಿ ಟ್ರಸ್ಟ ಕಮೀಟಿ ಅಧ್ಯಕ್ಷ ಪ್ರಮೋದಕುಮಾರ ವಕ್ಕುಂದಮಠ, ಜಿ.ಜಿ.ಸಾಲಿ, ವಿ.ಕೆ.ಬಡ್ಲಿ, .ಸಿ.ಕರಿಕಟ್ಟಿ, ಜಗದೀಶ ಜಂಬಗಿ, ಜಿ.ಬಿ.ಶೀಗಿಹಳ್ಳಿ ,ನೀಲಪ್ಪ .ಕಲ್ಲೂರ, ಬಿ.ಎಮ್.ಮೂಲಿಮನಿ, ವಿ.ಎ.ಅಣ್ಣಿಗೇರಿ, ಈಶ್ವರ. ಅಂಗಡಿ, ಎಮ್.ಬಿ.ರೊಟ್ಟ, ಮೆಳವಂಕಿ ಗುರುಗಳು, ಸಿದ್ಧನಗೌಡರ ವಕೀಲರು, ಸೊಮಪ್ಪ.ಶಿರವಂತಿ, ಅನಿಲ ರಾಜನ್ನವರ , ಮಹಾಂತೇಶ ಅವರಾದಿ, ಬಸಲಿಂಗಯ್ಯ ಹಿರೇಮಠ, ಹಾಗೂ ದಾನಮ್ಮದೇವಿ ದೇವಸ್ಥಾನದ ಟ್ರಸ್ಟ್ ಕಮಿಟಿಯ ಸರ್ವ ಸದಸ್ಯರು, ಹಾಗೂ ಸೇರಿದಂತೆ ಸಹಸ್ರಾರು ಜನ ಸಂಖ್ಯೆಯಲ್ಲಿ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.