ದಲಿತ ಸಮಾಜ ಒಂದು ಪೀಡಿತ ಸಮಾಜ: ಶಾಸಕ ಗುಡಗುಂಟಿ ಮತ್ತೊಂದು ವಿವಾದಾತ್ಮಕ ಹೇಳಿಕೆ
ಜಮಖಂಡಿ 27: ಮೀಸಲಾತಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಕುರಿತು ಸುದ್ದಿಗೋಷ್ಠಿಯಲ್ಲಿ ಕ್ಷೇಮೆಯಾಚನೆ ನೀಡುವಲ್ಲಿ ಜಮಖಂಡಿ ಶಾಸಕ ಜಗದೀಶ ಗುಡಗುಂಟಿ ದಲಿತ ಸಮಾಜ ಒಂದು ಪೀಡಿತ ಸಮಾಜವಾಗಿದೆಂದು ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಹಾಗಾದರೆ ದಲಿತ ಸಮಾಜ ಯಾವ ರೋಗದಿಂದ ಪೀಡಿತವಾಗಿದೆಂದು ಬಹಿರಂಗವಾಗಿ ತಿಳಿಸಬೇಕು.ದಲಿತಪರ ಸಂಘಟನೆಯ ನೇತೃತ್ವದಲ್ಲಿ ಅ.30 ರಂದು ಜಮಖಂಡಿ ಬಂದ್ ಕರೆ ನೀಡಲಾಗುತ್ತದೆ ಎಂದು ವಿವಿಧ ದಲಿತಪರ ಸಂಘನೆಯ ಮುಖಂಡರು ಹೇಳಿದರು.
ನಗರದ ಸರಕಾರಿ ಪ್ರವಾಸಿ ಮಂದಿರ ರಮಾ ನಿವಾಸದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು. ಮೀಸಲಾತಿಗೆ ಬಗ್ಗೆ ವಿವಾದಾತ್ಮಕ ಹೇಳಿಕೆಯನ್ನು ನೀಡಿದ ಶಾಸಕ ಜಗದೀಶ ಗುಡಗುಂಟಿ ಅವರ ವಿರುದ್ಧ ವಿವಿಧ ದಲಿತಪರ ಸಂಘಟನೆಗಳು ಹೋರಾಟ ನಡೆಸಿರುವದೊಂದು ಹಾಸ್ಯಾಸ್ಪದವಾಗಿದೆ ಎಂದು ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿ. ದಲಿತ ಸಮಾಜವನ್ನು ತುಳಿಯುವ ಪ್ರಯತ್ನ ಮಾಡುತ್ತಿದ್ದಾರೆಂದು ಆರೋಪಿಸಿದರು.ಶಾಸಕ ಜಗದೀಶ ಗುಡಗುಂಟಿ ಅವರು ನಾಲ್ಕು ಗೋಡೆಗಳ ಮಧ್ಯ ಕೇವಲ ಕಾಟಾಚಾರಕ್ಕೆ ಸುದ್ದಿಗೋಷ್ಠಿಯನ್ನು ನಡೆಸಿ. ಕ್ಷೇಮೆಯಾಚನೆ ಮಾಡಿದ್ದಾರೆ. ಅವರು ಬಹಿರಂಗವಾಗಿ ದಲಿತ ಸಮಾಜದ ಮುಂದೆ ಕ್ಷೇಮೆಯಾಚನೆ ಮಾಡಬೇಕು. ಮತ್ತು ದಲಿತ ಸಮಾಜ ಒಂದು ಪೀಡಿತ ಸಮಾಜವಾಗಿದೆಂದು ಹೇಳಿಕೆ ನೀಡಿದ್ದಾರೆ. ಹಾಗಾದರೆ ದಲಿತ ಸಮಾಜ ಯಾವ ರೋಗದಿಂದ ಪೀಡಿತವಾಗಿದೆಂದು ಬಹಿರಂಗವಾಗಿ ಹೇಳಿಕೆ ನೀಡಬೇಕೆಂದು ಒತ್ತಾಯಿಸಿದರು.ಅ.30ರಂದು ರಾಜ್ಯದ ವಿವಿಧ ದಲಿತಪರ ಸಂಘಟನೆಯ ನಾಯಕರು ಆಗಮಿಸಿ. ದಲಿತ ಸಂಘಟನೆಗಳ ನೇತೃತ್ವದಲ್ಲಿ ಜಮಖಂಡಿ ಬಂದ್ ಕರೆಯನ್ನು ನೀಡಲಾಗುತ್ತದೆ. ಮೀಸಲಾತಿ ಕೇವಲ ದಲಿತ ಸಮಾಜಕ್ಕೆ ಅಷ್ಟೇ ಸೀಮಿತವಾಗದೆ. ಎಲ್ಲ ಸಮಾಜಕ್ಕೂ ಮೀಸಲಾತಿ ಹೊಂದಿದ್ದಾರೆ. ಮೀಸಲಾತಿ ಪಡೆಯುವ ಎಲ್ಲ ಸಮಾಜದ ಮುಖಂಡರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರಜಾಪರಿವರ್ತನೆ ವೇದಿಕೆ ರಾಜ್ಯ ಸಂಘಟನಾ ಸಂಚಾಲಕ ಗೋಪೀನಾಥ ಮೀಶಿ. ಭೀಮ ಆರ್ಮಿ ಏಕತಾ ಸಮಿತಿ ಜಿಲ್ಲಾಧ್ಯಕ್ಷ ರಮೇಶ ಬಳೋಲಗಿಡದ. ಕುಮಾರ ಆಲಗೂರ. ಕಿರಣ ಶಿಂಗೆ ಇದ್ದರು.