ಸರ್ವ ರೋಗಗಳಿಗೆ ಪ್ರತಿನಿತ್ಯ ನಡಗಿಯೇ ರಾಮಬಾಣ: ರತ್ನಾಕರ್ ಶೆಟ್ಟಿ
ರಾಣಿಬೆನ್ನೂರ:11 ಮನುಜನ ಸರ್ವ ರೋಗಗಳಿಗೆ ಪ್ರತಿನಿತ್ಯ ನಡಗಿಯೇ ರಾಮಬಾಣವಾಗಿದೆ. ಜೊತೆಗೆ ದಿನಂಪ್ರತಿ ಧ್ಯಾನ, ಆಧ್ಯಾತ್ಮ, ಯೋಗಗಳನ್ನು ಮಾಡುವುದರಿಂದ ಮನಸ್ಸಿಗೆ ಶಾಂತಿ, ನೆಮ್ಮದಿ, ಸಮಾಧಾನ ದೊರೆಯುತ್ತದೆ ಎಂದು ಆರೋಗ್ಯ ತಜ್ಞ ಹಾಗೂ ಕಾಂಫೊನಿಯಾದ ದಕ್ಷಿಣ ಭಾರತದ ಮುಖ್ಯಸ್ಥ ರತ್ನಾಕರ್ ಶೆಟ್ಟಿ ಅಭಿಪ್ರಾಯಪಟ್ಟರು
ಬುಧವಾರ ನಗರದ ದೊಡ್ಡಪೇಟೆ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ, ಬಸವೇಶ್ವರ ಸೇವಾ ಸಮಿತಿ, ಎನ್ಎಸ್ ಸ್ನೇಹ ಜ್ಯೋತಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಹಾಗೂ ಕಂಪಾನಿಯೋ ದಾವಣಗೆರೆ ಇವರ ಸಹಯೋಗದೊಂದಿಗೆ ಏರಿ್ಡಸಿರುವ 14 ದಿನಗಳ ಕಾಲದ ಉಚಿತ ಪೂಟ್ ಪಲ್ಸ್ ಥೆರಪಿಯ 9ನೇ ದಿನದ ಶಿಬಿರದಲ್ಲಿ ಅವರು ಮಾತನಾಡಿದರು.
ಮಧುಮೇಹ, ಸಂಧಿವಾತ, ಸ್ನಾಯು ಸೆಳೆತ ಊತ, ಬೊಜ್ಜು, ನಿದ್ರಾಹೀನತೆ, ಪಾರ್ಶುವಾಯು, ಬೆನ್ನು ನೋವು, ರಕ್ತದೊತ್ತಡ ಸೇರಿದಂತೆ ಇತರ ಕಾಯಿಲೆಗಳಿಗೆ ಈ ಶಿಬಿರವು ಸಂಜೀವಿನಿಯಾಗಿದೆ. ಪ್ರತಿದಿನ ಕ್ರಿಯಾಶೀಲ ಚಟುವಟಿಕೆಗಳಲ್ಲಿ ಭಾಗವಹಿಸುವುದರ ಮೂಲಕ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.
ಯಾವುದೇ ಅಡ್ಡ ಪರಿಣಾಮವಿಲ್ಲದೇ ರಕ್ತ ಪರಿಚಲನೆ ಮತ್ತು ನರಗಳ, ವಿವಿಧ ಸರಳ ಮತ್ತು ದೀರ್ಘಕಾಲೀನ ಸಮಸ್ಯೆಗಳನ್ನು ಓಷಧಿ ರಹಿತವಾಗಿ ಈ ಪೂಟ್ ಪಲ್ಸ್ ಥೆರಫಿಯ ಮೂಲಕ ನಿವಾರಿಸಬಹುದಾಗಿದೆ. ನಾಗರೀಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ಕಾಂಫೊನಿಯಾದ ದಕ್ಷಿಣ ಭಾರತದ ಮುಖ್ಯಸ್ಥ ರತ್ನಾಕರ್ ಶೆಟ್ಟಿ ಅವರನ್ನು ಸಂಘಟಕರು ಸನ್ಮಾಸಿ ಗೌರವಿಸಿದರು. ಸ್ವಾಕರವೇ ರಾಜ್ಯಾಧ್ಯಕ್ಷ ನಿತ್ಯಾನಂದ ಜಿ ಕುಂದಾಪುರ, ಅಜೇಯ ಜಂಬಗಿ, ಕೊಟ್ರೇಶಪ್ಪ ಎಮ್ಮಿ, ಗೋಪಿ ಕುಂದಾಪುರ, ನಾಗರಾಜ್ ಹುಣಸೇವಾಡಿ, ಶೆಟ್ಟಿ, ಬಿದ್ದಾಡೆಪ್ಪ ಚಕ್ರಸಾಲಿ, ಶಿವಾನಂದ ಕಡ್ಡಿ, ಪಂಚಾಕ್ಷರಯ್ಯ ಹಿರೇಮಠ, ಬಸವರಾಜ್ ಅಜ್ಮನಿ, ಅಶೋಕ ಮಡಿವಾಳರ ಸೇರಿದಂತೆ ಮತ್ತಿತರರು ಇದ್ದರು.