ಕಾಗವಾಡ

ಕೇಂದ್ರ ಸರ್ಕಾರದ ವಿರುದ್ಧ ಡಿಎಸ್‌ಎಸ್ ಆಕ್ರೋಶ

ಕೇಂದ್ರ ಸರ್ಕಾರದ ವಿರುದ್ಧ ಡಿಎಸ್‌ಎಸ್ ಆಕ್ರೋಶ

ಕಾಗವಾಡ: ಸಂವಿಧಾನ ಸರ್ಮಪಣಾ ದಿನದ ಅಂಗವಾಗಿ ಪ್ರತಿ ವರ್ಷ ಕೇಂದ್ರ ಸರ್ಕಾರ ಒಂದು ಸೂಚನಾ ಪಟ್ಟಿಯನ್ನು ತಯಾರಿಸುತ್ತದೆ.ಅದರಲ್ಲಿ ಡಾ.ಬಿ ಆರ್ ಅಂಬೇಡ್ಕರ ಪ್ರಸ್ತಾವಣೆಯಿರತಿತ್ತು   ಆದರೆ ನಿನ್ನೆ ಹೊರಡಿಸಿರುವ ಸೂಚನಾ ಪಟ್ಟಿಯಲ್ಲಿ ಅಂಬೇಡ್ಕರ ಹೆಸರು ಕೈ ಬಿಡಲಾಗಿದೆ ಮತ್ತು ಚಾತುವರ್ಣ ಮತ್ತು  ತಾರತಮ್ಯ ದ ಜಾತಿ  ಪದ್ಧತಿ ಯ ವೈಭವಿಕರಣ ದಿನ ವನ್ನಾಗಿ ಬದಲಾಯಿಸಲು ಹೊರಟಿರುವ ಕೇಂದ್ರ ಸರ್ಕಾರ ವಿರುದ್ಧ  ರಾಜ್ಯದಾದ್ಯಂತ ದಲಿತ ಸಂಘಟನೆ ಪ್ರತಿಭಟನೆಗೆ ಕರೆ ಕೊಟ್ಟಿದ್ದರಿಂದ  ನ.  26 ರಂದು ಕಾಗವಾಡದಲ್ಲಿ  ದಲಿತ ಸಂಘರ್ಷ ಸಮಿತಿಯಿಂದ  ಪ್ರತಿಭಟನೆ ಮಾಡಿ ಕಾಗವಾಡ ಪಿಎಸ್‌ಐ ಅವರಿಗೆ ಮನವಿ ಪತ್ರ ಸಲ್ಲಿಸಿದರು. 

 ನಂತರ ಸುದ್ದಿಗಾರರೋಂದಿಗೆ ದಲಿತ ಸಂಘರ್ಷ ಸಮಿತಿ ಜಲ್ಲಾ ಸಂಚಾಲಕ  ಸಂಜಯ ತಳವಲಕರ  ಮಾತನಾಡಿ  ಸಂವಿಧಾನ ಶಿಲ್ಪಿ ಡಾ  ಬಿ ಆರ್  ಅಂಬೇಡ್ಕರ್  ರಚಿಸಿದ  ಸಂವಿಧಾನವನ್ನು ಸ್ವತಃ ನ. 26 1949ರಂದು ಸ್ವತಂತ್ರದ ಭಾರತದ ಜನತೆಗೆ ಸರ್ಮಪಿಸಿದರು. ಆ ದಿನದ  ನೆನಪಿಗಾಗಿ  ನವೆಂಬರ್ 26ನ್ನು ಸಂವಿಧಾನ  ಸಮಪರ್ಣಾ ದಿನವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ.ಈ ವರ್ಷ  ನರೇಂದ್ರ ಮೋದಿ ನೇತೃತ್ವದ  ಕೇಂದ್ರ ಸರ್ಕಾರವೂ ಸಹ ಸಂವಿಧಾನ ಸಮಪಣಾ  ದಿನವನ್ನಾಗಿ ಆಚರಿಸುತ್ತಿದೆ.  

ಆದರೆ  ಭಾರತದ  ಪ್ರಜಾಪ್ರಭುತ್ವ ವನ್ನು  ಅಣುಕಿಸುವ ರೀತಿಯಲ್ಲಿ  ಸ್ವಾತಂತ್ಯ. ಸಮಾನತೆ. ಬಂಧುತ್ವ ಮತ್ತು  ಸಾಮಾಜಿಕ ನ್ಯಾಯಗಳಿಗೆ ವಿರುದ್ಧವಾದ ಧೋರಣೆ  ಹೊಂದಿರುವ  ವೇದಗಳಲ್ಲಿ  ಪ್ರಜಾಪ್ರಭುತ್ವವಿತ್ತು ಎಂಬ ಹಸಿ ಸುಳ್ಳು   ಹೇಳಲು ಹೊರಟಿದೆ. ಒಕ್ಕೂಟ ಸರ್ಕಾರವು  ನ. 26ನ್ನು ಭಾರತ ಪ್ರಜಾತಂತ್ರದ ಜನನಿ ಎಂಬ  ಹೆಸರಿನಲ್ಲಿ  ದೇಶದಾದ್ಯಂತ  ಎಲ್ಲ ರಾಜ್ಯ ಸರ್ಕಾರಗಳು ವಿಶ್ವ ವಿದ್ಯಾಲಯಗಳು ಹಾಗೂ ಕೇಂದ್ರ  ಕಚೇರಿಗಳು  ಆಚರಿಸಬೇಕೆಂದು ಸೂಚನೆ ಹೊರಡಿಸಿದೆ. ಹೀಗೆ ನೀಡಿರುವ  ಸೂಚನೆಯಲ್ಲಿ  ಡಾ.ಬಿ.ಆರ್ ಅಂಬೇಡ್ಕರ ಅವರನ್ನು ನೆನೆಯದೆ ಅವಮಾನಿಸಿದೆ ಇದಲ್ಲದೇ  ವೇದಗಳ ಕಾಲದಲ್ಲಿ  ಪ್ರಜಾಪ್ರಭುತ್ವವಿತ್ತು  ಗ್ರಾಮ ಪಂಚಾಯಿತಿ ಹಾಗೂ  ಚಾಪ್ ಪಂಚಾಯಿತಿಗಳ ರೂಪದಲ್ಲಿ  ಮುಂದುವರೆಯಿತು ಭಗವದ್ಗೀತೆಯು ಪ್ರಜಾತಂತ್ರ   ಭಾಗವಾಗಿತ್ತು  ಗ್ರೀಕ್  ಮತ್ತು  ರೋಮನ್ ಪ್ರಜಾಪ್ರಭುತ್ವದಂತೆ  ಭಾರತದಲ್ಲಿ  ಹುಟ್ಟಿನ ಆಧಾರದಲ್ಲಿ  ಜ್ಞಾನ  ಸಂಪತ್ತು, ಮತ್ತು  ರಾಜ್ಯಾಧಿಕಾರಗಳನ್ನು ಒಂದೆಡೆ  ಹಿಡಿದಿಟ್ಟುಕೊಂಡು  ನಿರಂಕುಶ ಸಾಮ್ರಾಜ್ಯ  ರೂಪಗೊಂಡಿರಲ್ಲ ಹೀಗೆ  ಒಂದರ ಹಿಂದೆ  ಒಂದರಂತೆ  ಸುಳ್ಳಿನ ಸರಮಾಲೆಯನ್ನೆ ಪೋಣಿಸಿದೆ ಈಮೂಲಕ ಚಾರ್ತುವಣ ಜಾತಿ ಪದ್ಧತಿ ಯನ್ನೂ  ಶ್ರೇಷ್ಠವೆಂದು ಪರಿಗಣಿಸುವ ಆರ್  ಎಸ್ ಎಸ್ ವಾದವನ್ನು  ಸಂವಿಧಾನ  ಸಮಪಣಾ 9 ದಿನದಿಂದೆ ಪ್ರಜಾಪ್ರಭುತ್ವ  ಹೆಸರಿನಲ್ಲಿ ಆಚರಿಸಲು ಹೋರಟಿರುವ ಮೋದಿ  ಸರ್ಕಾರದ  ಈ ಕ್ರತ್ಯವನ್ನು  ದಲಿತ ಸಂಘರ್ಷ  ಸಮಿತಿಯ ಖಂಡಿಸುತ್ತದೆ ಎಂದು ಹೇಳಿದರು. 

ಸಚಿನ ಪೂಜಾರಿ,  ವಿಜಯ ಅಸೊದೆ,ಪ್ರಕಾಶ ಧೊಂಡಾರೆ ದೀಪಕ ಕಾಂಬಳೆ,ರವಿ ಕುರಣೆ,ಜಯಪಾಲ ಬಡಿಗೇರ, ಮಹಾಂತೇಶ ಬಡಿಗೇರ,ಸುಶಾಂತ ಸಾಮನೆ,ಪ್ರಕಾಶ ಕಾಂಬಳೆ ಸೇರಿದಂತೆ ಹಲವರು ಉಪಸ್ಥಿತರಿದ್ದರುವರದಿ ಮನೋಜ್ ಪಾಟಣಕರ್ 


ಸುದ್ದಿ ಓದಿ