ಕಾಗವಾಡ

ಮಲ್ಲಿಕಾರ್ಜುನ ಪ್ರೌಢ ಶಾಲೆಗೆ ಡಿಡಿಪಿಐ ಗಜಾನನ ಮನ್ನಿಕೇರಿ ಭೇಟಿ: ಪರೀಶೀಲನೆ

ಮಲ್ಲಿಕಾರ್ಜುನ ಪ್ರೌಢ ಶಾಲೆಗೆ ಡಿಡಿಪಿಐ ಗಜಾನನ ಮನ್ನಿಕೇರಿ ಭೇಟಿ: ಪರೀಶೀಲನೆ

ಶೇಡಬಾಳ 19: ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ನಡುವೆ 9 ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಕ್ಯಾಮೆರಾದ ಭದ್ರತೆಯ ನಡುವೆ ಸೋಮವಾರ ಕಾಗವಾಡ ತಾಲೂಕಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮೊದಲ ದಿನ ಸುಸೂತ್ರವಾಗಿ ನಡೆದಿದ್ದು ಚಿಕ್ಕೋಡಿ ಡಿಡಿಪಿಐ ಗಜಾನನ ಮನ್ನಿಕೇರಿಯವರು ಕಾಗವಾಡ ಮಲ್ಲಿಕಾರ್ಜುನ ಪ್ರೌಢ ಶಾಲೆಗೆ ಭೇಟಿ ನೀಡಿ ಪರೀಶೀಲನೆ ನಡೆಸಿದರು. 

ಕಾಗವಾಡ ಶೈಕ್ಷಣಿಕ ತಾಲೂಕಿನ 9 ಪರೀಕ್ಷಾ ಕೇಂದ್ರಗಳಲ್ಲಿ ಇಂದಿನ ಪೇಪರಕ್ಕೆ 2231 ವಿದ್ಯಾರ್ಥಿಗಳ ಪೈಕಿ 2223 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 8 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಮೊದಲ ದಿನದ ಪರೀಕ್ಷೆ ಸುಸೂತ್ರವಾಗಿ ನಡೆದಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್‌. ಮುಂಜೆ ಹೇಳಿದರು. 

ವಿದ್ಯಾರ್ಥಿಗಳ ಮನಸ್ಸಿನಲ್ಲಿ ಕೊವಿಡ್‌-19 ಮನೆಮಾಡಿದ್ದ ಆತಂಕದ ನಡುವೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭಗೊಂಡ ಮೊದಲ ದಿನ ವಿದ್ಯಾರ್ಥಿಗಳು ಮುಖಕ್ಕೆ ಮಾಸ್ಕ್‌ ಧರಿಸಿಕೊಂಡು ತಮ್ಮ ಪೋಷಕರೊಂದಿಗೆ ಪರೀಕ್ಷಾ ಕೇಂದ್ರಗಳಿಗೆ ಆಗಮಿಸಿ  ಕೊಠಡಿ ಸಂಖ್ಯೆಯನ್ನು ಗಮನಿಸುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು. ಪರೀಕ್ಷಾ ಕೇಂದ್ರಗಳಿಗೆ ಒಂದು ತಾಸಿಗೆ ಮುಂಚಿತವಾಗಿ ಬಹುತೇಕ ವಿದ್ಯಾರ್ಥಿಗಳು ಬಂದು ತಲುಪಿ, ಸರದಿಯಲ್ಲಿ ನಿಂತು ಮುಖಕ್ಕೆ ಮಾಸ್ಕ್‌ ಹಾಕಿಕೊಂಡು ಶ್ಯಾನಿಟೈಜರನಿಂದ ಕೈಗೆ ಹಚ್ಚಿಕೊಂಡು ಕೊಠಡಿ ಸಂಖ್ಯೆಯನ್ನು ಹಾಗೂ ಪರೀಕ್ಷಾ ಕೇಂದ್ರದ ಮೇಲ್ವಿಚಾರಕರು ನೀಡುತ್ತಿದ್ದ ಸೂಚನೆಗಳನ್ನು ಕೇಳುವುದರಲ್ಲಿ ಮಗ್ನರಾಗಿದ್ದರು. 

ಮೊದಲ ದಿನವಾದ ಇಂದು 9 ಪರೀಕ್ಷಾ ಕೇಂದ್ರಗಳು ಸೇರಿದಂತೆ ಕಾಗವಾಡ ಪಟ್ಟಣದ ಮಲ್ಲಿಕಾರ್ಜುನ ಪ್ರೌಢಶಾಲೆಯಲ್ಲಿ ಪರೀಕ್ಷೆ ಕೇಂದ್ರಕ್ಕೆ ಚಿಕ್ಕೋಡಿ ಡಿಡಿಪಿಐ ಗಜಾನನ ಮನ್ನಿಕೇರಿ, ತಹಸೀಲ್ದಾರ ಪರಿಮಳಾ ದೇಶಪಾಂಡೆ, ಕ್ಷೇತ್ರಶಿಕ್ಷಣಾಧಿಕಾರಿ ಎಂ.ಆರ್‌.ಮುಂಜೆ, ಸಿ.ಎಂ.ಸಾಂಗ್ಲಿ ಭೇಟಿ ನೀಡಿದರು. 

ಪರೀಕ್ಷಾ ಕೇಂದ್ರಗಳಿಗೆ ಮೋದಲೇ ಸೋಂಕು ನಿವಾರಕ ದ್ರವ ಸಿಂಪರಿಲಾಗಿದೆ. 3 ಅಡಿ ಅಂತರದೊಂದಿಗೆ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಪರೀಕ್ಷಾರ್ಥಿಗಳಿಗೆ ಮಾಸ್ಕ್‌ ವಿತರಿಸಲಾಗಿದ್ದು, ಪರೀಕ್ಷೆಗಳು ಬರೆಯಲು ಅವರಿಗೆ ಉತ್ತಮ ಡೆಸ್ಕ್‌ ವ್ಯವಸ್ಥೆ, ಶುದ್ದ ಕುಡಿಯುವ ನೀರು, ಹಾಗೂ ಶೌಚಾಲಯ ವ್ಯವಸ್ಥೆ ಮಾಡಲಾಗಿದೆ. ವಿಶೇಷಚೇತನರಿಗೆ ​ರಾಂಪ್ ವ್ಯವಸ್ಥೆ ಮಾಡಲಾಗಿದ್ದು, ಅತ್ಯಂತ ಸುಗಮವಾಗಿ ಪರೀಕ್ಷೆಗಳು ನಡೆದಿವೆ. 

ಗಜಾನನ ಮನ್ನಿಕೇರಿ 

ಡಿಡಿಪಿಐ ಚಿಕ್ಕೋಡಿ 


ಸುದ್ದಿ ಓದಿ