ಮನರಂಜನೆ

ಸ್ಪೇನ್ ನಲ್ಲಿ ಡಿಡಿಎಲ್‍ ಜೆ ಮರು ಬಿಡುಗಡೆ

ಸ್ಪೇನ್ ನಲ್ಲಿ ಡಿಡಿಎಲ್‍ ಜೆ ಮರು ಬಿಡುಗಡೆ

ಮುಂಬೈ, ಅ 20 : 'ದಿಲ್ ವಾಲೆ ದುಲ್ಹನಿಯಾ ಲೇ ಜಾಯೇಂಗೆ' ಸಿನಿಮಾಗೆ ಈತ 25 ವರ್ಷ.   1995ರಿಂದ ಸತತ 20 ವರ್ಷಗಳ ಕಾಲ ಮುಂಬೈನ ಮರಾಠ ಮಂದಿರ್ ನಲ್ಲಿ ಪ್ರಸಾರವಾದ ಚಿತ್ರ ಇದೇ 30ರಂದು ಸ್ಪೇನ್ ನಲ್ಲಿ ಮತ್ತೆ ಬಿಡುಗಡೆಯಾಗಲಿದೆ. ಮನಿ ಹೀಸ್ಟ್ ಸಿನಿಮಾದ ನಾಯಕ ಅಜಯ್ ಜೇಥಿ ಈ ಸಿನಿಮಾವನ್ನು ಸ್ಪೇನ್ ನಲ್ಲಿ ರಿಲೀಸ್ ಮಾಡುವ ಪ್ಲಾನ್ ಮಾಡಿದ್ದಾರೆ. ಅಜಯ್ ನಟನಾಗಿ ಮಾತ್ರವಲ್ಲದೆ ಬಾಲಿವುಡ್ ಸಿನಿಮಾಗಳ ವಿತರಕರಾಗಿಯೂ ಗುರುತಿಸಿಕೊಂಡಿದ್ದಾರೆ. ಮುಂಬೈನ ಮರಾಠಮಂದಿರ್ ನಲ್ಲಿ 2015ರಲ್ಲಿ ಕೊನೆಯ ಪ್ರದರ್ಶನದ ವೇಳೆ 210 ಪ್ರೇಕ್ಷಕರಿದ್ದರು. ಭಾರತೀಯರು ಮಾತ್ರವಲ್ಲದೆ ವಿದೇಶದಿಂದನೂ ಜನ ಬಂದು ಈ ಸಿನಿಮಾ ವೀಕ್ಷಿಸುತ್ತಿದ್ದರಂತೆ. ಕ್ರಮೇಣ ಪ್ರೇಕ್ಷಕರ ಸಂಖ್ಯೆ ಕಡಿಮೆಯಾದ ಕಾರಣ ಸಿನಿಮಾ ಪ್ರದರ್ಶನ ನಿಲ್ಲಿಸಲಾಗಿತ್ತು.  

ಭಾರತೀಯ ಸಿನಿಮಾರಂಗದಲ್ಲೇ ಸತತ 20 ವರ್ಷ ಪ್ರದರ್ಶನ ಕಂಡ ಏಕೈಕ ಸಿನಿಮಾ ಎಂಬ ದಾಖಲೆಯನ್ನು ಡಿಡಿಎಲ್ ಜೆ ನಿರ್ಮಿಸಿದೆ. ಸಿನಿಮಾದ 25ನೇ ವರ್ಷದ ಸಂಭ್ರಮದ ಸಮಯದಲ್ಲಿ, ಲಂಡನ್ ನ ಪ್ರಸಿದ್ಧ ಸಿನಿಮಾ ಪ್ರತಿಮೆಗಳ ಹೃದಯಭಾಗ ಲೀಸೆಸ್ಟರ್ ಸ್ಕೈರ್ ನಲ್ಲಿರವ 'ಸೀನ್ಸ್ ಇನ್ ದಿ ಸ್ಕೈರ್' ನಲ್ಲಿ 'ದಿಲ್ ವಾಲೆ ದುಲ್ಹನಿಯಾ ಲೇ ಜಾಯೇಂಗೆ' ಸಿನಿಮಾದ ಶಾರುಖ್ ಖಾನ್ ಮತ್ತು ಕಾಜೋಲ್ ಪ್ರತಿಮೆ ಅನಾವರಣ ಮಾಡಲಾಗುತ್ತಿದೆ. ಇದು 25ನೇ ವರ್ಷದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದೆ. ಈಗಾಗಲೇ ಅಲ್ಲಿ ವಿಶ್ವದ ಪ್ರಸಿದ್ಧ ಸಿನಿಮಾಗಳ ಸಾಕಷ್ಟು ಪ್ರತಿಮೆಗಳಿದ್ದು, ಅವುಗಳ ಸಾಲಿಗೆ ಈಗ 'ದಿಲ್ ವಾಲೆ ದುಲ್ಹನಿಯಾ ಲೇ ಜಾಯೇಂಗೆ' ಸಿನಿಮಾದ ಪ್ರತಿಮೆ ಕೂಡ ಸೇರಿದೆ.

  

ಸುದ್ದಿ ಓದಿ