ರಾಣೆಬೆನ್ನೂರ

ರಾಣೇಬೆನ್ನೂರ ತಹಶೀಲ್ದಾರ, ನಗರಸಭೆ ಕಚೇರಿಗೆ ಜಿಲ್ಲಾಧಿಕಾರಿ ಭೇಟಿ

ರಾಣೇಬೆನ್ನೂರ ತಹಶೀಲ್ದಾರ, ನಗರಸಭೆ ಕಚೇರಿಗೆ ಜಿಲ್ಲಾಧಿಕಾರಿ ಭೇಟಿ

ಹಾವೇರಿ.ಆ.21 : ರಾಣೇಬೆನ್ನೂರು ತಹಶೀಲ್ದಾರ ಹಾಗೂ ನಗರಸಭೆ ಕಚೇರಿಗೆ ಬುಧವಾರ  ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ಭೇಟಿ ನೀಡಿ ಪರೀಶೀಲನೆ ನಡೆಸಿದರು. 

ತಹಶೀಲ್ದಾರ ಕಚೇರಿಗೆ ಭೇಟಿ ನೀಡಿದ ಅವರು, ಆರ್ ಟಿ ಸಿ ಆಧಾರ ಸೀಡಿಂಗ್ ಪ್ರಗತಿ, ಹೊಸ ಪಡಿತರ ಚೀಟಿ ವಿತರಣೆ, ಅಭಿಲೇಖಾಲಯ ಮತ್ತು ಕಚೇರಿ ಸ್ವಚ್ಛತೆ ಪರೀಶೀಲಿಸಿದರು. ನಂತರ ಉಪನೊಂದಣಾಧಿಕಾರಿಗಳ ಕಚೇರಿ, ಭೂದಾಖಲೆ ಕೊಠಡಿ, ಖಜಾನೆಗೆ ಭೇಟಿ ನೀಡಿ ಕಾರ್ಯ ವೈಖರಿ ಬಗ್ಗೆ ಪರೀಶೀಲಿಸಿದರು ಮತ್ತು ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದರು. 

ಸಾರ್ವಜನಿಕರ ಕುಂದುಕೊರತೆಗಳನ್ನು ಕಾಲಮಿತಿಯೊಳಗೆ ವಿಲೆಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.  

ರಾಣೇಬೆನ್ನೂರ ನಗರಸಭೆಗೆ ಭೇಟಿ ನೀಡಿ ಜಿಲ್ಲಾಧಿಕಾರಿಗಳು, ಖಾತಾ ಬದಲಾವಣೆ ಪ್ರಕ್ರಿಯೆ ಮತ್ತು ಇನ್ನಿತರೆ ಯೋಜನೆಗಳು, ಅಭಿವೃದ್ಧಿ ಕಾಮಗಾರಿಗಳ ಪರೀಶೀಲನೆ ನಡೆಸಿದರು ಹಾಗೂ ್ತ ಸಾರ್ವಜನಿಕ ಅಹವಾಲುಗಳನ್ನು ಸ್ವೀಕರಿಸಿದರು. ನಂತರ  ನಗರದ  ಗಟಾರ ಸ್ವಚ್ಛತೆ ಕುರಿತು ಪರೀಶೀಲನೆ ನಡೆಸಿದ ಅವರು, ಗಟಾರ ಸ್ವಚ್ಛತೆಗೆ ಕ್ರಮವಹಿಸುವಂತೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ  ಸೂಚನೆ ನೀಡಿದರು. 


ಸುದ್ದಿ ಓದಿ