ಶಿಗ್ಗಾವ್

ಡಾ ಚನ್ನಬಸಪ್ಪ ಕುಮ್ಮೂರಗೆ ಡಾ. ಡಿ ಸಿ ಪಾವಟೆ ಪ್ರಶಸ್ತಿ: ಸನ್ಮಾನ

ಡಾ ಚನ್ನಬಸಪ್ಪ ಕುಮ್ಮೂರಗೆ ಡಾ. ಡಿ ಸಿ ಪಾವಟೆ ಪ್ರಶಸ್ತಿ: ಸನ್ಮಾನ

ಶಿಗ್ಗಾವಿ 19: ಗೌರಮ್ಮ ಬ. ಅಂಕಲಕೋಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಶಿಗ್ಗಾವ್‌. ಪ್ರಾಂಶುಪಾಲರಾದ ಡಾ ಚನ್ನಬಸಪ್ಪ ಎಸ್ ಕುಮ್ಮೂರ ಇವರಿಗೆ ಕರ್ನಾಟಕ ವಿಶ್ವವಿದ್ಯಾಲಯ ಕೊಡ ಮಾಡುವ ಉನ್ನತ ಪ್ರಶಸ್ತಿ ಡಾ. ಡಿ ಸಿ ಪಾವಟೆ ಅವಾರ್ಡ್‌ ಲಭಿಸಿದ್ದು ಎನ್‌.ಎಸ್‌. ಎಸ್ ಸಂಯೋಜನಾಧಿಕಾರಿ ಅಧಿಕಾರ ಸ್ವೀಕರಿಸಿ  ಶಿಗ್ಗಾವ್ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿರುವ  ಕುಮ್ಮೂರವರಿಗೆ ಕಾಲೇಜಿನ ಬೋಧಕ ಹಾಗೂ ಬೋಧಕ್ಕೆ ವರ್ಗದವರು ಮತ್ತು ವಿದ್ಯಾರ್ಥಿ ಸಂಘಟನೆಗಳು. ಹಾಗೂ ಹಾವೇರಿ ಜಿಲ್ಲೆಯ ವಿವಿಧ  ಉಪನ್ಯಾಸಕರ ಸಂಘಟನೆಗಳು ಸೇರಿ ಅಭಿನಂದನಾ ಕಾರ್ಯಕ್ರಮ ಆಯೋಜಿಸಲಾಗಿತ್ತು. 

ಕರ್ನಾಟಕ ವಿಶ್ವವಿದ್ಯಾಲಯ ಕಾಲೇಜು ಅಧ್ಯಾಪಕ ಸಂಘದ ಅಧ್ಯಕ್ಷ ಡಾ. ಮಂಜುನಾಥ ತಲ್ಲೂರ ಮಾತನಾಡಿ ಕುಮ್ಮೂರ  ಸರ್ ಅವರು ವಿದ್ಯಾರ್ಥಿದೆಸೆಯಿಂದಲೂ ಸಂಘಟನೆ ಹಾಗೂ ಸಮಾಜಮುಖಿಯಾದ ಸೇವೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರಿಂದ ಇಂದು ಅವರಿಗೆ ಇಂತಹ ಉನ್ನತ ಸ್ಥಾನಗಳು ಲಭಿಸಿರುವುದು ನಿಜಕ್ಕೂ ಸೂಕ್ತವಾಗಿದೆ ಎಂದರು. 

ಹಾವೇರಿ ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಡಾ. ರಮೇಶ ತೆವರಿ ಮಾತನಾಡಿ ಶ್ರಮಕ್ಕೆ ತಕ್ಕ ಸಾಧನೆ. ಸಾಧನೆಗೆ ತಕ್ಕ ಸ್ಥಾನಮಾನ ಗಳಿಸುವಲ್ಲಿ ಪ್ರೊ.ಕುಮ್ಮೂರ ಯಶಸ್ವಿಯಾಗಿದ್ದು ಇಂದಿನ ಯುವ ಜನತೆಗೆ ಮಾದರಿ ಯಾಗಿದ್ದಾರೆಂದು ತಿಳಿಸಿದರು.  

ಡಾ. ಮಂಜುನಾಥ ಚಲವಾದಿಯವರು ಮಾತನಾಡಿ ಈಗಾಗಲೇ ಅನೇಕ ಪ್ರಶಸ್ತಿಗಳನ್ನು ಪಡೆದಿರುವ ಕುಮ್ಮೂರವರು ಕಾಲೇಜಿನ ಅಭಿವೃದ್ಧಿ,ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರ ಬಗ್ಗೆ ಇರುವ ಕಾಳಜಿ. ಎಲ್ಲ ಉಪನ್ಯಾಸಕ ಹಾಗೂ ಸಿಬ್ಬಂದಿ ವರ್ಗದವರೊಂದಿಗೆ ಸಹನೆ  ಸಹಕಾರದಿಂದ ಯಾವುದೇ ತಂಟೆ ತಕರಾರಿಲ್ಲದೆ ದಕ್ಷತೆ ಮತ್ತು ಪ್ರೀತಿ ವಿಶ್ವಾಸದಿಂದ ಆಡಳಿತವನ್ನು ನಿರ್ವಹಿಸುತ್ತಿರುವುದು ಶ್ಲಾಘನೀಯವಾಗಿದೆ. 

ವಿದ್ಯಾರ್ಥಿಗಳಿಗೆ ಹೊಸ ಹೊಸ ಕೋರ್ಸಗಳನ್ನು ಸ್ಥಾಪಿಸುವುದು. ಜಿಲ್ಲೆಯಲ್ಲಿ ಮಾದರಿಯ ಗ್ರಂಥಾಲಯ ನಿರ್ಮಿಸಿತಲ್ಲದೆ, ಮಾದರಿಯ ಕಂಪ್ಯೂಟರ್ ಲ್ಯಾಬ್ ನಿರ್ಮಿಸಿರುವುದು.  ವಿದ್ಯಾರ್ಥಿಗಳಲ್ಲಿ ಶಿಸ್ತು. ಕ್ರೀಡೆ.ಏನ್ ಎಸ್ ಎಸ್‌. ಪಠ್ಯೇತರ ಚಟುವಟಿಕೆಗಳಲ್ಲಿ ಕಾಲೇಜಿನ ಕೀರ್ತಿಯನ್ನು ಉತ್ತುಂಗಕ್ಕೆ ವೈದಿರುವುದು ನಮ್ಮೆಲ್ಲರಿಗೂ ಹಿರಿಮೆಯನ್ನು ತಂದುಕೊಟ್ಟಿದೆ ಎಂದರು.  

ಡಾ. ಕಮ್ಮಾರ, ಡಾ ದಿನೇಶ್ ಸಿಂಗಾಪುರ್, ಡಾ. ಸುರೇಶ್ ವಾಲ್ಮೀಕಿ, ಡಾ. ಶೈಲಜಾ ಹುದ್ದಾರ. ಪ್ರೊ. ಕೆ ಎನ್ ರಾಸಿನ್ಕರ್‌. ಪ್ರೊ. ಆನಂದ ಇಂದೂರ.ಪ್ರೊ.ಇಮ್ತಿಯಾಜ್ ಖಾನ್ . ಉಪಸ್ಥಿತರಿದ್ದರು. ಪ್ರೊ.ಡಿ.ಎಸ್ ಸೊಗಲದ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಡಿ ಎಸ್ ಭಟ್ ಸ್ವಾಗತಿಸಿದರು. ಪ್ರೊ ಪ್ರವೀಣ್ ಸಿದ್ದಣ್ಣನವರ್ ಕಾರ್ಯಕ್ರಮ ನಿರೂಪಿಸಿದರು. ಲಿಂಗರಾಜ ಕಮ್ಮಾರ್ ಪ್ರಾರ್ಥಿಸಿದರು. ನದಾಫ್ ವಂದಿಸಿದರು. 


ಸುದ್ದಿ ಓದಿ