ಕಾಗವಾಡ

ವಿಶ್ವಶಾಂತಿಗಾಗಿ ಅಯೋಧ್ಯೆಯಿಂದ ಶಬರಿಮಲೈಗೆ ಸೈಕಲ್ ಯಾತ್ರೆ..!

ವಿಶ್ವಶಾಂತಿಗಾಗಿ ಅಯೋಧ್ಯೆಯಿಂದ ಶಬರಿಮಲೈಗೆ ಸೈಕಲ್ ಯಾತ್ರೆ..!

ಉಗಾರ ಮಾಲಾಧಾರಿಗಳ ವಿನೂತನ ಸಾಹಸ..!! 

ಕಾಗವಾಡ 10: ತಾಲೂಕಿನ ಉಗಾರ ಬುದ್ರಕ್ ಗ್ರಾಮದ ಶಬರಿ ಮಾಲಾಧಾರಿಗಳಾದ ಸೋಮನಾಥ ಹೂಗಾರ ಅವರು ವಿಶ್ವಶಾಂತಿ ಮತ್ತು ಜನಕಲ್ಯಾಣಕ್ಕಾಗಿ ಉತ್ತರ ಪ್ರದೇಶದ ಅಯೋದ್ಯೆಯ ಶ್ರೀರಾಮ ಮಂದಿರದಿಂದ ಕೇರಳದ ಶಬರಿಮಲೈಗೆ ಸೈಕಲ್ ಮುಖಾಂತರ ಯಾತ್ರೆ ಕೈಗೊಂಡಿದ್ದು, ಶುಕ್ರವಾರ ದಿ. 08 ರಂದು ಅವರನ್ನು ಭಕ್ತಿಮಯ ವಾತಾವರಣದಲ್ಲಿ ಬಿಳ್ಕೋಡಲಾಯಿತು. 

ಸೋಮಣ್ಣ ಹೂಗಾರ ಅವರು ಕಳೆದ 25 ವರ್ಷಗಳಿಂದ ಅಯ್ಯಪ್ಪನ ಮಾಲೆ ಧರಿಸಿ, ವೃತ ಆಚರಿಸುತ್ತಾ, ವಿಶ್ವಶಾಂತಿ ಮತ್ತು ಜನಕಲ್ಯಾಣಕ್ಕಾಗಿ ಕಳೆದ 6 ವರ್ಷಗಳಿಂದ ಉಗಾರದಿಂದ ಶಬರಿಮಲೈಗೆ ಪಾದಯಾತ್ರೆ ಕೈಗೊಳ್ಳುತ್ತಾ ಬಂದಿರುತ್ತಾರೆ. ಕಳೆದ ವರ್ಷ ಕೇದಾರನಾಥದಿಂದ ಶಬರಿಮಲೈಗೆ ಪಾದಯಾತ್ರೆ ಕೈಗೊಂಡಿದ್ದರು.  

ಈ ವರ್ಷ ಅಯೋಧ್ಯೆಯ ಶ್ರೀರಾಮ ಮಂದಿರದಿಂದ ಶಬರಿಮಲೈನ ಅಯ್ಯಪ್ಪಾ ಸ್ಯಾಮಿ ಸನ್ನಿಧಾನಕ್ಕೆ ಸೈಕಲ್ ಯಾತ್ರೆ ಕೈಗೊಂಡಿದ್ದು, ಉಗಾರದಿಂದ ಗ್ರಾಮದಿಂದ ವಿಜಯಪೂರಕ್ಕೆ ತೆರಳಿ ಅಲ್ಲಿ ಮಹಾದೇವ ಕೊಂಡಿ ಎಂಬ ಮಾಲಾಧಾರಿಗಳ ಜೊತೆಗೂಡಿ, ರೈಲ್ವೆ ಮುಖಾಂತರ ಅಯೋಧ್ಯೆಗೆ ತೆರಳಿ, ನವ್ಹೆಂಬರ್ 14 ರಂದು ಸೈಕಲ್ ಯಾತ್ರೆಯನ್ನು ಪ್ರಾರಂಭಿಸಿ, 12 ಜೋರ್ತಿಲಿಂಗಗಳ ದರ್ಶನ ಪಡೆದುಕೊಳ್ಳುತ್ತ ಉಗಾರ ಮುಖಾಂತರ ಶಬರಿಮಲೈಗೆ ಜನೆವರಿ 11 ಅಥವಾ 12 ರಂದು ತಲುಪುವ ಗುರಿ ಹೊಂದಿದ್ದಾರೆ. 

ನಿನ್ನೆ ಸಂಜೆ ಗ್ರಾಮದ ಪುರಾತನ ಶ್ರೀರಾಮ ಮಂದರಿದಲ್ಲಿ ಸದಲಗಾದ ಭಂಡಾರದ ಒಡೆಯ ಶ್ರೀ ದರೀಖಾನ ಅಜ್ಜನವರ ದಿವ್ಯ ಸಾನಿಧ್ಯದಲ್ಲಿ ಅವರನ್ನು ಬಿಳ್ಕೋಡಲಾಯಿತು. 

ಈ ಸಮಯದಲ್ಲಿ ಅಮೋಲ ಜನಕಲ್ಯಾಣ ಪ್ರತಿಷ್ಠಾನದ ಡಾ. ಅಮೋಲ ಸರಡೆ ಮಾತನಾಡಿ, ಸೈಕಲ್ ಪಾದಯಾತ್ರೆ ಕೈಗೊಂಡಿರುವ ಮಾಲಾಧಾರಿಗಳಿಗೆ ಹಾರೈಸಿ, ತಮ್ಮ ಯಾತ್ರೆ ಸುಖಕರವಾಗಿರಲಿ ಎಂದು ಪ್ರಾರ್ಥಿಸಿ, ಬಿಳ್ಕೋಟ್ಟರು. 

ಈ ಸಂದರ್ಭದಲ್ಲಿ ರಾಜಗೌಡ ಪಾಟೀಲ, ಲಕ್ಷ್ಮಣ ಗುಂಜಾಳೆ, ದೀಲಿಪ ಪಾಟೀಲ, ಕಾಡಗೊಂಡ ಪಾಟೀಲ, ಸತೀಶ ಬೆಕ್ಕೆರಿ, ಬಂಡು ಪಾಟೀಲ, ವಿಠ್ಠಲ ಸುಂಠೆೆ, ಸಂದೀಪ ಪಾಟೀಲ, ಅನೀಲ ಘಟಗೆ, ಉಮೇಶ್ ಸರಡೆ, ಉದಯ ಕಾಂಬಳೆ, ಅಂಬು ಕೋಳಿ, ದಶರಥ ಸವದತ್ತಿ, ಬಂಡು ಬೈರಾಗಿ, ಸೋಮು ಪಲ್ಲಕ್ಕೆ, ವಿಪುಲ ಕೋಳಿ, ಸೋಹನ ಹೆಗಡೆ, ರೋಹಿತ ಘುಣಕೆ ಸೇರಿದಂತೆ 48 ದಿನಗಳ ಹನುಮ ಮಾಲಾಧಾರಿಗಳು ಸೇರಿದಂತೆ ಗ್ರಾಮಸ್ಥರು, ಉಪಸ್ಥಿತರಿದ್ದರು. 


ಸುದ್ದಿ ಓದಿ