ರಾಣೆಬೆನ್ನೂರ

ಅಂಬಾಭವಾನಿ ದೇವಿಗೆ ನೋಟಿನ ಅಲಂಕಾರ

ಅಂಬಾಭವಾನಿ ದೇವಿಗೆ ನೋಟಿನ ಅಲಂಕಾರ

ರಾಣೇಬೆನ್ನೂರು 10:  ನಾಡಿನ ಎಲ್ಲಡೆ ನವರಾತ್ರಿ ಹಬ್ಬದ ಸಂಭ್ರಮ. ಹಬ್ಬದ ಹಿನ್ನಲೆಯಲ್ಲಿ ನಗರದ ದೊಡ್ಡಪೇಟೆ ಶ್ರೀ ಅಂಬಾಭವಾನಿ ದೇವಸ್ಥಾನದಲ್ಲಿ ದೇವಿಗೆ ಲಕ್ಷಾಂತರ ಮೌಲ್ಯದ ವಿವಿಧ ನೋಟುಗಳಿಂದ ವಿಶೇಷ ಅಲಂಕಾರ ಮಾಡಲಾಗಿದೆ. 

ಪ್ರತಿ ವರ್ಷ ಹಬ್ಬದ ಸಂದರ್ಭದಲ್ಲಿ ದೇವಸ್ಥಾನಗಳಲ್ಲಿಯೂ ವಿಶೇಷ ರೀತಿಯಲ್ಲಿ ದೇವರಿಗೆ ಅಲಂಕಾರ ಮಾಡಲಾಗುತ್ತದೆ. ಈ ಬಾರಿ 40ನೇ ವರ್ಷದ ದಸರಾ ಮಹೋತ್ಸವ ಅಂಗವಾಗಿ ಸೋಮವಂಶ ಸಹಸ್ರಾರ್ಜುನ ಕ್ಷತೀಯ ಸಮಾಜದ ಶಕ್ತಿ ಸಂಘಟನೆಯ 20ಯುವಕರು ಮಹಾಲಕ್ಷ್ಮೀ ರೂಪದಲ್ಲಿ ಅಲಂಕಾರಕ್ಕೆ ಶ್ರಮವಹಿಸಿದ್ದಾರೆ. ಈ ವಿಶೇಷ ಅಲಂಕಾರವನ್ನು ಕಣ್ತುಂಬಿಕೊಳ್ಳಲು ದೇವಾಲಯಕ್ಕೆ ಭಕ್ತರು ಮುಗಿ ಬಿದ್ದಿದ್ದಾರೆ. 

 ನೋಟು ಬಳಕೆ;- 

50ರೂ, 100ರೂ, 200ರೂ ಹಾಗೂ 500ರೂ, ಮುಖಬೆಲೆಯ ನೋಟುಗಳನ್ನು ಬಳಸಲಾಗಿದೆ. ವಿವಿಧ ಬಣ್ಣಗಳನ್ನು ಹೊಂದಿದ ನೋಟುಗಳನ್ನು ಬಳಕೆ ಮಾಡಲಾಗಿದೆ. 

 ದೇವಿಯ ಗರ್ಭಗುಡಿ ದ್ವಾರ ಬಾಗಿಲಿಗೆ, ಮೇಲ್ಛಾವಣೆಯಲ್ಲಿ ಹೂವಿನ ಅಲಂಕಾರ ರೀತಿ ನೋಟಿನ ಹೊದಿಕೆಯನ್ನು ನಿರ್ಮಿಸಲಾಗಿದ್ದು, ದೇವರ ವಿಗ್ರಹ ಹಿಂಭಾಗ, ಮುಂಭಾಗ ಸುತ್ತ ಅಲಂಕಾರ ಮಾಡಲಾಗಿದೆ. ನೋಟುಗಳಲೇ ಹೂಗಳ ಚಿತ್ತಾರ ಅರಳಿಸಲಾಗಿದೆ. ನವರಾತ್ರಿ ವಿಶೇಷವಾಗಿ ಮಾಡಿದ ಅಲಂಕಾರ ಎಲ್ಲರ ಕಣ್ಮನ ಸೆಳೆಯುತ್ತಿತು. 

ಈ ಅಲಂಕಾರಕ್ಕಾಗಿ ಲಕ್ಷಾಂತರ ರೂ ಹಣವನ್ನು ಬಳಸಲಾಗಿದೆ. ಈ ವಿಶೇಷ ಅಲಂಕಾರ ಕಣ್ತುಂಬಿಕೊಳ್ಳಲು ಭಕ್ತರು ಅಪಾರ ಸಂಖ್ಯೆಯಲ್ಲಿ ದೇವಸ್ಥಾನಕ್ಕೆ ಆಗಮಿಸುತ್ತಿದ್ದಾರೆ.-06    

ರಾಣೇಬೆನ್ನೂರು ದೊಡ್ಡಪೇಟೆಯ ಶ್ರೀ ಅಂಬಾಭವಾನಿ ದೇವಸ್ಥಾನದಲ್ಲಿ ನವರಾತ್ರಿ ಹಬ್ಬದ ಹಿನ್ನಲೆಯಲ್ಲಿ ದೇವಿಗೆ ನೋಟಿನ ವಿಶೇಷ ಅಲಂಕಾರ ಮಾಡಿರುವುದು. 


ಸುದ್ದಿ ಓದಿ