ಶಿಗ್ಗಾವ್

ಗಜಾನನೋತ್ಸವದ ನಿಮಿತ್ಯ ಸಾಂಸ್ಕೃತಿಕ ಕಾರ್ಯಕ್ರಮ

ಗಜಾನನೋತ್ಸವದ ನಿಮಿತ್ಯ ಸಾಂಸ್ಕೃತಿಕ ಕಾರ್ಯಕ್ರಮ

ಲೋಕದರ್ಶನ ವರದಿ

ಶಿಗ್ಗಾವಿ 04: ಪವಿತ್ರವಾದ ಹೃದಯದಲ್ಲಿ ಭಾವ ತುಂಬಿದ ಭಕ್ತಿಯಲ್ಲಿ ವರಸಿದ್ಧಿ ವಿನಾಯಕನನ್ನು ಸ್ಮರಿಸಿದರೆ ನಮಗೆ ಏನೂ ಕಡಿಮೆ ಆಗುವುದಿಲ್ಲ ಎಂದು ಗುತ್ತಿಗೆದಾರ ಅಜರ್ುನ ಹಂಚಿನ ಮನಿಯವರು ಹೇಳಿದರು.

         ಪಟ್ಟಣದ ರಾಣಿ ಚೆನ್ನಮ್ಮ ನಗರ ಹಾಗೂ ಬಸವ ನಗರಗಳ ಜಂಟಿಯಾಗಿ ವರಸಿದ್ಧಿ ವಿನಾಯಕ ಸಮಿತಿಯವರು ಗಜಾನನೋತ್ಸವದ ನಿಮಿತ್ಯವಾಗಿ  ಏರ್ಪಡಿಸಿದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ ದೇವರನ್ನು ಮತ್ತು ಗುರುಹಿರಿಯರನ್ನು ಗೌರವಿಸಿದರೆ ನಮ್ಮ ಮಕ್ಕಳು ನಮ್ಮನ್ನು ಗೌರವಿಸಿ ಪೋಷಿಸುತ್ತಾರೆ ಮಕ್ಕಳಿಗೆ ವಿದ್ಯೆ ಬುದ್ಧಿಯ ಜೊತೆಗೆ ಮನರಂಜನೇಯ ಸಾಂಸ್ಕೃತಿಕ ಚಟುವಟಿಕೆಗಳು ಬಲುಮುಖ್ಯ ಎಂದರು.

ಪುರಸಭೆ ಸದಸ್ಯೆ ಸಂಗೀತ ವಾಲ್ಮೀಕಿ ಮಾತನಾಡಿ ವರಸಿದ್ದಿ ವಿನಾಯಕ ಸಮಿತಿ ವಿಭಿನ್ನವಾಗಿ ಗಣೇಶೋತ್ಸವ ಮಾಡಿದ್ದು ಇದು ನಮ್ಮ ಪಟ್ಟಣದಲ್ಲಿ ಮಾದರಿಯಾದ ಕಾರ್ಯಕ್ರಮವಾಗಿದೆ ಎಂದರು.

 ಈ ಸಂದರ್ಭದಲ್ಲಿ  ಸಾಹಿತಿ ಶಿವಾನಂದ ಮ್ಯಾಗೇರಿ, ಉದ್ಯಮಿ ನರಹರಿ ಕಟ್ಟಿ ಗುತ್ತಿಗೆದಾರ ಮಂಜುನಾಥ್ ಕಾರಡಗಿ, ಕಲಘಟಗಿ ದಂಡಾಧಿಕಾರಿ ಎಲ್ಲಪ್ಪ ಕೋಣನವರ್, ಕಲಾವಿದರಾದ ಬಸವರಾಜ ಗೂಬ್ಬಿ, ಬಸವರಾಜ್ ಬೂದಿಹಾಳ, ಪ್ರಕಾಶ್ ಶಿಗ್ಗಾವಿ ಶಿಕ್ಷಕರಾದ ಕಟ್ಟಿಮನಿ ಗುರುರಾಜ್ ಹಳ್ಯಾಳ ಹೀರಾಬಾಯಿ ಕುಲಕರ್ಣಿ ವಿನಾಯಕ್ ರವಿ ಹೊಟ್ಟಿಗೌಡರ್ ವಿಜಯಕುಮಾರ್, ಪರಮೇಶಿ ಲಮಾಣಿ, ಮಂಜು, ಮಾರುತಿ, ಈರಣ್ಣ, ಅನೇಕ ಮಹನೀಯರು ಪಾಲ್ಗೊಂಡಿದ್ದರು ಇದೇ ಸಂದರ್ಭದಲ್ಲಿ ಯೋಧರಿಗೆ ಕಲಾವಿದರಿಗೆ ಗಣ್ಯರಿಗೆ ಸನ್ಮಾನಿಸಲಾಯಿತು 

ಸುದ್ದಿ ಓದಿ