ರಾಣೆಬೆನ್ನೂರ

ನಾಡ ಹಬ್ಬ ದಸರಾ 17ರಂದು ದಾಂಡಿಯ ಸಾಂಸ್ಕೃತಿಕ ಸಂಜೆ

ನಾಡ ಹಬ್ಬ ದಸರಾ 17ರಂದು ದಾಂಡಿಯ ಸಾಂಸ್ಕೃತಿಕ ಸಂಜೆ

ರಾಣೇಬೆನ್ನೂರು 14:  ವಾಣಿಜ್ಯ ನಗರದಲ್ಲಿ ಪ್ರಥಮ ಬಾರಿಗೆ ಅಕ್ಟೋಬರ್ 15 ಮತ್ತು 16 ಹಾಗೂ 17 ರಂದು 3 ದಿವಸಗಳ ಕಾಲ, ನಾಡ ಹಬ್ಬ ದಸರಾ ನಿಮಿತ್ತವಾಗಿ, ದಾಂಡಿಯ ನೈಟ್ ಸಾಂಸ್ಕೃತಿಕ ಸಂಜೆ ಆಯೋಜಿಸಲಾಗಿದೆ. ಎಂದು ಕೃಷ್ಣಮೃಗ ಸಂಸ್ಥೆಯ  ಅಧ್ಯಕ್ಷೆ ಶ್ರೀಮತಿ ರುಕ್ಮಿಣಿ ಸಾಹುಕಾರ್ ಹೇಳಿದರು. ಅವರು ಶುಕ್ರವಾರ ಮುಂಜಾನೆ ಓಂ ಸಭಾ ಗ್ರಹದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.         ಯುಥ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾ ಸರ್ಕಾರಿ ಇತರ ಸಂಸ್ಥೆಯ ಅಡ್ವೆಂಚರ್ ಕ್ಲಬ್ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, ಕೃಷ್ಣಮೃಗ ನಾಮಕರಣದ ಶಾಖೆ ಇದಾಗಿದೆ ಎಂದರು.     

 ಯುಥ್ ಹಾಸ್ಟೆಲ್ ಅಸೋಸಿಯೇಷನ್ ಸದಸ್ಯತ್ವವನ್ನು ಪಡೆದವರು ಜಗತ್ತಿನಾದ್ಯಂತ ಇರುವ ಯುಥ್ ಹಾಸ್ಟೆಲ್ ವಸತಿ ಗ್ರಹಗಳಲ್ಲಿ ಅತ್ಯಂತ ಕಡಿಮೆ ದರದಲ್ಲಿ ಉಳಿದುಕೊಳ್ಳಬಹುದು ಹಾಗೂ ಯಾವುದೇ ಶಾಖೆಯು ಆಯೋಜಿಸುವ ಸಾಹಸ ಕಾರ್ಯದಲ್ಲಿ ಭಾಗವಹಿಸಬಹುದಾಗಿದೆ ಎಂದರು. ಇದೇ 15ರಂದು ಕೃಷ್ಣಮೃಗ  ಶಾಖೆಯು, ಮಕ್ಕಳಿಗಾಗಿ ಛದ್ಮ ವೇಷ ಸ್ಪರ್ಧೆ, ಕಲಾ ಸಂತೆ ಮತ್ತು ರಸಮಂಜರಿ ಕಾರ್ಯಕ್ರಮ  ಆಯೋಜಿಸಲಾಗಿದೆ. ಅಕ್ಟೋಬರ್ 17ರಂದು ಸಂಜೆ 5ಗಂಟೆಗೆ, ನಗರ ಹೊರ ವಲಯದ ಸಿ.ಬಿ ರಸ್ತೆಯಲ್ಲಿರುವ ಓಂ ಪಬ್ಲಿಕ್ ಕಾಲೇಜು ಸಭಾಂಗಣದಲ್ಲಿ ದಾಂಡಿಯ ನೈಟ್ ಸಾಂಸ್ಕೃತಿಕ ಸಂಜೆ ಹಾಗೂ ಕಲಾತ್ಮಕ ವಸ್ತುಗಳ ಪ್ರದರ್ಶನ ಕಾರ್ಯಕ್ರಮವು ಆಯೋಜಿಸಲಾಗಿದೆ, ಈಗಾಗಲೇ ಸಂಬಂಧಿಸಿದಂತೆ ದಾಂಡಿಯಾ ನೃತ್ಯ ಕಾರ್ಯಕ್ರಮದ ಪ್ರವೇಶ ಪತ್ರಗಳನ್ನು  ನೀಡಲಾಗಿದ್ದು, ವಾಣಿಜ್ಯ ನಗರದ ಮತ್ತು ತಾಲೂಕಿನ ಜನತೆ ಪಾಲ್ಗೊಂಡು, ಭವಿಷ್ಯದಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳಿಗೂ ಪ್ರೋತ್ಸಾಹಿಸಬೇಕೆಂದು ರುಕ್ಮಿಣಿ ಸಾಹುಕಾರ್ ಅವರು ಕೋರಿದರು. ಪತ್ರಿಕಾಗೋಷ್ಠಿಯಲ್ಲಿ ಚೇರ್ಮನ್ ಡಾ: ಮನೋಜ ಸಾಹುಕಾರ್, ಕಾರ್ಯದರ್ಶಿ ಶಿಲ್ಪಾ ಸಾಹುಕಾರ್, ವ್ಯವಸ್ಥಾಪಕರಾದ ಶ್ರೀಮತಿ ಮಂಗಳ ಗೌರಿ ಪೂಜಾರ್, ಆಯೋಜಕರಾದ ಸುಧೀರ್ ಕುರುವತ್ತಿ, ಸಂಜನಾ ಕುರುವತ್ತಿ, ಸುಮಾ ಹೊಟ್ಟಿಗೌಡ್ರ, ಸುಮಾ ಉಪ್ಪಿನ, ಡಾ: ಗೀರೀಶ್ ಕೆಂಚಪ್ಪನವರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. 


ಸುದ್ದಿ ಓದಿ