ಹಲಗೇರಿಯಲ್ಲಿ ಕನ್ನಡ ,ಸಂಸ್ಕೃತಿ ಇಲಾಖೆ ಪ್ರಾಯೋಜಿತ ಸಾಂಸ್ಕೃತಿಕ ಕಲಾ ವೈಭವ
ರಾಣೆಬೆನ್ನೂರು 23: ಕಲೆ, ಸಾಹಿತ್ಯ,ಸಂಗೀತ, ಪ್ರತಿಯೊಬ್ಬ ಮನುಷ್ಯನ ಅವಿಭಾಜ್ಯ ಅಂಗವಾಗಬೇಕು ಕಲೆ ಮತ್ತು ಕಲಾವಿದರು ಈ ದೇಶದ ಸಂಸ್ಕೃತಿ ಹರಿಕಾರರು ಅಂತಹ ಭವ್ಯ ಪರಂಪರೆಯನ್ನು ಪುನರುತ್ಥಾನಗೊಳಿಸಬೇಕಾದ ಇಂದಿನ ಬಹು ಅಗತ್ಯವಿದೆ ಎಂದು ವರ್ತಕ, ದೊಡ್ಡ ವೀರಭದ್ರಪ್ಪ ಮೋಟಗಿ ಹೇಳಿದರು. ಅವರು ತಾಲೂಕಿನ ಹಲಗೇರಿ ಗ್ರಾಮದಲ್ಲಿ, ಅನುಪಲ್ಲವಿ ಸಂಗೀತ ಕಲಾ ಸಂಸ್ಥೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಕತ್ವದಲ್ಲಿ ಇತ್ತೀಚೆಗೆ ಆಯೋಜಿಸಿದ್ದ, ಸಾಂಸ್ಕೃತಿಕ ಕಲಾ ವೈಭವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಭಾರತೀಯ ಸಂಸ್ಕೃತಿಯ ಕಲೆ ಮತ್ತು ಕಲಾವಿದರು ಪಾಚ್ಚಿಮಾತ್ಯ ಸಂಸ್ಕೃತಿಯ ಭರಾಟೆಯಲ್ಲಿ ಇಂದು ನೈಜ ಗ್ರಾಮೀಣ ಸಂಸ್ಕೃತಿಯ ಕಲೆ, ಕಲಾವಿದರು ನೇಪತ್ಯಕ್ಕೆ ಸರಿಯುತ್ತಿದ್ದಾರೆ ಎಂದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ನೇತ್ರಾ ಹ. ಮುದಿ ನಾಯಕರ್ ಅವರು ಅಧ್ಯಕ್ಷತೆ ವಹಿಸಿದ್ದರು. ಪಿಎಸ್ಐ ಬಸವರಾಜ ಬಿರಾದಾರ್ ಅವರು ಸಾಂಸ್ಕೃತಿಕ ಕಲಾ ವೈಭವ ಉದ್ಘಾಟಿಸಿ, ಚಾಲನೆ ನೀಡಿದರು. ಗ್ರಾಮದ ಗಣ್ಯರಾದ, ಸೋಮನಗೌಡ ಮಾಳಗಿ, ಸಿದ್ಲಿಂಗಪ್ಪ ಪಾಟೀಲ ಶಿವಪುತ್ರಪ್ಪ ಹರಿಯಾಳದವರ, ಶಿವಾನಂದ ಕನ್ನಪ್ಪಳವರ, ಸಿದ್ದನಗೌಡ ಕಡೂರು, ಮುದ್ದೆಪ್ಪ ಬಣಕಾರ, ಹನುಮಂತಪ್ಪ ಕನ್ನಪ್ಪಳವರ, ಬಸಪ್ಪ ಕಡೂರು, ಸೇರಿದಂತೆ ಮತ್ತಿತರ ಗಣ್ಯರು, ಗ್ರಾಮ ಪಂಚಾಯತಿ ಸದಸ್ಯರು, ಗ್ರಾಮದ ಮುಖಂಡರು ಉಪಸ್ಥಿತರಿದ್ದರು. ಸಾಂಸ್ಕೃತಿಕ ಕಲಾ ವೈಭವದಲ್ಲಿ ಕುಪ್ಪೇಲೂರು ಶ್ರೀಮತಿ ಯಶೋಧ ಗುಡಗುಡಿ, ಸಂಗಡಿಗರ ಸುಗಮ ಸಂಗೀತ, ಬಲಮುರಿ ಬಪ್ಪ ನೃತ್ಯ ಕಲಾಕೇಂದ್ರದವರ ಶಾಸ್ತ್ರೀಯ ನೃತ್ಯ, ಗುಡ್ಡರಾಜ್ ಹಲಗೇರಿ ಸಂಗಡಿಗರ ಜಾನಪದ ಗೀತೆಗಳು, ಗ್ರಾಮೀಣ ನಾಗರಿಕರ ಗಮನ ಸೆಳೆದವು.