ಗಾಂಜಾ ಬೆಳೆ: ಆರೋಪಿಗೆ 10 ವರ್ಷ ಕಠಿಣ ಶಿಕ್ಷೆ
ಅಥಣಿ 27: ತಾಲೂಕಿನ ಬಳವಾಡ ಗ್ರಾಮದ ಆರೋಪಿಯಾದ ಮೌಲಾಸಾಬ್ ಇಮಾಮಸಾಬ್ ನದಾಫ್ (ಪಿಂಜಾರ) 55 ವರ್ಷದ ಇವರು ತಮ್ಮ ಜಮೀನಿನಲ್ಲಿ ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆದು ಹಾಗೂ ಒಣ ಗಾಂಜಾವನ್ನು ಸಂಗ್ರಹ ಆರೋಪದಡಿಯಲ್ಲಿ ಬೆಳಗಾವಿಯ ಎರಡನೇ ವಿಶೇಷ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿ 10 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಒಂದು ಲಕ್ಷ ರೂಪಾಯಿ ದಂಡ ವಿಧಿಸಿದೆ.
2018 ಜೂನ 9ರಂದು ಅಂದಿನ ಡಿಸಿಆರ್ಬಿ. ಬೆಳಗಾವಿ ಪೋಲಿಸ್ ಇನ್ಸಪೆಕ್ಟರಾದ ಶಂಕರಗೌಡ ವಿ ಪಾಟೀಲ್ ಖಚಿತ ಮಾಹಿತಿ ಮೇರೆಗೆ ದಾಳಿಮಾಡಿ ಸರಿ ಸುಮಾರು 3,36000 ರೂಪಾಯಿ ಮೌಲ್ಯದ ಗಾಂಜಾ ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ಈ ಕುರಿತು ಬೆಳಗಾವಿ ಎರಡನೇ ವಿಶೇಷ ಜಿಲ್ಲಾ ನ್ಯಾಯಾಲಯ ಆರೋಪಿತನ ಮೇಲೆ ಆರೋಪ ಸಾಬೀತಾಗಿರುವುದರಿಂದ ನ್ಯಾಯಾಧೀಶರಾದ ಜಿ ನಂಜುಂಡಯ್ಯನವರು 10 ವರ್ಷ ಕಠಿಣ ಕಾರ್ಯಗ್ರಹ ಶಿಕ್ಷೆ ಹಾಗೂ ಒಂದು ಲಕ್ಷ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.