ಬೈಲಹೊಂಗಲ

ಅನೈತಿಕ ಸಂಬಂಧಕ್ಕೆ ಅಡ್ಡಿ: ಪ್ರೀಯಕರನೊಂದಿಗೆ ಸೇರಿ ಪತಿಯನ್ನೇ ಕೊಂದ ಪತ್ನಿ

ಅನೈತಿಕ ಸಂಬಂಧಕ್ಕೆ ಅಡ್ಡಿ: ಪ್ರೀಯಕರನೊಂದಿಗೆ ಸೇರಿ ಪತಿಯನ್ನೇ ಕೊಂದ ಪತ್ನಿ

ಬೈಲಹೊಂಗಲ 20: ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಗಂಡನನ್ನು ಪತ್ನಿ, ಪ್ರೀಯಕರ ಹಾಗೂ ಆತನ ಗೆಳೆಯರೊಂದಿಗೆ ಸೇರಿ ಕೊಲೆ ಮಾಡಿದ ಪ್ರಕರಣವನ್ನು  ಬೈಲಹೊಂಗಲ ಪೊಲೀಸರು ಭೇದಿಸಿ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿತರು ಬಳಸಿದ ಮೋಟಾರ ಸೈಕಲ್, ಇಟಿಯೋಜ್ ಕಾರ ಜಪ್ತ ಮಾಡಿ, 6 ಜನ ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.  

ಅಪರಿಚಿತ ಶವದ ಕುರಿತು ಕಳೆದ ಮೇ 28 ರಂದು ತಾಲೂಕಿನ ಅರವಳ್ಳಿ ಗ್ರಾಮದ ಮಲ್ಲಿಕಾರ್ಜುನ ಬಸಪ್ಪ ಗಾಣಿಗೇರ ಅವರು ಮಾಹಿತಿ ನೀಡಿ, ಯಾರೋ ತಲೆಗೆ, ಮುಖಕ್ಕೆ ಹೊಡೆದು ಭಾರಿ ಗಾಯ ಪಡಿಸಿ ಕೊಲೆ ಮಾಡಿ ಪುರಾವೆ ನಾಶಪಡಿಸುವ ಉದ್ದೇಶದಿಂದ ಶವವನ್ನು ಪ್ಲಾಸ್ಟಿಕ ತಟ್ಟಿನಲ್ಲಿ ಹಾಕಿ ನಯಾನಗರದ ಮಲಪ್ರಭಾ ನದಿಯಲ್ಲಿ ಎಸೆದಿದ್ದಾರೆಂದು ದೂರು ಸಲ್ಲಿಸಿದ್ದರು.  

ಈ ಕುರಿತು ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಎಸ್‌ಪಿ ಲಕ್ಷಣ ನಿಂಬರಗಿ ಹೆಚ್ಚುವರಿ ಎಸ್‌ಪಿ ಎಮ್‌. ನಂದಗಾಂವಿ ಡಿವಾಯ್‌ಎಸ್‌ಪಿ ಶಿವಾನಂದ ಕಟಗಿ ಮಾರ್ಗದರ್ಶನದಲ್ಲಿ ಸಿಪಿಐ ಯು. ಹೆಚ್‌. ಸಾತೇನಹಳ್ಳಿ, ಪಿಎಸ್‌ಐ ಪ್ರವೀಣ ಕೋಟಿ ಅವರ ನೇತೃತ್ವದಲ್ಲಿ ತಂಡ ರಚಿಸಿ ತನಿಖೆ ಕೈಕೊಂಡು ಕೊಲೆಯಾದ ವ್ಯಕ್ತಿಯನ್ನು ಧಾರವಾಡ ಜಿಲ್ಲೆಯ ಗೊಂಗಡಿಕೊಪ್ಪ ಗ್ರಾಮದ ಯಲ್ಲಪ್ಪ ಲಕ್ಷ್ಮಣ ಹಗೇದಾರ (39) ಎಂದು ಗುರುತಿಸಿ, ಮೃತನ ಹೆಂಡತಿ ಆರೋಪಿ ಸರಸ್ವತಿ (28) ಇವಳು ಆರೋಪಿತನಾದ ಧಾರವಾಡದ ಹತ್ತಿಕೊಳ ಗ್ರಾಮದ ಗೋಪಾಲಸಿಂಗ ಸೋಮಸಿಂಗ ಹಜಾರೆ (28) ಈತನೊಂದಿಗೆ ಅನೈತಿಕ ಸಂಬಂಧ ಹೊಂದಿರುವ ಕುರಿತು ಗಂಡ ಪ್ರಶ್ನಿಸಿದಾಗ, ತನ್ನ ಅನೈತಿಕ ಸಂಬಂಧಕ್ಕೆ ಅಡ್ಡ ಬಂದ ಗಂಡನನ್ನು ತನ್ನ ಪ್ರಿಯಕರ ಆತನ ಗೆಳೆಯರ ಜೊತೆ ಸೇರಿ ಗಂಡನನ್ನು ಮಾರಕಾಸ್ತ್ರಗಳಿಂದ ಕೊಲೆ ಮಾಡಿ, ಮಲಪ್ರಭಾ ನದಿಯಲ್ಲಿ ಎಸೆದಿದ್ದಾರೆಂದು ಪ್ರಕರಣ ದಾಖಲಾಗಿದೆ. 

ಪ್ರೀಯಕರನ ಗೆಳೆಯರಾದ ಧಾರವಾಡದ ಮರಾಠಾ ಕಾಲನಿ ದುರ್ಗಾದೇವಿ ಗುಡಿ ಕಿಲ್ಲಾ ನಿವಾಸಿ, ಕಾರ್ತಿಕ ದಿನೇಶ ಕಾಯಸ್ತ (28), ಮಾಳಮಡ್ಡಿ ಧಾರವಾಡದ ಚಿದಾನಂದ ಪ್ರಕಾಶ ಕೋರಿ (21), ಹಿರೇಹೊನ್ನಳ್ಳಿ ಪಾಲಿ ಮಾಳಮಡ್ಡಿ ಧಾರವಾಡ ಶಂಬುಲಿಂಗ ಬಸವಂತಪ್ಪಾ ನೇಣಕ್ಕಿ (29), ಧಾರವಾಡ ಹೆಬ್ಬಳ್ಳಿಯಲ್ಲಿ ರವಿವಾರ ಪೇಠ ಓಣಿಯ ನಿಂಗಪ್ಪಾ ಬಸವರಾಜ ಟೆಂಗಿನಕಾಯಿ (30) ಆರೋಪಿತರಾಗಿದ್ದಾರೆ. ಇವರೆಲ್ಲ ಸೇರಿ ಒಳಸಂಚು ಮಾಡಿ ಮೃತನಿಗೆ ಕಬ್ಬಿಣದ ರಾಡನಿಂದ ತಲೆಗೆ ಹೊಡೆದು ಕೊಲೆ ಮಾಡಿ ಪುರಾವೆ ನಾಶಪಡಿಸುವ ಉದ್ದೇಶದಿಂದ ಶವವನ್ನು ಪ್ಲಾಸ್ಟಿಕ ತಟ್ಟಿನಲ್ಲಿ ಕಟ್ಟಿ ತಂದು ನಯಾನಗರ ಗ್ರಾಮದ ಹತ್ತಿರದ ಮಲಪ್ರಭಾ ನದಿಯಲ್ಲಿ ಒಗೆದು ಹೋಗಿದ್ದಾರೆಂದು ಪೋಲಿಸ ತನಿಖೆಯಲ್ಲಿ ಗೊತ್ತಾಗಿದೆ. 


ಸುದ್ದಿ ಓದಿ