ಹಣ, ಚಿನ್ನಾಭರಣ ದೋಚುತ್ತಿದ್ದ ಏಳು ಜನರ ಬಂಧನ
ಸಿಂದಗಿ 30: ರಸ್ತೆಯಲ್ಲಿ ಅಡ್ಡ ನಿಂತು ವಾಹನಗಳನ್ನು ನಿಲ್ಲಿಸಿ ಸವಾರರಿಗೆ ಬೆದರಿಕೆ ಹಾಕಿ ಹಣ ಹಾಗೂ ಚಿನ್ನಾಭರಣ ದೋಚುತ್ತಿದ್ದ ಏಳು ಜನರ ತಂಡವನ್ನು ಪೊಲೀಸರು ಬಂಧಿಸಿದ್ದಾರೆ.
ವಿಷ್ಣು ರಾಮು ಬರಕೇರ, ಮಾಂತೇಶ ಹುಲಗಪ್ಪ ಮಳಿಗನಮನಿ, ಮಧು ರಾಜು ಕಿತ್ತೂರ, ಕಾಶೀನಾಥ ಮಹಾದೇವಪ್ಪ ಬಂಡಾರಿ, ನಾಗರಾಜ ಬಸವರಾಜ ಆದೋನಿ, ರಾಕೇಶ ಮಧಕರ ಗಂಜಾಳ, ಮಧುಕರ ಶಾಮು ಜಮಖಂಡಿ ಬಂಧಿತರು. ಇವರೆಲ್ಲ ಕೂಡಿಕೊಂಡು ಸಿಂದಗಿ-ಆಲಮೇಲ ರಸ್ತೆಗೆ ಇರುವ ಗಣಿಹಾರ ತಾಂಡ ಕ್ರಾಸ್ ಹತ್ತಿರ ಕಬ್ಬಣದ ರಾಡು ಮತ್ತು ಖಾರದ ಪುಡಿ ಹಿಡಿದುಕೊಂಡು ನಿಂತು ವಾಹನಗಳನ್ನು ನಿಲ್ಲಿಸಿ ಹಣ ದೋಚುತ್ತಿದ್ದ ವೇಳ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ. ಆರೋಪಿತರಿಂದ ಎರಡು ಕಬ್ಬಿಣದ ರಾಡುಗಳು, ಎರಡು ಕಟ್ಟಿಗೆಯ ಬಡಿಗೆಗಳು, ಖಾರದ ಪುಡಿ ಸಿಕ್ಕಿದೆ. ಈ ಕುರಿತು ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.