ರಾಣೆಬೆನ್ನೂರ

ಕ್ರಿಕೇಟ್ ತರಬೇತಿ : ಯುವರಾಜ್ ರುಮಲ್ ಅತಿ ಹೆಚ್ಚು ಅಂಕ ಗಳಿಸಿ ಸಾಧನೆ

ಕ್ರಿಕೇಟ್ ತರಬೇತಿ : ಯುವರಾಜ್ ರುಮಲ್ ಅತಿ ಹೆಚ್ಚು ಅಂಕ ಗಳಿಸಿ ಸಾಧನೆ

ರಾಣೆಬೆನ್ನೂರು 27: ನಗರದ ಹೊರವಲಯ ಹುಣಸಿಕಟ್ಟಿ ರಸ್ತೆಯ ದೆಹಲಿ ಸೆಂಟ್ರಲ್ ಸ್ಕೂಲ್ ಆವರಣದಲ್ಲಿ  ಇತ್ತೀಚೆಗೆ ಡಿ ಯುನೈಟೆಡ್ ಕ್ರಿಕೆಟ್ ಅಕಾಡೆಮಿಯು ಕ್ರಿಕೆಟ್ ಕುರಿತು ತರಬೇತಿ ನಡೆಯಿತು. ತರಬೇತಿಯಲ್ಲಿ ಪಾಲ್ಗೊಂಡ ಶಾಲೆಯ ಕುಮಾರ ಯುವರಾಜ್ ರುಮಲ್ ಅವರು 14 ಚಾಂಪಿಯನ್ ನೆಟ್ ಪ್ರೀಮಿಯರ್ ಲೀಗ್ ಧಾರವಾಡ ವಲಯದ ಆಕ್ಷನ್ ಪ್ರಕ್ರಿಯೆಯಲ್ಲಿ ಅತಿ ಹೆಚ್ಚು ಅಂಕಗಳೊಂದಿಗೆ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿ ತನ್ನ ಸಾಧನೆ ಮೆರೆದಿದ್ದಾರೆ. ಕ್ರೀಡಾಕೂಟವು ಜಿಲ್ಲಾ ಪಂಚಾಯತ್ ಹಾವೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಉಪನಿರ್ದೇಶಕರ ಕಾರ್ಯಾಲಯ ದೈಹಿಕ ಶಿಕ್ಷಣ ವಿಭಾಗ, ಮತ್ತು ಜಿಲ್ಲಾಡಳಿತ ಭವನ ಸಂಯುಕ್ತವಾಗಿ ಆಯೋಜಿಸಿತ್ತು ವಲಯ ಮಟ್ಟದಲ್ಲಿ ನಡೆದ ಈ ಕ್ರೀಡಾ ಸ್ಪರ್ಧೆಯಲ್ಲಿ ಬೆಳಗಾವಿ ವಲಯಕ್ಕೆ ಡಿ ಯುಕ್ರಿ, ಅಕಾಡೆಮಿಯ ಶ್ರೇಯಸ್ ಕಡ್ಕೋಲ್, ಲೋಹಿತ್ ವಗ್ಗ ಆಯ್ಕೆಯಾಗಿದ್ದಾರೆ. 

ಭಾರಿ ಪೈಪೋಟಿ ಮತ್ತು ಸ್ಪರ್ಧಾತ್ಮಕವಾಗಿ ನಡೆದ ಕ್ರೀಡಾಕೂಟದಲ್ಲಿ  ಶಾಲೆಯ ಶೈಕ್ಷಣಿಕ ಪ್ರತಿಭಾವಂತ ವಿದ್ಯಾರ್ಥಿಗಳಾದಸಿದ್ಧಾರ್ಥ ಪೂಜಾರ, ಕಿಶನ್ ನಾಝರೆ, ನೂತನ್ ಮಾಳಗೊಂಡರ, ಅಲೋಕ್ ಹೊನ್ನಾಳಿ, ಶ್ರೇಯಸ್ ಕಡ್ಕೋಳ, ಚರಣ್ ಮಾರೆರ ಇವರುಗಳು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಧಾರವಾಡ ಝೂನ್ ಆಯೋಜಿಸುವ 14,  ಪ್ರಥಮ ದರ್ಜೆ ಕ್ರಿಕೆಟ್ ಲೀಗ್ ಪಂದ್ಯಾವಳಿಗೆ ಆಯ್ಕೆ ಆಗಿದ್ದಾರೆ. ಎಂದು ದೆಹಲಿ ಸೆಂಟ್ರೆಲ್ ಶಾಲೆಯ ತರಬೇತುದಾರ ಸಂದೀಪ ಪ್ರವೀಣ. ಕುಮಾರ ಅವರು ತಿಳಿಸಿದ್ದಾರೆ. ಸಾಧಕ ವಿದ್ಯಾರ್ಥಿಗಳಿಗೆ ದೆಹಲಿ ಸೆಂಟ್ರಲ್ ಸ್ಕೂಲ್ ನ ಅಧ್ಯಕ್ಷ ವೆಂಕಟೇಶ ತೊಗಟವೀರ, ಪ್ರಾಚಾರ್ಯರು ಮತ್ತು ಶಿಕ್ಷಕರು ಶಾಲಾ ಆಡಳಿತ ಮಂಡಳಿ, ಕ್ರೀಡಾ ಸಂಸ್ಥೆಗಳು ಹಾರ್ದಿಕವಾಗಿ ಅಭಿನಂದಿಸಿದ್ದಾರೆ. 


ಸುದ್ದಿ ಓದಿ