ಇಂಡಿ

‘ಇಂಡಿ ಮಾದರಿ ಮತಕ್ಷೇತ್ರವನ್ನಾಗಿ ಮಾಡಿದ ಕೀರ್ತಿ ಯಶವಂತ್ರಾಯಗೌಡ ರಿಗೆ ಸಲ್ಲುತ್ತದೆ’

‘ಇಂಡಿ ಮಾದರಿ ಮತಕ್ಷೇತ್ರವನ್ನಾಗಿ ಮಾಡಿದ ಕೀರ್ತಿ ಯಶವಂತ್ರಾಯಗೌಡ ರಿಗೆ ಸಲ್ಲುತ್ತದೆ’

ಇಂಡಿ 10: ಅಭಿವೃದ್ಧಿಯಲ್ಲಿ ಜಿಲ್ಲೆಯಲ್ಲಿಯೇ ಇಂಡಿ ಕ್ಷೇತ್ರವನ್ನು ಮಾದರಿ ಮತಕ್ಷೇತ್ರವನ್ನಾಗಿ ಮಾಡಿದ ಕೀರ್ತಿ ಶಾಸಕ ಯಶವಂತ್ರಾಯಗೌಡ ಪಾಟೀಲರಿಗೆ ಸಲ್ಲುತ್ತದೆ ಎಂದು ಆಲಮೇಲದ ಮಲ್ಲಿಬೊಮ್ಮಯ್ಯ ಶ್ರೀಗಳು ಹೇಳಿದರು. 

ಸೋಮವಾರ ಪಟ್ಟಣದ ತಾಲೂಕಾ ಪಂಚಾಯತಿ ಎದುರಿಗೆ ನಡೆದ ಶಾಸಕ ಯಶವಂತ್ರಾಯಗೌಡ ಪಾಟೀಲರ 55ನೇ ವರ್ಷದ ಹಟ್ಟು ಹಬ್ಬದ ಪ್ರಯುಕ್ತ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಆಶೀರ್ವಚನ ನೀಡಿದರು. 

ಶಾಸಕ ಪಾಟೀಲರ ಕನಸು ಕೃಷ್ಣಾ ನದಿಯಿಂದ ನೀರು ತಂದು ತಾಲೂಕಿನಾದ್ಯಂತ ಹಸಿರು ಕ್ರಾಂತಿ ಮಾಡಬೇಕು ಎಂಬುದಾಗಿದೆ. ಇಂಡಿ ಕ್ಷೇತ್ರದಲ್ಲಿಯೇ ಭೀಮಾನದಿ ಹರಿಯುತ್ತಿದೆ. ಆ ನದಿಯನ್ನೂ ಸಹ ಬಳಕೆ ಮಾಡಿಕೊಂಡು ಹಸಿರು ಕ್ರಾಂತಿ ಮಾಡಿ, ಇದು ನನ್ನ ವೈಯಕ್ತಿಕ ಅನಿಸಿಕೆಯಾಗಿದೆ ಎಂದು ಶ್ರೀಗಳು ನುಡಿದರು. 

ತಾಲೂಕಿನ ಸಮಗ್ರ ಅಭಿವೃದ್ಧಿಯಾಗಬೇಕಾದರೆ ಮತ್ತೊಮ್ಮೆ ಯಶವಂತ್ರಾಯಗೌಡರನ್ನೇ ಶಾಸಕರಾಗಿ ಆಯ್ಕೆ ಮಾಡಬೇಕು. ಅವರ ಸರಕಾರ ಅಧಿಕಾರಕ್ಕೆ ಬಂದರೆ ಯಶವಂತ್ರಾಯರು ಮಂತ್ರಿಯಾಗಿ ಇಂಡಿ ಕ್ಷೇತ್ರವನ್ನು ಜಿಲ್ಲಾಕೇಂದ್ರ ಮಾಡಬಹುದಾಗಿದೆ ಮತ್ತು ಅಭಿವೃದ್ಧಿಯ ಪರ್ವವೇ ಆಗಲಿದೆ ಎಂದರು. 

ಸಾನಿಧ್ಯವನ್ನು ಗೋಳಸಾರದ ಅಭಿನವ ಪುಂಡಲಿಂಗ ಮಹಾರಾಜರು, ರೋಡಗಿಯ ಅಭಿನವ ಶಿವಾರ್ಚಾಯ ಶ್ರೀಗಳು, ಬೀದರದ ಪಂಥೇಜಿ ಶ್ರೀಗಳು ಆಶೀರ್ವಚನ ನೀಡಿದರು. 

ಯಶವಂತ ಕೋಳೂರಶಾಸ್ತ್ರಿ, ಬಿ.ಎಂ.ಕೊರೆ, ಜಟ್ಟೆಪ್ಪ ರವಳಿ, ಇಲಿಯಾಸ್ ಬೋರಾಮಣಿ, ಬಿ.ಸಿ. ಸಾಹುಕಾರ, ಮುತ್ತಪ್ಪ ಪೋತೆ, ತೆನ್ನೆಳ್ಳಿಯ ಮೌಲಾನ, ಪುರಸಭೆ ಮಾಜಿ ಅಧ್ಯಕ್ಷ ಶ್ರೀಕಾಂತ ಕೂಡಿಗನೂರ, ಭೀಮಣ್ಣ ಕವಲಗಿ, ನಿರ್ಮಾಲಾ ತಳಕೇರಿ, ಅಣ್ಣಾರಾಯ ಬಿದರಕೊಟಿ, ಅಶೋಕ ಪಂಡಿತ ಮಾತನಾಡಿದರು. 

ಇಂಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಾವೀದ ಮೋಮಿನ್, ಪ್ರಶಾಂತ ಕಾಳೆ, ಕಲ್ಲನಗೌಡ ಬಿರಾದಾರ, ಧರ್ಮು ವಾಲಿಕಾರ, ಮಂಜುನಾಥ ಕಾಮಗೊಂಡ, ಭಿಮಾಶಂಕರ ಮೂರಮನ, ಅಸ್ಲಂ ಕಡಣಿ, ಸತೀಶ್ ಕುಂಬಾರ, ಮಲ್ಲನಗೌಡ ಬಿರಾದಾರ, ಅರ್ಜುನ ನಾಯ್ಕೋಡಿ, ಮೈಹಿಬೂಬ ಅರಬ, ಅವಿನಾಶ ಬಗಲಿ, ಲಿಂಬಾಜಿ ರಾಠೋಡ, ಸುರೇಶ ಶಿವುರ, ಶಿವು ಬಿಸನಾಳ, ರಶೀದ ಅರಬ, ಸುದೀರ ಕರಕಟ್ಟಿ, ಕಾಮಣ್ಣ ದಶವಂತ ಸೇರಿದಂತೆ ಅನೇಕ ಕಾಂಗ್ರೇಸ್ ಕಾರ್ಯಕರ್ತರು ಹಾಗೂ ಶಾಸಕರ ಅಭಿಮಾನಿಗಳು ಇದ್ದರು. 

ಡಿ.ಎ. ಮುಜಗೊಂಡ ಸ್ವಾಗತಿಸಿದರು. ಪಂಡಿತ ಹೂಗಾರ ನಿರೂಪಿಸಿದರು. 


ಸುದ್ದಿ ಓದಿ