ಸಮಾಜದಲ್ಲಿ ಸಾಮರಸ್ಯ ಮೂಡಿಸಿ: ತಹಸೀಲ್ದಾರ ಕುಲಕರ್ಣಿ
ಗುಳೇದಗುಡ್ಡ01 ದೇಶದಲ್ಲಿ ಅರಾಜಕತೆ, ಅವ್ಯವಸ್ಥೆ, ಅನಕ್ಷರತೆ, ಮೂಢನಂಬಿಕೆ ಮುಂತಾದ ಸಮಸ್ಯೆಗಳನ್ನು ಹೋಗಲಾಡಿಸಿ ಶಾಲೆ ಮತ್ತು ಸಮುದಾಯದಲ್ಲಿ ಶಿಸ್ತು, ಚಾರಿತ್ರ್ಯ, ಶಾಂತತೆ, ಸಹಕಾರ, ಸಹಬಾಳ್ವೆ, ಸಾಮಾಜಿಕ ಸಾಮರಸ್ಯ ಮೂಡಿಸಲು ಶಿಕ್ಷಕರಾಗುವ ತಾವುಗಳು ಪಣ ತೊಡಬೇಕೆಂದು ತಹಸೀಲ್ದಾರ ಜಿ.ಎಂ.ಕುಲಕರ್ಣಿ ಹೇಳಿದರು
ಅವರು ಬುಧವಾರ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ, ವಿಜಯಪುರ ಹಾಗೂ ಶ್ರೀಜಗದ್ಗುರು ಗುರುಸಿದ್ಧೇಶ್ವರ ವಿದ್ಯಾವರ್ಧಕ ಹಾಗೂ ಸಾಂಸ್ಕೃತಿಕ ಸಂಸ್ಥೆಯ, ಶ್ರೀ ಗುರುಸಿದ್ಧೇಶ್ವರ ಮಹಿಳಾ ಶಿಕ್ಷಣ ಮಹಾವಿದ್ಯಾಲಯದ ಆಶ್ರಯದಲ್ಲಿ ಜರುಗಿದ ಎರಡು ದಿನಗಳ ಕಾಲ ಬಿ.ಇಡಿ ಪ್ರಶಿಕ್ಷಣಾರ್ಥಿಗಳಿಗಾಗಿ 2020-21 ನೇ ಸಾಲಿನ ಪೌರತ್ವ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಸಮಾರಂಭದಲ್ಲಿ ಜಗದ್ಗುರು ಬಸವರಾಜ ಪಟ್ಟದಾರ್ಯ ಶ್ರೀಗಳು ಸಾನಿಧ್ಯವಹಿಸಿ ಮಾತನಾಡಿ, ಜಾತಿ, ಮತ, ಪಂಥಗಳ ಅಭಿಮಾನದ ಮೌಢ್ಯ ಹೆಚ್ಚಾಗಿ ಅದೇ ಜಾತಿಯ ಸಂಸ್ಕೃತಿ ಅನುಸರಿಸಬೇಕೆನ್ನುವ ಮನೋಧೋರಣೆ ನಾಗರಿಕ ಹಿತ ಚಿಂತನೆಗಳನ್ನು, ಸಮಾಜದ ಸ್ವಾಸ್ಥ್ಯವನ್ನು ಅಧ:ಪಥನಕ್ಕೀಡು ಮಾಡುತ್ತವೆ. ಉತ್ತಮ ನಾಗರಿಕನಾದವನು ನೀತಿ, ಧರ್ಮ ಹಿಡಿಯಬೇಕು. ಧರ್ಮವು ಜನರ ಮನಸ್ಸುಗಳನ್ನು ಒಂದು ಮಾಡುವ, ಒಂದೇ ತಾಯಿಯ ಮಕ್ಕಳಂತೆ ಬದುಕುವ ರೀತಿ, ನೀತಿಗಳನ್ನು ಧರ್ಮ ಹೇಳುತ್ತವೆ. ಸಹಮತೆ, ಸಮನ್ವಯತೆಯಿಂದ ದೇಶದ ಅಭಿವೃದ್ಧಿಗೆ ಪೂರಕವಾದ ಕೆಲಸ ಮಾಡುವವನು ನಿಜವಾದ ನಾಗರಿಕರು ಎಂದರು.
ತಾಲ್ಲೂಕಾ ಸರ್ಕಾರಿ ಆಸ್ಪತ್ರೆ ವೈಧ್ಯಾಧಿಕಾರಿ ಡಾ.ನಾಗರಾಜ ಕುರಿ, ಪ್ರಾಚಾರ್ಯೆ ಡಾ.ಪಿ.ಆಯ್.ಮೋಮಿನ್ ಮಾತನಾಡಿದರು. ಗುರುಸಿದ್ಧೇಶ್ವರ ವಿದ್ಯಾವರ್ಧಕ ಹಾಗೂ ಸಾಂಸ್ಕೃತಿಕ ಸಂಸ್ಥೆಯ ನಿರ್ದೇಶಕರಾದ ಶೇಖರಪ್ಪ ಅರುಟಗಿ, ವಿರೂಪಾಕ್ಷಪ್ಪಾ ಹೆಗಡೆ, ಶಿವಶಂಕ್ರಪ್ಪ ಸಾರಂಗಿ, ಬಸಪ್ಪ ಲಾಳ, ಪೌರತ್ವ ತರಬೇತಿ ಶಿಬಿರದ ಸಂಚಾಲಕಿ ಬಿ.ಎ.ನದಾಫ, ಉಪನ್ಯಾಸಕರಾದ ಡಾ.ಎಚ್.ಎಸ್.ಘಂಟಿ, ಎಸ್..ಟಿ.ಕಟ್ಟಿ, ವಿ.ಕೆ.ಬದಿ, ಎಸ್.ಸಿ.ಗದ್ದಿಗೌಡರ, ಬಿ.ಇಡಿ.ಪ್ರಥಮ ಹಾಗೂ ದ್ವೀತಿಯ ವರ್ಷದ ಪ್ರಶಿಕ್ಷಣಾರ್ಥಿಗಳು ಹಾಜರಿದ್ದರು.