ಇಂಡಿ

ಮತದಾನದ ಬಗ್ಗೆ ಜಾಗೃತಿ ಮೂಡಿಸಿ: ಪಿಡಿಓ ಬಬಲಾದ

ಮತದಾನದ ಬಗ್ಗೆ ಜಾಗೃತಿ ಮೂಡಿಸಿ: ಪಿಡಿಓ ಬಬಲಾದ
ಇಂಡಿ: ತಾಲೂಕಿನ ಹಿರೇರೂಗಿಯಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಜಾಗೃತಿ ಜಾಥಾ ನಡೆಯಿತು.

ಇಂಡಿ: ಮತದಾನ ಪ್ರತಿಯೊಬ್ಬರ ಹಕ್ಕಾಗಿದ್ದು, ಪ್ರತಿ ಹಳ್ಳಿಗಳಲ್ಲೂ ಮತದಾನದ ಬಗ್ಗೆ ಜಾಗೃತಿ ಮೂಡಿಸಿ ಪ್ರತಿಯೊಬ್ಬರೂ ತಮ್ಮ ಹಕ್ಕನ್ನು ಚಲಾಯಿಸುವಂತೆ ನಾವೆಲ್ಲರೂ ಕಾರ್ಯನಿರ್ವಹಿಸೋಣ ಎಂದು ಹಿರೇರೂಗಿ ಪಿಡಿಓ ಬಸವರಾಜ ಬಬಲಾದ ಹೇಳಿದರು. 

ಬುಧವಾರ ತಾಲೂಕಿನ ಹಿರೇರೂಗಿ ಗ್ರಾಮದಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಮತ್ತು ಗ್ರಾಮ ಪಂಚಾಯತ ವತಿಯಿಂದ ಹಾಗೂ ಕೆಬಿಎಸ್, ಕೆಜಿಎಸ್, ಯುಬಿಎಸ್ ಶಾಲೆಗಳ ಸಹಯೋಗದಲ್ಲಿ ಹಮ್ಮಿಕೊಂಡ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಜಾಗೃತಿ ಜಾಥಾ ಕಾರ‌್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. 

ಶಿಕ್ಷಕ ಸಂತೋಷ ಬಂಡೆ ಮಾತನಾಡಿ, ದೇಶದ ಬೆಳವಣಿಗೆ ಮತ್ತು ಭವಿಷ್ಯದ ದೃಷ್ಠಿಯಿಂದ ಮತದಾರರ ಪಾತ್ರ ಬಹುಮುಖ್ಯ. ಪ್ರಜಾಪ್ರಭುತ್ವದ ವ್ಯವಸ್ಥೆ ಉಳಿಯಲು ಮತದಾನ ಮುಖ್ಯವಾಗಿದ್ದು, ಪ್ರತಿ ವಿದ್ಯಾರ್ಥಿಯು ಹಳ್ಳಿಗಳಲ್ಲಿ ಮತದಾನದ ಬಗ್ಗೆ ತಿಳಿಹೇಳಬೇಕು. ಎಲ್ಲರೂ ಸಾಮಾಜಿಕವಾಗಿ ತಮ್ಮ ಕರ್ತವ್ಯನಿರ್ವಹಿಸಬೇಕು ಎಂದರು. 

ಗ್ರಾಮದಲ್ಲಿ ಮತದಾನದ ಬಗ್ಗೆ ಜಾಥಾ ಮೂಲಕ ಜಾಗೃತಿ ಮೂಡಿಸಲಾಯಿತು. 

ಗ್ರಾ.ಪಂ ಅಧ್ಯಕ್ಷ ರಾಜಶೇಖರ ಡಂಗಿ, ಸದಸ್ಯ ನಿಸಾರ್ ಅಹಮದ್ ಬಾಗವಾನ, ಇಬ್ರಾಹಿಂ ಬುಡಕಿ, ಮಾಜಿ ಉಪಾಧ್ಯಕ್ಷ ಜಗನ್ನಾಥ ಬಾರಸಾಕಳೆ, ಬಸವರಾಜ ತಳಕೇರಿ, ಶರಣು ನಾಟಿಕಾರ, ಸಚಿನ ಹೊಸೂರ, ಅನಿಲ ಪತಂಗಿ, ಸುರೇಶ ಅಂಕಲಗಿ, ಎ.ಎಂ. ಬೆದ್ರೇಕರ, ಶಿಕ್ಷಕ ಎಸ್ ಎಸ್ ಅರಬ, ಎಸ್ ಎಂ ಮಕಾನದಾರ, ಎಸ್ ಡಿ ಬಿರಾದಾರ, ವಿ.ವೈ. ಪತ್ತಾರ, ಸಾವಿತ್ರಿ ಸಂಗಮದ, ಜೆ.ಎಂ. ಪತಂಗಿ ಸೇರಿದಂತೆ ಅಂಗನವಾಡಿ, ಆಶಾ ಕಾರ್ಯಕರ್ತೆರು ಗ್ರಾಮಸ್ಥರು ಇದ್ದರು. 

ಸುದ್ದಿ ಓದಿ