ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ಜಾಗೃತಿ ಮೂಡಿಸಿ: ಹಿರೇಮಠ
ಇಂಡಿ: ಸರ್ಕಾರ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಬೆಳೆಯಲು ಸಾಕಷ್ಟು ಅನುಕೂಲತೆಗಳನ್ನು ಕಲ್ಪಿಸಿಕೊಟ್ಟಿದೆ. ಅವುಗಳ ಸದುಪಯೋಗಕ್ಕಾಗಿ ವಿದ್ಯಾರ್ಥಿ ಗಳಲ್ಲಿ ಶೈಕ್ಷಣಿಕ ಜಾಗೃತಿ ಕೂಡಾ ಮೂಡಿಸಬೇಕಿದೆ ಎಂದು ತಹಶೀಲ್ದಾರ ನಾಗಯ್ಯ ಹಿರೇಮಠ ಅಭಿಪ್ರಾಯಪಟ್ಟರು.
ಬುಧವಾರ ಪಟ್ಟಣದ ವಿಜಯಪುರ ರಸ್ತೆಯ ಶಂಕರಪಾರ್ವತಿ ಸಭಾ ಭವನದಲ್ಲಿ ದಲಿತ ಸಮನ್ವಯ ಸಮಿತಿ ಏರ್ಪಡಿಸಿದ್ದ ಶೈಕ್ಷಣಿಕ ಜಾಗೃತಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು.
ಇತ್ತೀಚೆಗೆ ವಿದ್ಯಾರ್ಥಿಗಳಲ್ಲಿ ಮೋಬೈಲ್ ಗೀಳು ಅಂಟಿಕೊಂಡಿದೆ. ಮೊಬೈಲ್ಗಳಿಂದ ವಿದ್ಯಾರ್ಥಿ ಗಳು ಹಾಳಾಗುತ್ತಿದ್ದಾರೆ. ಓದಿನ ಕಡೆಗೆ ಗಮನ ನೀಡುತ್ತಿಲ್ಲ. ಇದನ್ನು ತಪ್ಪಿಸಲು ವಿದ್ಯಾರ್ಥಿ ಗಳಿಗೆ ಆಗಾಗ ಶೈಕ್ಷಣಿಕ ಜಾಗೃತಿ ಕಾರ್ಯಕ್ರಮಗಳು ಅಗತ್ಯವಾಗವೆ ಎಂದ ಅವರು, ಈ ನಿಟ್ಟಿನಲ್ಲಿ ಇಂಡಿ ತಾಲ್ಲೂಕಿನ ತಾಲ್ಲೂಕು ದಲಿತ ಸಮನ್ವಯ ಸಮಿತಿ ಸಂಚಾಲಕ ಶಿವಾನಂದ ಮೂರಮನ ಅವರು ವಿದ್ಯಾರ್ಥಿ ಗಳಿಗಾಗಿ ಶೈಕ್ಷಣಿಕ ಜಾಗೃತಿ ಕಾರ್ಯಕ್ರಮಗಳನ್ನು ಮಾಡಿ, ವಿದ್ಯಾವಂತ ಮತ್ತು ಉನ್ನತ ಅಧಿಕಾರಿಗಳನ್ನು ಕಾರ್ಯಕ್ರಮಕ್ಕೆ ಕರೆಸಿ ವಿದ್ಯಾರ್ಥಿ ಗಳಲ್ಲಿ ಶೈಕ್ಷಣಿಕ ಜಾಗೃತಿ ಮೂಡಿಸುತ್ತಿದ್ದಾರೆ. ಈಗಾಗಲೇ ಇಂತಹ ಮೂರು ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಇದರ ಜೊತೆಗೆ ಸಾವಿತ್ರಿಬಾಯಿ ಪುಲೆ ಅಂತವರ ಜೀವನ ಚರಿತ್ರೆಯುಳ್ಳ ಪುಸ್ತಕಗಳ್ನುವಿದ್ಯಾರ್ಥಿ ಗಳಿಗೆ ಉಚಿತವಾಗಿ ನೀಡುತ್ತಿದ್ದಾರೆ, ಅವರ ಕಾರ್ಯ ಶ್ಲಾಘನೀಯ ಎಂದರು.
ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಸುನೀಲ ಮದ್ದೀನ ಮಾತನಾಡಿದರು.ಡಿಎಸ್ಎಸ್ ರಾಜ್ಯ ಸಂಚಾಲಕ ಅಡಿವೆಪ್ಪ ಸಾಲಗಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಇಂಡಿ ತಾಲ್ಲೂಕು ದಲಿತ ಸಮನ್ವಯ ಸಮಿತಿ ಸಂಚಾಲಕ ಶಿವಾನಂದ ಮೂರಮನ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಪುರಸಭೆಯ ಮುಖ್ಯಾಧಿಕಾರಿ ಕೆ. ಲಕ್ಷ್ಮೀಶ, ಶಿಕ್ಷಕಿ ಸಾವಿತ್ರಿ ಬಿರಾದಾರ, ವಾರ್ಡನ್ ಯಶೋಧಾ ಕುಕನೂರ, ದಲಿತ ಮುಖಂಡ ಸಂಜು ತೊರವಿ ಇದ್ದರು.
ಕಾರ್ಯಕ್ರಮದಲ್ಲಿದ್ದ ಸುಮಾರು 200 ವಿದ್ಯಾರ್ಥಿ ಗಳಿಗೆ ಸಾವಿತ್ರಿಬಾಯಿ ಪುಲೆ ಜೀವನ ಚರಿತ್ರೆಯುಳ್ಳ ಪುಸ್ತಕವನ್ನು ಉಚಿತವಾಗಿ ವಿತರಣೆ ಮಾಡಲಾಯಿತು.
ಸಮಾಜಕಲ್ಯಾಣಾಧಿಕಾರಿ ಬಿ.ಜೆ. ಇಂಡಿ ಸ್ವಾಗತಿಸಿದರು. ಶಿಕ್ಷಕ ಎಸ್.ಎಸ್.ಗೊರನಾಳ ವಂದಿಸಿದರು.