ಕಾಗವಾಡ

ತಾಲೂಕಿನಲ್ಲಿ ಕೊರೋನಾ ಸ್ಪೋಟ!

ತಾಲೂಕಿನಲ್ಲಿ ಕೊರೋನಾ ಸ್ಪೋಟ!

ಕಾಗವಾಡ 16: ತಾಲೂಕಿನ 47, ಅಥಣಿ ತಾಲೂಕಿನಲ್ಲಿ 99 ಹೀಗೆ 147 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಎಲ್ಲ ಕೊರೊನಾ ಸೋಂಕಿತರು ಯಾವುದೇ ಆಸ್ಪತ್ರೆಗಳಲ್ಲಿ ಉಪಚಾರಿಸಿಕೊಳ್ಳದೇ ಮನೆಯಲ್ಲಿಯೇ ಹೋಂ ಐಸೋಲೆಟ್‌ವಾಗಿದ್ದಾರೆಯೆಂದು ತಾಲೂಕಾ ಆರೋಗ್ಯಾಧಿಕಾರಿಗಳಾದ ಡಾ. ಬಸಗೌಡ ಕಾಗೆ ತಿಳಿಸಿದ್ದಾರೆ. 

ಕಳೇದ 7 ತಿಂಗಳಗಳಿಂದ ಕೊರೊನಾದಿಂದ ದೂರುಳಿದ ಕಾಗವಾಡ ಮತ್ತು ಅಥಣಿ ತಾಲ್ಲೂಕಿನಲ್ಲಿ ಮತ್ತೇ ಕೊರೊನಾ ಒಕ್ಕರಿಸಿದೆ. ಇದ್ದರಿಂದ ಜನರು ಮತ್ತೇ ಆತಂಕಕ್ಕೆ ಒಳಗಾಗಿದ್ದಾರೆ. 

ಕಾಗವಾಡ ತಾಲ್ಲೂಕಿನ ಉಗಾರ ಖುರ್ದ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ 22, ಮಂಗಸೂಳಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ 5, ಮೋಳೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 7, ಐನಾಪುರದಲ್ಲಿ 12 ಮತ್ತು ಕಾಗವಾಡದಲ್ಲಿ ಒಬ್ಬರಿಗೆ ಹೀಗೆ 47 ಜನರಿಗೆ ಸೋಂಕು ದೃಡಪಟ್ಟಿದೆ. ಈ ಎಲ್ಲ ಜನರು ಮನೆಯಲ್ಲಿಯೇ ಉಳಿದು ಉಪಚಾರಿಸಿಕೊಳ್ಳುತ್ತಿದ್ದಾರೆಯೆಂದು ಡಾ. ಬಸಗೌಡ ಕಾಗೆ ತಿಳಿಸಿದರು. 


ಸುದ್ದಿ ಓದಿ