ಕೊರೊನಾ ರೂಲ್ಸ್ ಬ್ರೇಕ್ ಮಾಡಿದವರ ಮೇಲೆ ಕ್ರಮ ಜರುಗಿಸಿರಿ: ಸಚಿವ ಶ್ರೀಮಂತ ಪಾಟೀಲ.
ಕಾಗವಾಡ 10: ರಾಜ್ಯದ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪಾ ಕೊರೊನಾ ಎರಡನೇ ಅಲೆ ತಡೆಗಟ್ಟಲು 14 ದಿನಗಳ ಲಾಕ್ಡೌನ್ ಘೋಷಣೆ ಮಾಡಿದ್ದಾರೆ. ಸರಕಾರ ನೀಡಿರುವ ಆದೇಶದ ಉಲ್ಲಂಘನೆ ಮಾಡುವರ ಮೇಲೆ ಕಟ್ಟುನಿಟ್ಟಿನ ಕ್ರಮ ಜರುಗಿಸಿರಿ ಎಂದು ಕಾಗವಾಡ ಕ್ಷೇತ್ರ ಶಾಸಕರು ಹಾಗೂ ರಾಜ್ಯದ ಜವಳಿ ಇಲಾಖೆ ಸಚಿವ ಶ್ರೀಮಂತ ಪಾಟೀಲ ಸೂಚನೆ ನೀಡಿದರು.
ಸೋಮವಾರ ರಂದು ಕಾಗವಾಡದ ವಿಶ್ರಾಂತಿಗೃಹದಲ್ಲಿ ಸಚಿವರು ಅಥಣಿ ಡಿವೈಎಸ್ಪಿ ಎಸ್.ವ್ಹಿ.ಗಿರೀಶ, ಸಿಪಿಐ ಶಂಕರಗೌಡ ಪಾಟೀಲ, ಕಾಗವಾಡ ಪಿಎಸ್ಐ ಹನುಮಂತ ಧರ್ಮಟ್ಟಿ ಇವರೊಂದಿಗೆ ಸಭೆ ನಡೆಸಿ ಬರುವ 10 ದಿನಗಳಲ್ಲಿ ಯಾವುದೇ ರೀತಿ ಅನಾವಶ್ಯಕವಾಗಿ ರಸ್ತೆ ಮೇಲೆ ಇಳಿಯುವರ ಮೇಲೆ ಕ್ರಮ ಜರುಗಿಸಿರಿ.
ಕೊರೊನಾ ಮಹಾಮಾರಿಯಲ್ಲಿ ಜನರು ಬಲಿಯಾಗಬಾರದು, ಕೊರೊನಾ ಚೇನ್ ಬ್ರೇಕ್ ಮಾಡಲು ನಿರ್ಣಯ ಕೈಗೊಂಡಿದ್ದಾರೆ. ಇದನ್ನು ಪ್ರತಿಯೊಬ್ಬರು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು. ಸರಕಾರದ ಆದೇಶದೊಂದಿಗೆ ಪ್ರತಿಯೊಬ್ಬರ ಜೀವ ಮುಖ್ಯವಾಗಿದೆ. ತಾವೇ ಸ್ವಯಂ ಪ್ರೇರಿತರಾಗಿ ಸಹಾಯ ಮಾಡಬೇಕು. ಅದನ್ನು ಬಿಟ್ಟು ಲಾಕ್ಡೌನ್ ಬ್ರೇಕ್ ಮಾಡುವರ ಮೇಲೆ ಕಟ್ಟುನಿಟ್ಟಿನ ಕ್ರಮ ಜರುಗಿಸಿರಿ ಎಂದು ಸೂಚನೆ ನೀಡಿದರು.