ಕಾಗವಾಡ

ಮೊರಾರ್ಜಿ ವಸತಿ ಶಾಲೆಯಲ್ಲಿ ಕೋವಿಡ್ ಕೇರ್ ಸೆಂಟರ್

ಮೊರಾರ್ಜಿ ವಸತಿ ಶಾಲೆಯಲ್ಲಿ ಕೋವಿಡ್ ಕೇರ್ ಸೆಂಟರ್

ಕಾಗವಾಡ 15: ಕಾಗವಾಡ ಮತಕ್ಷೇತ್ರ ವ್ಯಾಪ್ತಿಯಲ್ಲಿ ಈಗಾಗಲೇ 5 ಕೋವಿಡ್ ಸೆಂಟರ್ ಪ್ರಾರಂಭವಾಗಿದ್ದು ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಿಸುತ್ತಿದ್ದರಿಂದ ಮದಬಾವಿ ಮತ್ತು ಅನಂತಪುರ ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿಯ ಮದಬಾವಿಯ ಮೋರಾಜರ್ಿ ದೇಸಾಯಿ ವಸತಿನಿಲಯದಲ್ಲಿ 30 ಬೆಡ್ಗಳ ಕೋವಿಡ್ ಸೆಂಟರ್ಕ್ಕೆ ಜವಳಿ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಖಾತೆ ಸಚಿವ ಶ್ರೀಮಂತ ಪಾಟೀಲ ಇವರು ಚಾಲನೆ ನೀಡಿದರು.

ಶನಿವಾರದಂದು ಕಾಗವಾಡ ಮತಕ್ಷೇತ್ರದ ಅನಂತಪುರ ಮತ್ತು ಮದಬಾವಿ ಜಿಲ್ಲಾ ಎರಡು ಹೊಬಳಿಗಳು ಅಥಣಿ ತಾಲೂಕಾ ವ್ಯಾಪ್ತಿಯಲ್ಲಿ ಬರುತ್ತವೆ. ಸುಮಾರು 30 ಗ್ರಾಮಗಳ ಕೊರೊನಾ ಸೋಂಕಿತರಿಗೆ ಉಪಚಾರ ಪಡೆದುಕೊಳ್ಳಲು ಕೋವಿಡ್ ಸೆಂಟರ್ದ ಕೊರತೆಯಿತ್ತು. ಇಲ್ಲಿಯ ಸಾರ್ವಜನಿಕರ ಬೇಡಿಕೆ ಕಂಡು ಮದಬಾವಿಯಲ್ಲಿ ಕೋವಿಡ್ ಸೆಂಟರ್ ಪ್ರಾರಂಭಿಸಲಾಗಿದೆಯೆಂದು ಸಚಿವರು ಹೇಳಿದರು.

ಜವಳಿ ಇಲಾಖೆ ಸಚಿವ ಶ್ರೀಮಂತ ಪಾಟೀಲ ಮಾಹಿತಿ ನೀಡುವಾಗ, ಕೊರೊನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಇದನ್ನು ನಿಯಂತ್ರಣಕ್ಕೆ ತರಲು ಸರಕಾರ ಖಡಕ್ ಲಾಕ್ಡೌನ್ ಜಾರಿಗೆ ತಂದಿದೆ. ಕಟ್ಟುನಿಟ್ಟಾಗಿ ಎಲ್ಲ ಜನತೆ ಪಾಲನೆ ಮಾಡಬೇಕು. ಸಾಮಾಜಿಕ ಅಂತರ ಕಾಯ್ದುಕೊಂಡು, ಮಾಸ್ಕ್ ಧರಿಸಿ, ಪ್ರತಿಯೊಬ್ಬರು ನಿಮ್ಮ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿರಿಯೆಂದು ಜನರಿಗೆ ಸಲಹೆ ನೀಡಿದ್ದಾರೆ. ಕೊರೊನಾ ಬಗ್ಗೆ ಯಾವುದೇ ಲಕ್ಷಣಗಳು ಕಂಡಲ್ಲಿ ಆರೋಗ್ಯ ತಪಾಸಣೆ ಮಾಡಿಕೊಂಡು ಪ್ರಾಥಮಿಕ ಹಂತದಲ್ಲಿ ಉಪಚಾರಿಸಿಕೊಂಡರೆ ಇದು ಹತೋಟಿಯಲ್ಲಿ ಬರುತ್ತದೆ. ಕೊರೊನಾ ಬಗ್ಗೆ ಯಾರೂ ದುರ್ಲಕ್ಷ ಮಾಡಬೇಡಿ. ಈಗಾಗಲೇ ಅದರ ಕಹಿ ಅನುಭವ ಅನೇಕರು ಅನುಭವಿಸಿದ್ದಾರೆ. ಇಲ್ಲಿಯ ಕಾರ್ಯಕರ್ತರು ಕೊರೊನಾದ ಬಗ್ಗೆ ಕಾಳಜಿ ವಹಿಸಿ ಅಂಥಹ ರೋಗಿಗಳನ್ನು ಮದಬಾವಿ ಕೋವಿಡ್ ಸೆಂಟರ್ಕ್ಕೆ ದಾಖಲಿಸಿರಿ ಎಂದು ಸಚಿವರು ಹೇಳಿದರು.

ಅಥಣಿ ತಹಶೀಲ್ದಾರ ದುಂಡಪ್ಪಾ ಕೋಮಾರ ಇವರಿಗೆ ಸಚಿವರು ಅಥಣಿ ತಾಲೂಕಾ ವ್ಯಾಪ್ತಿಯಲ್ಲಿ ಬರುವ ಕಾಗವಾಡ ಮತಕ್ಷೇತ್ರ ಭಾಗವಾಗಿರುವ ಅನಂತಪುರ ಮತ್ತು ಮದಬಾವಿ ಭಾಗದಿಂದ ಕೋವಿಡ್ ಉಪಚಾರಕ್ಕೆ ಅಥಣಿ ಸರಕಾರಿ ಸೆಂಟರ್ಕ್ಕೆ ಬಂದಾಗ ಅವರನ್ನು ತಿರಸ್ಕರಿಸಬೇಡಿ. ಈಗಾಗಲೇ ಕೆಲವರು ಈ ಅನುಭವ ಕಂಡಿದ್ದಾರೆ. ಇವರಿಗೆ ಉಪಚಾರ ನೀಡಿರಿ ಎಂದು ಸಲಹೆ ನೀಡಿದರು.

ಕೋವಿಡ್ ಸೆಂಟರ್ ಉದ್ಘಾಟನಾ ಸಮಾರಂಭದಲ್ಲಿ ಪಕ್ಷದ ಕಾರ್ಯಕರ್ತರಾದ ಮಹಾದೇವ ಕೋರೆ, ರಾಮ ಸಡ್ಡಿ, ಡಿ.ಕೆ.ಪವಾರ, ಕೃಷ್ಣಾ ದೇಸಾಯಿ, ಡಿ.ಎಸ್.ಪಿ ಎಸ್.ವ್ಹಿ.ಗಿರೀಶ, ಸಿಪಿಐ ಶಂಕರಗೌಡ ಪಾಟೀಲ, ಪಿಎಸ್ಐ ಹಡಕರ, ಸೇರಿದಂತೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಾದ ಪ್ರವೀಣ ಪಾಟೀಲ, ಆರೋಗ್ಯ ಇಲಾಖೆಯ ಶ್ರವಣಕುಮಾರ, ನಾನಾಸಾಹೇಬ ಅವತಾಡೆ, ಸಚೀನ ದೇಸಾಯಿ, ಪ್ರಶಾಂತ ಅಪರಾಜ, ರಾಜು ಮಾನೆ, ದಾದಾ ಪಾಟೀಲ ಉಪಸ್ಥಿತರಿದ್ದರು.


ಸುದ್ದಿ ಓದಿ