ಇಂಡಿ

ಸಾರ್ವಜನಿಕರು ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಿ: ಸಿಂಧೆ

ಸಾರ್ವಜನಿಕರು ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಿ: ಸಿಂಧೆ
ಪಟ್ಟಣದ ಬಾರಪೇಟ ಗಲ್ಲಿಯಲ್ಲಿ ಹಮ್ಮಿಕೊಂಡ ಉಚಿತ ಲಸಿಕಾ ಅಭಿಯಾನಕ್ಕೆ ಕಂದಾಯ ಉಪವಿಭಾಗಧಿಕಾರಿ ರಾಹುಲ್ ಸಿಂಧೆ ಮಾತನಾಡಿ

ಇಂಡಿ17:  ದೇಶದ ಸಾರ್ವಜನಿಕರ ಪ್ರಾಣ ರಕ್ಷಣೆ ಸರಕಾರ ಕರ್ತವ್ಯವಾಗಿದ್ದು, ಸರಕಾರ ಸಾರ್ವಜನಿಕರ ಆರೋಗ್ಯ ಕಾಪಾಡಲು ಮತ್ತು ಪ್ರಾನ ಉಳಿಸಲು ಉಚಿತವಾಗಿ ಲಸಿಕೆ ನೀಡುತ್ತಿದೆ. ಸಾರ್ವಜನಿಕರು ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಕಂದಾಯ ಉಪವಿಭಾಗಾಧಿಕಾರಿ ರಾಹುಲ್ ಸಿಂಧೆ ಹೇಳಿದರು.

ಅವರು ಶುಕ್ರವಾರ ಪಟ್ಟಣದ ಬಾರಪೇಟ ಗಲ್ಲಿಯಲ್ಲಿ ಪಟ್ಟಣದ ಪುರಸಭೆ ಹಾಗೂ ತಾಲೂಕಾ ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡ ಕೋವಿಡ್- 19 ಉಚಿತ ಲಸಿಕಾ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದರು.

ಸಾರ್ವಜನಿಕರಿಗೆ ಲಸಿಕೆ ಹಾಕುವ ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತರು ಹಾಗೂ ಅಂಗನವಾಡಿ ಕಾರ್ಯಕರ್ತರು ಪ್ರಮುಖ ಪಾತ್ರವಹಿಸುತ್ತಿದ್ದಾರೆ. ಪಟ್ಟಣದ ವಾರ್ಡಗಳಲ್ಲಿ ಹಾಗೂ ಗ್ರಾಮೀಣ ಭಾಗದಲ್ಲಿ ಲಸಿಕೆಯ ಮಹತ್ವದ ಬಗ್ಗೆ ತಿಳುವಳಿಕೆ ನೀಡುವ ಕಾರ್ಯ ನಡೆದಿದ್ದು, ಲಸಿಕೆ ಹಾಕಿಸಿಕೊಳ್ಳುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.  ಲಸಿಕೆಯಿಂದ ಯಾವುದೇ ಅಡಪರಿಣಾಮವಿಲ್ಲ ಎಂದು ಜನರಿಗೆ ಮನವರಿಕೆ ಮಾಡಲಾಗುತ್ತಿದೆ ಎಂದರು.

ಲಸಿಕೆಯನ್ನು ಒಟ್ಟು ಎರಡು ಬಾರಿ ಹಾಕಿಸಿಕೊಳ್ಳಬೇಕಿದ್ದು ಪ್ರಥಮ ಲಸಿಕೆ ಹಾಕಿಸಿಕೊಂಡ ಕಾಲಾನಂತರ ಫಲಾನುಭವಿಗಳಿಗೆ ಕೈಕಾಲು ನೋವು, ಜ್ವರ ಬರಬಹುದು ಇದರ ಬಗ್ಗೆ ವೈದ್ಯರು ಯಾವ ಮಾತ್ರೆ ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಸರಿಯಾಗಿ ತಿಳಿಸಬೇಕೆಂದು ಆರೋಗ್ಯ ಇಲಾಖೆಯ ವೈದ್ಯರಿಗೆ ತಿಳಿಸಿದರು.    ತಾಲೂಕಾ ವೈಧ್ಯಾಧಿಕಾರಿ ಡಾ. ಅರ್ಚನಾ ಕುಲಕರ್ಣಿ, ತಾಲೂಕಾ ಸಾರ್ವಜನಿಕ ಆಸ್ಪತ್ರೆಯ ಮುಖ್ಯಾಧಿಕಾರಿ ಡಾ. ರಾಜಶೇಖರ್ ಕೋಳೆಕರ್,  ಪುರಸಭೆ ಮುಖ್ಯಾಧಿಕಾರಿ ಶಿವಾನಂದ ಪೂಜಾರಿ, ಬಿ.ವಾಯ್ ಪಾಟೀಲ, ಮೌಲಾನಾ ಸಾಜುದೀನ್ ಖಾಸ್ಮೀ, ಶ್ರೀಶೈಲ ಪೂಜಾರಿ, ಪುರಸಭೆ ಸದಸ್ಯ ಮುಸ್ತಾಕ ಇಂಡಿಕರ್, ಶಬ್ಬೀರ ಖಾಜಿ,  ಎಸ್.ಎಸ್ ಅಂಬಲಗಿ, ಎಲ್.ಎಸ್ ಸೋಮುನಾಯಕ, ಶಿಕ್ಷಕ ಎಸ್ ಬಿ ಕಲ್ಲೊಳ್ಳಿ, ಮುತ್ತು ಮುರಾಳ, ಬಿ.ಎಸ್ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಸುದ್ದಿ ಓದಿ