ಪರಿಸರ ಸೇವಾ ಸಮಿತಿಯ ವತಿಯಿಂದ ಅಭಿನಂದನೆ
ಹುಬ್ಬಳ್ಳಿ 08: ಸಾಹಿತ್ಯ-ಸಸ್ಯ ಸಂಭ್ರಮ- ಸಸ್ಯ ವಿಜ್ಞಾನ ಕುರಿತು ಸಾಹಿತ್ಯ ಕೃತಿಯ ರಚನೆಕಾರ, ಲೇಖಕ ಕನ್ನಡ ವಿಷಯದ ನಿವೃತ್ ಪ್ರಾಧ್ಯಾಪಕಿ ಡಾ. ಸ್ನೇಹಾ ವಿ. ಭೂಸನೂರ ಹಾಗೂ ಸಸ್ಯಶಾಸ್ತ್ರ ವಿಷಯದ ಉಪನ್ಯಾಸಕಿ ಡಾ. ಆಶಾ ಎನ್. ಬಗಾಡೆಕರ ಅವರಿಗೆ ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ, ಬಸವ ಪರಿಸರ ಸಂರಕ್ಷಣಾ ಸಮಿತಿಯ ವತಿಯಿಂದ ಗೌರವದಿಂದ ಆತ್ಮೀಯವಾಗಿ ಅಭಿನಂದಿಸಿದರು, ಅವರಿಂದ ಇನ್ನೂ ಹೆಚ್ಚು ಗ್ರಂಥಗಳು ರಚನೆಯಾಗಲಿ ಎಂದು ಶುಭ ಕೋರಿದರು.
ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ‌್ಯದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ, ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ, ಕನ್ನಡಪರ ಹೊರಾಟಗಾರ ವೆಂಕಟೇಶ ಮರೇಗುದ್ದಿ, ಡಾ. ಡಿ.ಆರ್.ಹಿರೇಗೌಡ್ರ, ದಾಕ್ಷಾಯಣಿ ಕೋಳಿವಾಡ, ಶಂಕರ ಕೊಳಿವಾಡ, ಚನ್ನಬಸಪ್ಪ ಧಾರವಾಡಶೆಟ್ಟರ, ಪ್ರೊ ಶೋಭಾ ಹಿತ್ತಲಮನಿ, ಡಾ. ಶೋಭಾ ಬಿರಾದಾರ, ಪ್ರೊ ಎಸ್.ಆರ್.ಆಶಿ, ಅನಸೂಯಾ ಅರಕೇರಿ, ವಿದ್ಯಾ ಲಿಂಗಶೆಟ್ಟರ, ಪ್ರೊ ಕೆ.ಎ.ದೊಡ್ಡಮನಿ, ಬಾಲಚಂದ್ರ ಜಾಬಶೆಟ್ಟಿ, ವಿರುಪಾಕ್ಷ ಭೂಸನೂರ, ಆನಂದ ಉಪ್ಪಿನ, ಪ್ರೊ ಶಿವಕುಮಾರ ಹಿರೇಮಠ, ಸುನಂದಾ ಶಾಗೋಟಿ, ಕುಂದಗೋಳ, ಮುಂತಾದವರು ಇದ್ದರು.